ಮೈಸೂರು, ಮಾ.4-ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಕೂಡ ಸ್ವಾವಲಂಬಿಯಾಗಿ ಮಾಡುವ ಮಹ ತ್ತರ ಸೇವಾ ಮನೋಭಾವವನ್ನು ಹೊಂದಿ ರುವ ಸಂಸ್ಥೆಯಾಗಿದ್ದು, ಆ ಮುಖಾಂತರ ಜನÀಸೇವೆ ಮಾಡುವ ಅವಕಾಶವನ್ನು ಪಡೆದು ಜವಾಬ್ದಾರಿಗಳನ್ನು ಅರಿತು ಕೊಂಡು ಕರ್ತವ್ಯ ನಿರ್ವಹಿಸುವುದು ಕಾರ್ಯಕರ್ತರ ಮೂಲ ಧರ್ಮ ವಾಗಬೇಕು ಎಂದು ಶ್ರೀಕ್ಷೇತ್ರ ಧರ್ಮ ಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಮೈಸೂರಿನ ಕಳಸ್ತವಾಡಿಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಸಂಕಲ್ಪ ಸೌಧ ಸಭಾಂಗಣದಲ್ಲಿ ಮೈಸೂರು ಪ್ರಾದೇಶಿಕ ವಿಭಾಗದ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸೇವೆ ಮಾಡುತ್ತಿರುವ ಸಿಬ್ಬಂದಿಗಳಿಗೆ ಮಾರ್ಗ ದರ್ಶನ ನೀಡಿ ಅವರು ಮಾತನಾಡುತ್ತಿದ್ದರು.
ಭಾರತದ ಪ್ರಧಾನಿಯವರು ಆತ್ಮ ನಿರ್ಭರ ಕಾರ್ಯಕ್ರಮವನ್ನು ಆರಂಭಿಸಿರು ತ್ತಾರೆ. ಆದರೆ ಗ್ರಾಮಾಭಿವೃದ್ಧಿ ಯೋಜ ನೆಯೂ ಈ ಕಾರ್ಯಕ್ರಮವನ್ನು ಧರ್ಮ ಸ್ಥಳದಲ್ಲಿ 1982ರಲ್ಲೇ ಆರಂಭಿಸಿದೆ. ಸಮಾಜ ದಲ್ಲಿ ಕಡುಬಡತನ ಇದ್ದಂತಹ ಸಂದರ್ಭ ದಲ್ಲಿ ಜನ ಸಂಘಟನೆಯ ಮೂಲಕ ಪರ ಸ್ಪರ ಸಹಕಾರ ಮನೋಭಾವನೆಯನ್ನು ಮೂಡಿಸಿ, ಆ ಮೂಲಕ ಸ್ವಾವಲಂಬಿ ಸಮಾಜ ನಿರ್ಮಾಣಕ್ಕೆ ಒತ್ತು ನೀಡಲು ಗ್ರಾಮಾಭಿವೃದ್ಧಿ ಯೋಜನೆಯನ್ನು ಪ್ರಾರಂ ಭಿಸಲಾಯಿತು. ಪ್ರತಿಯೊಬ್ಬ ವ್ಯಕ್ತಿಯನ್ನು ಸ್ವಾವಲಂಬನೆಗೆ ಒಳಪಡಿಸುವುದು ನಮ್ಮ ಗುರಿಯಾಗಿತ್ತು ಎಂದರು.
ಜನರಲ್ಲಿ ಆರ್ಥಿಕ ವ್ಯವಹಾರದ ಶಿಸ್ತನ್ನು ಮೂಡಿಸಲು ಯೋಜನೆಯು ತನ್ನ ಪ್ರಗತಿ ನಿಧಿ ಕಾರ್ಯಕ್ರಮದ ಮುಖೇನ ಸಹಾಯ ಹಸ್ತವನ್ನು ನೀಡುತ್ತಿದೆ. ಇದಕ್ಕಾಗಿ ಬ್ಯಾಂಕು ಗಳಿಂದ ಸ್ವ-ಸಹಾಯ ಸಂಘದ ಸದಸ್ಯರು ಇದುವರೆಗೆ 8000 ಕೋಟಿ ರೂ. ಸಾಲ ಪಡೆ ದಿರುತ್ತಾರೆ. ಇದೀಗ ರೂ 2505 ಕೋಟಿ ರೂ. ಸಾಲ ಚಾಲ್ತಿಯಲ್ಲಿರುತ್ತದೆ. ಕಳೆ ದೊಂದು ವರ್ಷದಲ್ಲಿಯೇ ಸದಸ್ಯರು ರೂ. 1800 ಕೋಟಿ ರೂ. ಸಾಲವನ್ನು ಬ್ಯಾಂಕಿ ನಿಂದ ಪಡೆದುಕೊಂಡಿರುತ್ತಾರೆ. ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡುತ್ತಿದ್ದು, ಸಾಲಕ್ಕಾಗಿ ಸಂಘ ವಲ್ಲ-ಬದಲಾವಣೆಗಾಗಿ ಸಂಘವೆಂಬ ಮನೋಭಾವನೆ ಸ್ವ-ಸಹಾಯ ಸಂಘದ ಸದಸ್ಯರಲ್ಲಿ ಬಂದಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳಾದ ಡಿ. ಸುರೇಂದ್ರ ಕುಮಾರ್, ಶ್ರೇಯಸ್ ಕುಮಾರ್, ಪ್ರಾದೇ ಶಿಕ ನಿರ್ದೇಶಕರಾದ ಪಿ.ಗಂಗಾಧರ್ ರೈ, ಜಿಲ್ಲಾ ನಿರ್ದೇಶಕರಾದ ವಿ.ವಿಜಯ್ ಕುಮಾರ್ ನಾಗನಾಳ. ಪ್ರಸನ್ನಕುಮಾರ್, ವೀರೇಂದ್ರ ಹೆಗ್ಗಡೆಯವರ ಆಪ್ತ ಸಹಾ ಯಕರಾದ ವೀರುಶೆಟ್ಟಿ, ದಿನೇಶ್ ಪೂಜಾರಿ, ಯೋಜನಾಧಿಕಾರಿಗಳಾದ ಚಂದ್ರ ಶೇಖರ್, ಯು.ಎನ್.ಪ್ರೇಮಾನಂದ, ಸಾವಿತ್ರಿ, ನಂದಿನಿ ಶೇಟ್, ವಿಶಾಲಾ ಮಲ್ಲಾಪುರ, ಭಾಸ್ಕರ್, ಸದಾಶಿವ ಕುಲಾಲ್, ಗಣಪತಿ ಭಟ್, ರಮೇಶ್, ಸಂತೋಷ್, ದಿನೇಶ್, ರವಿಮಣಿ, ಚಂದ್ರಶೇಖರ್ ಮುಂತಾ ದವರು ಉಪಸ್ಥಿತರಿದ್ದರು.