ನವೆಂಬರ್ ನಲ್ಲೇ ಬರಬಹುದಾದ ಚುನಾವಣೆಗೆ ಸಜ್ಜಾಗಿ…
ಮೈಸೂರು

ನವೆಂಬರ್ ನಲ್ಲೇ ಬರಬಹುದಾದ ಚುನಾವಣೆಗೆ ಸಜ್ಜಾಗಿ…

May 14, 2022

ಬೆಂಗಳೂರು, ಮೇ ೧೩(ಕೆಎಂಶಿ)- ಗುಜರಾತ್ ಹಾಗೂ ಹಿಮಾಚಲಪ್ರದೇಶ ರಾಜ್ಯಗಳ ಜತೆ ನವಂಬರ್‌ನಲ್ಲೇ ಕರ್ನಾ ಟಕ ವಿಧಾನಸಭಾ ಚುನಾವಣೆ ನಡೆಸಲು ಬಿಜೆಪಿ ಮುಂದಾಗಿದೆ. ಇದನ್ನು ಗಮನ ದಲ್ಲಿಟ್ಟುಕೊಂಡು ನಿಮ್ಮ ಆಂತರಿಕ ಕಚ್ಚಾಟ ಬಿಟ್ಟು ಚುನಾವಣೆಗೆ ಸಜ್ಜಾಗಿ ಎಂದು ಕಾಂಗ್ರೆಸ್ ವರಿಷ್ಠರು ರಾಜ್ಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

ರಾಜಾಸ್ತಾನದ ಉದಯಪುರದಲ್ಲಿ ಆರಂಭ ವಾಗಿರುವ ಕಾಂಗ್ರೆಸ್ ಪಕ್ಷದ ಮೂರು ದಿನದ ರಾಷ್ಟಿçÃಯ ಕಾರ್ಯಾಗಾರದ ಮೊದಲ ದಿನವೇ ಬಿಡುವು ಮಾಡಿಕೊಂಡು ಕರ್ನಾ ಟಕ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಶಾಸಕ ಕೃಷ್ಣಭೈರೇ ಗೌಡ ಸೇರಿದಂತೆ ಆಯ್ದ ಮುಖಂಡರ ಸಭೆ ನಡೆಸಿ, ಅವಧಿಗೂ ಮುನ್ನ ಕರ್ನಾಟಕ ದಲ್ಲಿ ಚುನಾವಣೆ ನಡೆಯಲಿದೆ ಎಂದಿದ್ದಾರೆ.

ಒಂದಲ್ಲಾ ಒಂದು ಕಾರಣಕ್ಕೆ ಸಿದ್ದ ರಾಮಯ್ಯ ಮತ್ತು ಶಿವಕುಮಾರ್ ನಡುವೆ ನಡೆಯುತ್ತಿರುವ ಆಂತರಿಕ ಕಲಹ ಆ ಪಕ್ಷ ಸಂಘಟನೆ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇದನ್ನು ರಾಜ್ಯ ಬಿಜೆಪಿ ಸರ್ಕಾರ ಲಾಭವಾಗಿ ಪಡೆದುಕೊಳ್ಳುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ರಾಜ್ಯ ನಾಯಕರಲ್ಲಿರುವ ಅಸಮಾಧಾನ ತಪ್ಪಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತು ವಾರಿ ಹೊಣೆ ಹೊತ್ತ ರಣದೀಪ್ ಸಿಂಗ್ ಸುರ್ಜೇವಾಲಾ, ರಾಜ್ಯ ಸಭೆಯ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂದಿಟ್ಟು ಕೊಂಡು ಸಭೆ ನಡೆಸಿದರು. ಕರ್ನಾಟಕದಲ್ಲಿ ಅವಧಿ ಪೂರ್ವ ಚುನಾವಣೆ ನಡೆಸುವ ಯಾವ ಕುರುಹನ್ನು ಬಿಜೆಪಿ ನೀಡದಿದ್ದರೂ ಅದಕ್ಕೆ ಸಂಬAಧಿಸಿದAತೆ ರಹಸ್ಯವಾಗಿ ಸಿದ್ಧತೆ ನಡೆಸಿದ್ದು, ಇದನ್ನು ಯಾವ ಕಾರಣಕ್ಕೂ ಲಘುವಾಗಿ ಪರಿಗಣ ಸಬಾರದು ಎಂದು ವರಿಷ್ಠರು ಎಚ್ಚರಿಕೆ ನೀಡಿದ್ದಾರೆ.

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ದಲ್ಲಿ ಈ ವರ್ಷ ನವಂಬರ್ ವೇಳೆಗೆ ವಿಧಾನ ಸಭೆ ಚುನಾವಣೆಗಳು ನಡೆಯಲಿದ್ದು ಅದೇ ಕಾಲಕ್ಕೆ ಕರ್ನಾಟಕದಲ್ಲೂ ವಿಧಾನಸಭಾ ಚುನಾವಣೆ ನಡೆಸುವುದು ಬಿಜೆಪಿಯ ಲೆಕ್ಕಾಚಾರ. ಎದುರಾಳಿ ಪಕ್ಷ ಸನ್ನದ್ಧ ಸ್ಥಿತಿ ಯಲ್ಲಿ ಇಲ್ಲದೆ ಇರುವಾಗ ಇದ್ದಕ್ಕಿದ್ದಂತೆ ರಣಾಂಗಣಕ್ಕಿಳಿದು ಗಾಬರಿ ಪಡಿಸುವುದು ಬಿಜೆಪಿಯ ತಂತ್ರ. ಹೀಗಾಗಿ ಯಾವ ಕಾರಣ ಕ್ಕೂ ಈ ಅಂಶವನ್ನು ಬಳಸಿಕೊಳ್ಳಲು ಸಜ್ಜಾಗಿ ಎಂದು ಡಿಕೆಶಿ ಹಾಗೂ ಸಿದ್ದ ರಾಮಯ್ಯ ಅವರಿಗೆ ಸೂಚನೆ ನೀಡಲಾಗಿದೆ.

ಕರ್ನಾಟಕದಲ್ಲಿ ಪ್ರತಿ ದಿನ ಮುಖಂಡರ ನಡುವೆ ಮುಸುಕಿನ ಗುದ್ದಾಟ ನಡೆಯು ತ್ತಿರುವ ಕುರಿತು ಹೈಕಮಾಂಡ್‌ಗೆ ಹಲವು ದೂರುಗಳು ಬಂದಿವೆ. ಹಿರಿಯ ನಾಯಕ ಎಂ.ಬಿ.ಪಾಟೀಲ್ ಮತ್ತು ಮಾಜಿ ಸಂಸದೆ ರಮ್ಯಾಗೆ ಸಂಬAಧಿಸಿದ ಹೇಳಿಕೆಗಳು ಇದಕ್ಕೆ ಉದಾಹರಣೆಗಳಷ್ಟೇ. ನೀವಿಬ್ಬರೂ ಪರಸ್ಪರ ಒಗ್ಗೂಡದೆ ಇದ್ದರೆ,
ಉಳಿದ ನಾಯಕರು ಬಹಿರಂಗವಾಗಿ ಗುದ್ದಾಡತೊಡಗುತ್ತಾರೆ. ಇದರ ಲಾಭ ಆಡಳಿತಾರೂಢ ಬಿಜೆಪಿಗೆ ದೊರೆಯಲಿದೆ ಎಂದು ವರಿಷ್ಠರು ಈ ನಾಯಕರಿಗೆ ಎಚ್ಚರಿಸಿದ್ದಾರೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷರು ಕೇವಲ ತಮಗಾಗದ ಬಿಜೆಪಿ ನಾಯಕರ ವಿರುದ್ಧ ಹೋರಾಟ ಮಾಡುತ್ತಾರೆ. ರಮೇಶ್ ಜಾರಕಿಹೊಳಿ, ಕೆ.ಎಸ್.ಈಶ್ವರಪ್ಪ ಮತ್ತು ಈಗ ಡಾ.ಅಶ್ವಥ್ಥ ನಾರಾಯಣ್ ಅವರ ವಿರುದ್ಧ ವೈಯಕ್ತಿಕ ಕಾರಣಗಳ ಮುಂದಿಟ್ಟುಕೊAಡು ದಾಳಿ ಮಾಡುತ್ತಿರುವ ಅವರು ಸರ್ಕಾರದ ಉಳಿದ ಮಂತ್ರಿಗಳ ಬಗ್ಗೆ ಚಕಾರ ಎತ್ತುತ್ತಿಲ್ಲ.

ನಲವತ್ತು ಪರ್ಸೆಂಟ್ ಕಮೀಷನ್ನಿನ ಆರೋಪ ಸರ್ಕಾರದ ವಿರುದ್ಧ ಕೇಳಿ ಬಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆ ಕೇಳುವ ಕೆಲಸವಾಗ ಬೇಕಿತ್ತು. ಇದೇ ರೀತಿ ಸರ್ಕಾರದ ಹಲವು ಸಚಿವರ ವಿರುದ್ಧ ಆರೋಪಗಳಿವೆ. ಆದರೆ ಇಂತಹವರ ವಿರುದ್ಧ ಅಧ್ಯಕ್ಷರು ಪರಿಣಾಮಕಾರಿಯಾಗಿ ಹೋರಾಟ ನಡೆಸುತ್ತಿಲ್ಲ ಎಂಬ ದೂರುಗಳು ಬಂದಿದ್ದು ಈ ಅಂಶವನ್ನು ಮನಸ್ಸಿನಲ್ಲಿಟ್ಟುಕೊಳ್ಳಿ ಎಂದು ವರಿಷ್ಠರು ರಾಜ್ಯ ಅಧ್ಯಕ್ಷರಿಗೆ ಸೂಚಿಸಿದ್ದಾರೆ. ಕಾರ್ಯತಂತ್ರ ರೂಪಿಸಿ, ಪಕ್ಷದ ಕಾರ್ಯಕರ್ತರಲ್ಲಿ ಆತ್ಮಸ್ಥೆöÊರ್ಯ ತುಂಬುವ ಕೆಲಸ ಮಾಡಿ ಎಂದು ವರಿಷ್ಠರು ಸಲಹೆ ಮಾಡಿದ್ದಾರೆ.

 

Translate »