ಅಲೋಪತಿಗಿಂತ ಹೋಮಿಯೋಪತಿ ಹೆಚ್ಚು ಸುರಕ್ಷಿತ
ಮೈಸೂರು

ಅಲೋಪತಿಗಿಂತ ಹೋಮಿಯೋಪತಿ ಹೆಚ್ಚು ಸುರಕ್ಷಿತ

March 9, 2021

ಮೈಸೂರು, ಮಾ.8(ಆರ್‍ಕೆಬಿ)- ತನ್ನನ್ನು ತಾನೇ ಸರಿಪಡಿಸಿಕೊಳ್ಳುವ ಅದ್ಭುತ ಶಕ್ತಿ ಹೊಂದಿರುವ ನಮ್ಮ ದೇಹಕ್ಕೆ ಹೋಮಿಯೋ ಪತಿ ಚಿಕಿತ್ಸೆ ಮೂಲಕ ಹೆಚ್ಚಿನ ಶಕ್ತಿಯನ್ನು ಪಡೆಯಬಹುದಾಗಿದೆ. ಆಲೋಪತಿಗಿಂತ ಸ್ವಲ್ಪ ಭಿನ್ನವಾಗಿದ್ದರೂ ಹೋಮಿಯೋಪತಿ ಚಿಕಿತ್ಸೆ ಹೆಚ್ಚು ಸುರಕ್ಷಿತ ಹಾಗೂ ಪರಿಣಾಮ ಕಾರಿಯಾದದ್ದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಂ ಅಭಿಪ್ರಾಯಪಟ್ಟರು.

ಮೈಸೂರಿನ ರೇಸ್‍ಕೋರ್ಸ್ ಬಳಿಯ ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಆಯುಷ್ ಇಲಾಖೆ, ಭಾರತೀಯ ಹೋಮಿಯೋಪತಿ ವೈದ್ಯ ಕೀಯ ಸಂಘದ ಮೈಸೂರು ಘಟಕ ಸಂಯುಕ್ತ ವಾಗಿ ಸೋಮವಾರ ಆಯೋಜಿಸಿದ್ದ ವಿಶ್ವ ಹೋಮಿಯೋಪತಿ ದಿನಾಚರಣೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹೋಮಿಯೋಪತಿಯಿಂದ ವ್ಯಕ್ತಿಯ ಸಾಮಾನ್ಯ ಆರೋಗ್ಯ ಸ್ಥಿತಿ ಸುಧಾರಿಸುತ್ತದೆ. ದೇಹವನ್ನು ಅದರ ಅತ್ಯುತ್ತಮ ಸಾಮಥ್ರ್ಯಕ್ಕೆ ತಕ್ಕಂತೆ ಉತ್ತೇಜಿಸುವ ಪರಿಹಾರಗಳನ್ನು ಸೂಚಿಸುತ್ತದೆ. ಇದು ದೇಹದಿಂದ ರೋಗ ಪೀಡಿತ ಜೀವಕೋಶಗಳು ಮತ್ತು ಅಂಗಾಂಶ ಗಳನ್ನು ಸ್ವಾಭಾವಿಕವಾಗಿ ನಿವಾರಿಸಿ ರೋಗದ ಮೂಲವನ್ನೇ ಇಲ್ಲವಾಗಿಸುವ ವಿಶಿಷ್ಟ ಪದ್ಧತಿಯೇ ಹೋಮಿಯೋಪತಿ ಎಂದರು.

ಕೃತಕ ರಾಸಾಯನಿಕಗಳನ್ನು ಬಳಸದೇ ದೇಹದ ನೈಸರ್ಗಿಕ ರೋಗ ನಿರೋಧಕ ಶಕ್ತಿಯನ್ನೇ ಬಳಸಿ ರೋಗಕ್ಕೆ ಚಿಕಿತ್ಸೆ ನೀಡ ಲಾಗುತ್ತದೆ. ಇದರಲ್ಲಿ ಅಡ್ಡ ಪರಿಣಾಮ ಗಳಿಲ್ಲ. ಎಲ್ಲಾ ಹೋಮಿಯೋಪತಿ ಔಷಧಿ ಗಳನ್ನು ಹವಾಮಾನ ಪರಿಸ್ಥಿತಿ, ಅಲರ್ಜಿ, ಒತ್ತಡದ ಅಂಶಗಳು, ಆಹಾರ ಪದ್ಧತಿ ಮತ್ತು ಜೀವನ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿರುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಹೋಮಿಯೋ ಪತಿ ಔಷಧ ಪದ್ಧತಿ ಮನುಷ್ಯನ ದೇಹ ದಲ್ಲಿ ಶಕ್ತಿಯನ್ನು ಉತ್ಪಾದಿಸಿ, ರೋಗ ನಿರೋ ಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಪರಿ ಣಾಮಕಾರಿಯಾಗಿದೆ. ವಿಶ್ವದಲ್ಲಿ 2ನೇ ಸ್ಥಾನ ಪಡೆದಿರುವ ಈ ಚಿಕಿತ್ಸೆಯನ್ನು ಅನೇಕ ರಾಷ್ಟ್ರಗಳು ಅಳವಡಿಸಿಕೊಂಡಿವೆ ಎಂದರು.

ಮೇಯರ್ ರುಕ್ಮಿಣಿ ಮಾದೇಗೌಡ ಅವರು ಹೋಮಿಯೋಪತಿಯ ಜನಕ ಡಾ.ಸಿ.ಎಫ್.ಸ್ಯಾಮುವೆಲ್ ಹಾನಿಮನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ದರು. ಇದೇ ಸಂದರ್ಭದಲ್ಲಿ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಅಕಾಡೆಮಿಕ್ ಅನದ ಅಡ್ಮಿನಿಸ್ಟ್ರೇ ಟಿವ್ ಟ್ರೈನಿಂಗ್ ಇನ್ಸ್‍ಟಿಟ್ಯೂಟ್‍ನ ನಿರ್ದೇ ಶಕ ಡಾ.ಆರ್.ಮುನೀರ್ ಅಹಮದ್, ಬೆಂಗಳೂರು ಬಯೋ-ಪ್ಲಾಸ್‍ಜೆನ್ಸ್ ಸೀನಿ ಯರ್ ಕನ್ಸಲ್ಟಿಂಗ್ ಹೋಮಿಯೋಪತಿ ಸಿಇಓ ಡಾ.ಎ.ಎಸ್.ನಾರಾಯಣ್, ಮೈಸೂರಿನ ಹೋಮಿಯೋಪತಿ ಚಿಕಿತ್ಸಕ ಡಾ.ಎಂ.ವೈ. ಪೆರಿ ರಾಜ್‍ಗೋಪಾಲ್, ಕನ್ನಡ ರಾಜ್ಯೋ ತ್ಸವ ಪ್ರಶಸ್ತಿ ಪುರಸ್ಕøತ ಡಾ.ಎ.ಎಸ್.ಚಂದ್ರ ಶೇಖರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯೆ ಛಾಯಾದೇವಿ, ಆಯುಷ್ ಇಲಾಖೆಯ ಹೋಮಿಯೋಪತಿ ಉಪನಿರ್ದೇಶಕ ಡಾ. ಹೆಚ್.ಜಿ.ಮಂಜುನಾಥ್‍ಕುಮಾರ್, ಭಾರ ತೀಯ ಹೋಮಿಯೋಪತಿ ವೈದ್ಯಕೀಯ ಸಂಘದ ರಾಜ್ಯ ಅಧ್ಯಕ್ಷ ಡಾ.ಮೈ.ವೈ.ಪೆರಿ ರಾಜ್ ಗೋಪಾಲ್, ಪ್ರಧಾನ ಕಾರ್ಯದರ್ಶಿ ಡಾ. ಆರ್.ಶಿವಕುಮಾರ್, ಸಂಘದ ಮೈಸೂರು ಘಟಕದ ಆಧ್ಯಕ್ಷ ಡಾ.ಎಂ.ಆರ್.ಕಾಂತರಾಜೇ ಅರಸ್, ಪ್ರಧಾನ ಕಾರ್ಯದರ್ಶಿ ಡಾ.ಕೆ. ಪೂರ್ಣಿಮಾ, ಸಂಘಟನಾ ಕಾಯದರ್ಶಿ ಡಾ.ಜೆ.ಬಿ.ಶ್ರೀನಾಥ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್.ಸೀತಾಲಕ್ಷ್ಮಿ ಇನ್ನಿ ತರರು ಉಪಸ್ಥಿತರಿದ್ದರು.

Translate »