ಶಕ್ತಿ, ಅರ್ಥ, ಸ್ವರೂಪ ಕಳೆದುಕೊಳ್ಳುತ್ತಿರುವ ಚಳವಳಿಗಳು
ಮೈಸೂರು

ಶಕ್ತಿ, ಅರ್ಥ, ಸ್ವರೂಪ ಕಳೆದುಕೊಳ್ಳುತ್ತಿರುವ ಚಳವಳಿಗಳು

May 14, 2022

ಮೈಸೂರು, ಮೇ ೧೩(ಎಂಟಿವೈ)- ಹಲವು ಕಾರಣಗಳಿಂದ ಚಳವಳಿಗಳು ಶಕ್ತಿ, ಅರ್ಥ ಮತ್ತು ಸ್ವರೂಪ ಕಳೆದುಕೊಂಡಿವೆ ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರ ಪ.ರಾ. ಕೃಷ್ಣಮೂರ್ತಿ ವಿಷಾದಿಸಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭÀವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆಯೋಜಿಸಿರುವ ೨ ದಿನಗಳ ರಾಷ್ಟç ಪುನರ್ ನಿರ್ಮಾಣಕ್ಕಾಗಿ ವಿದ್ಯಾರ್ಥಿ ಸಂಸ್ಕೃತಿ ಚಳವಳಿ- ೩ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ನಡೆಯುತ್ತಿದ್ದ ಚಳವಳಿಗೂ ಇಂದು ನಡೆಯು ತ್ತಿರುವ ಚಳವಳಿಗಳು ಬಹಳಷ್ಟು ವ್ಯತ್ಯಾವಿದೆ ಎಂದರು.

ಇಂದಿನ ಚಳವಳಿಗಳು ತನ್ನ ಮೂಲ ಸ್ವರೂಪ ಹಾಗೂ ಅರ್ಥವನ್ನೂ ಕಳೆದುಕೊಂಡಿವೆ. ಕಲ್ಲು ಎಸೆಯುವುದು, ಕತ್ತಿ ಮಸೆಯುವುದು, ಬೆಂಕಿ ಹಚ್ಚುವುದು, ಅನ್ಯಾಯ, ಅತ್ಯಾಚಾರ ಮಾಡುವುದೇ ಚಳವಳಿ ಸ್ವರೂಪವಾಗುತ್ತಿದೆ. ಇದರಿಂದ ಇಂದಿನ ಚಳವಳಿ ಎಂದರೆ ಜನರು ಭಯಭೀತರಾಗುತ್ತಿದ್ದಾರೆ. ನಮ್ಮ ದೇಶದಲ್ಲಿ ಚಳವಳಿಗೆ ಒಳ್ಳೆಯ ಇತಿಹಾಸ ಹಾಗೂ ದೊಡ್ಡ ಪರಂಪರೆಯಿದೆ. ದೇಶದಲ್ಲಿ ಭಕ್ತಿ ಚಳವಳಿ, ಅಹಿಂಸಾ ಚಳವಳಿ, ದೇಶ, ಸಂಸ್ಕೃತಿ ಕಟ್ಟಲು ಅನೇಕ ಚಳವಳಿಗಳು ನಡೆದಿವೆ. ಅವು ನಮಗೆ ಮಾದರಿಯಬೇಕು ಎಂದು ಅವರು ತಿಳಿಸಿದರು.

ಸÀಂಸ್ಕೃತಿ ನಿರ್ಮಾಣಕ್ಕೆ ಎಬಿವಿಪಿ ಚಳವಳಿ ಪ್ರಾರಂ ಭಿಸಿರುವುದು ಸಂತಸದ ವಿಚಾರ. ಸಮಾಜಕ್ಕೆ ಶಕ್ತಿ ಬರುವುದೇ ಸಂಸ್ಕೃತಿಯಿAದ. ಸಂಸ್ಕೃತಿ ಇಲ್ಲದ ಸಮಾಜ ಶವದಂತಾಗುತ್ತದೆ. ಸಂಸ್ಕೃತಿ ಇಲ್ಲದೆ ಇದ್ದರೆ ಉತ್ತಮ ದೇಶ ನಿರ್ಮಾಣ ಮಾಡಲು ಸಾಧ್ಯವಾಗುವುದಿಲ್ಲ. ಈ ಹಿಂದೆ ದೇಶ, ಸಮಾಜ ಕಟ್ಟಲು ಚಳವಳಿ ನಡೆ ಯುತ್ತಿದ್ದವು. ಚಳವಳಿಯನ್ನು ಒಳ್ಳೆಯ ವಿಷಯಕ್ಕೆ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ನಡೆಸಬೇಕು. ಇಂತಹ ಸಂಸ್ಕೃತಿಯಿAದ ಸಮಾಜಕ್ಕೆ ಶಕ್ತಿ ಬರುತ್ತದೆ. ಆದರೆ, ಕೆಲವು ದೇಶಗಳಲ್ಲಿ ಸಮಾಜ, ಸಂಸ್ಕೃತಿ, ಜೀವವೇ ಇಲ್ಲವಾಗಿದೆ. ಯಾವುದೇ ಒಂದು ಸಮಾಜಕ್ಕೆ ಸಂಸ್ಕೃತಿ ಬಹುಮುಖ್ಯವಾಗಿದ್ದು, ಒಂದು ವೇಳೆ ಅದು ಇಲ್ಲವಾದರೆ ಆ ಸಮಾಜವನ್ನು ಊಹಿಸಿಕೊಳ್ಳಲು ಅಸಾಧÀ್ಯ ಎಂದು ಕೃಷ್ಣಮೂರ್ತಿ ಹೇಳಿದರು.

ಒಂದು ದೇಶದ ಕಲೆಗಳು ಆ ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ. ಈ ಜವಾ ಬ್ದಾರಿಯನ್ನು ಹೊರದವರು ಯುವಕರೆನ್ನಿಸಿಕೊಳ್ಳ ಲಾರರು. ಯೌವ್ವನದಲ್ಲೇ ಸಾಧÀನೆ, ಒಳ್ಳೆಯ ವ್ಯಕ್ತಿತ್ವ ಕಟ್ಟಿಕೊಳ್ಳಬೇಕು. ಕಲೆಯು ವ್ಯಕ್ತಿತ್ವ ನಿರ್ಮಾಣದಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಕಲೆಯಿಂದಲೇ ಜೀವನ ಕಟ್ಟಿಕೊಳ್ಳಬಹುದು. ಪಠ್ಯಕ್ಕೆ ಮಾತ್ರವಲ್ಲದೇ ಕಲೆಗೂ ಬಹಳ ಮಹತ್ವ ನೀಡಿ ಎಂದು ಸಲಹೆ ನೀಡಿದರು.

ಎಬಿವಿಪಿ ರಾಷ್ಟಿçÃಯ ಕಲಾಮಂಚ್‌ನ ಸಂಚಾಲಕ ನಿರಂಜನ್ ಮಾತನಾಡಿ, ಜಗತ್ತಿನ ಬಹುದೊಡ್ಡ ಶಕ್ತಿ ಎಂದರೆ ಅದು ಸಂಸ್ಕೃತಿ. ಈ ಸಂಸ್ಕೃತಿ ಅಭಿವ್ಯಕ್ತ ಗೊಳ್ಳುವುದು ಕಲೆಗಳಿಂದ. ನಾವು ಮಾತಿನಿಂದ ಹೇಳಲಾಗದ್ದನ್ನು ಕಲೆಯ ಮೂಲಕ ಸ್ಪಷ್ಟವಾಗಿ ಹೇಳಬಹುದು. ಹಾಗಾಗಿಯೇ ಎಬಿವಿಪಿ ಶಾಲಾ-ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ವೇದಿಕೆಯನ್ನು ಒದಗಿಸುವ ಕೆಲಸ ಮಾಡುತ್ತಿದೆ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್ ಮಾತನಾಡಿ, ಮನುಷ್ಯನ ದೇಹದಿಂದ ಜೀವ ಹೊರಟು ಹೋದರೆ ದೇಹ ಕೊಳೆಯಲು ಆರಂಭಿಸುತ್ತದೆ. ದೇಹಕ್ಕೆ ಜೀವ ಎಷ್ಟು ಮುಖ್ಯವೋ ಅದೇ ರೀತಿ ದೇಶ, ಸಮಾಜ ಜೀವಂತ ವಾಗಿರಲು ಸಂಸ್ಕೃತಿ ಅತ್ಯಂತ ಮುಖ್ಯ. ಸಂಸ್ಕೃತಿ ಇಲ್ಲದೆ ಹೋದರೆ ದೇಶವೂ ಸಹ ಜೀವ ಇಲ್ಲದ ದೇಹದಂತಾಗುತ್ತದೆ. ಸ್ವಾಮಿ ವಿವೇಕಾನಂದರ ಆದರ್ಶ ಇಟ್ಟುಕೊಂಡು ಎಬಿವಿಪಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಇದು ವ್ಯಕ್ತಿತ್ವ ವಿಕಸನ, ರಾಷ್ಟç ನಿರ್ಮಾಣಕ್ಕೆ ತೊಡಗಿಸಿಕೊಂಡಿದೆ ಎಂದರು.

ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಕೊಳಲು ವಾದಕ ವಿದ್ವಾನ್ ಪ್ರವೀಣ್ ಗೋಡ್ಖಿಂಡಿ ಉದ್ಘಾಟಿಸಿ ದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್, ರಂಗಕರ್ಮಿ ಸಾಂಬಶಿವ ದಳವಾಯಿ, ರಾಷ್ಟಿçÃಯ ಕಲಾಮಂಚ್ ಸಂಚಾಲಕ ನಿರಂಜನ್, ಎಬಿವಿಪಿ ರಾಜ್ಯ ಕಾರ್ಯದರ್ಶಿ ಮಣ ಕಂಠ ಕಳಸ, ಪ್ರಾಂತ ಸಹ ಕಾರ್ಯದರ್ಶಿ ಐಶ್ವರ್ಯ ಇದ್ದರು.

Translate »