ಸತ್ಯ ಗೊತ್ತಾಗುವಷ್ಟರಲ್ಲಿ ಮಾನಹಾನಿ ಆಗಿರುತ್ತದೆ
ಮೈಸೂರು

ಸತ್ಯ ಗೊತ್ತಾಗುವಷ್ಟರಲ್ಲಿ ಮಾನಹಾನಿ ಆಗಿರುತ್ತದೆ

March 9, 2021

ಸುದ್ದಿ ಪ್ರಸಾರಕ್ಕೆ ತಡೆ ಕೋರಿ ಕೋರ್ಟ್ ಮೆಟ್ಟಿಲೇರಿದ ಸಹೋದ್ಯೋಗಿಗಳ
ಸಮರ್ಥಿಸಿಕೊಂಡ ಸಚಿವ ಸಿ.ಪಿ.ಯೋಗೇಶ್ವರ್

ಮೈಸೂರು,ಮಾ.8(ಪಿಎಂ)-ವಿಚಾರಣೆ ನಡೆದು ಸತ್ಯ-ಅಸತ್ಯ ಎಂಬುದು ಗೊತ್ತಾಗುವಷ್ಟರಲ್ಲಿ ದಿಢೀರ್ ಎಂದು ಪ್ರಸಾರವಾಗುವ ಸುದ್ದಿಗಳಿಂದ ವ್ಯಕ್ತಿತ್ವದ ತೇಜೋವಧೆ ಆಗಿ ಹೋಗಿರುತ್ತದೆ. ಹೀಗಾಗಿ ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆಂದು ಹೇಳುವ ಮೂಲಕ ಮಾನಹಾನಿ ಕರ ಸುದ್ದಿ ಪ್ರಸಾರ ತಡೆ ಕೋರಿ ಕೋರ್ಟ್ ಮೆಟ್ಟಿಲೇರಿದ ಸಚಿವರ ನಿಲುವನ್ನು ಸಚಿವ ಸಿ.ಪಿ.ಯೋಗೇಶ್ವರ್ ಸಮರ್ಥಿಸಿಕೊಂಡರು. ಮೈಸೂರಿನ ಶ್ರೀಗಣಪತಿ ಚ್ಚಿದಾನಂದ ಆಶ್ರಮದ ಆವರಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿನಿಮಾ ಹಿನ್ನೆಲೆಯಲ್ಲಿ ಬಂದಿರುವ ಕಾರಣ ದೃಶ್ಯಗಳನ್ನು ನಕಲು ಮಾಡುವುದನ್ನು ಹತ್ತಿರದಿಂದ ಕಂಡಿದ್ದೇನೆ. ತಂತ್ರಜ್ಞಾನ ಮೂಲಕ ದೃಶ್ಯಗಳನ್ನು ಹೇಗೆ ಬೇಕಾದರೂ ಮಾಡಬಹುದು. ಹೀಗಾಗಿ ಏನೂ ತಪ್ಪಿಲ್ಲದೇ ಎಲ್ಲಿ ಬಲಿಪಶು ಆಗುತ್ತೇವೋ ಎಂಬ ಕಾರಣಕ್ಕೆ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ  ತಿಕ್ರಿಯಿಸಿದರು. ಮಾಧ್ಯಮ ಗಳು ಶಕ್ತಿಶಾಲಿ. ಜನತೆ ಮಾಧ್ಯಮಗಳ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಮಾಧ್ಯಮಗಳು ಇಂತಹ ವಿಚಾರಗಳಿಗೆ ಆದ್ಯತೆ ನೀಡುವುದು ಬೇಡ. ಒಳ್ಳೆಯ ವಿಚಾರಕ್ಕೆ ಒತ್ತು ನೀಡಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿ ನಿರ್ಗಮಿಸಿದರು.

Translate »