ಇಬ್ಬರ ಜಗಳದಲ್ಲಿ ಮುಡಾ ಅಲ್ಲ.. ಸಾರ್ವಜನಿಕರು ಬಡವಾದ್ರು…!!
ಮೈಸೂರು

ಇಬ್ಬರ ಜಗಳದಲ್ಲಿ ಮುಡಾ ಅಲ್ಲ.. ಸಾರ್ವಜನಿಕರು ಬಡವಾದ್ರು…!!

May 14, 2022

ಮೈಸೂರು, ಮೇ ೧೩ (ಆರ್‌ಕೆ)- ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಸಭೆ ರದ್ದಾಗಿದೆ. ಇದರೊಂದಿಗೆ ಕಳೆದ ೯ ತಿಂಗಳಿAದ ಮುಡಾ ಸಭೆ ನಡೆಯದೇ ಸಾರ್ವಜನಿಕ ಅಭಿವೃದ್ಧಿ ಕಾರ್ಯ ನೆನೆಗುದಿಗೆ ಬಿದ್ದಿದೆ.

ಶಿಕ್ಷಕರ ಕ್ಷೇತ್ರ ಹಾಗೂ ದಕ್ಷಿಣ ಪದವೀಧರರ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ಚುನಾವಣಾ ಆಯೋಗವು ಗುರುವಾರ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ್ದು, ನೀತಿಸಂಹಿತೆ ಜಾರಿಗೆ ಬಂದಿರುವುದರಿAದ ಇಂದು ನಿಗದಿಯಾಗಿದ್ದ ಮುಡಾ ಸಾಮಾನ್ಯ ಸಭೆಯನ್ನು ರದ್ದುಪಡಿಸಲಾಗಿದೆ.

೨೦೨೧ರ ಆಗಸ್ಟ್ ೨೭ರಂದು ನಡೆದ ಸಭೆಯೇ ಕಡೆಯದಾಗಿದ್ದು, ತದನಂತರ ಮುಡಾ ಅಧ್ಯಕ್ಷರು ಹಾಗೂ ಹಿಂದಿನ ಆಯುಕ್ತರ ನಡುವಿನ ಶೀತಲ ಸಮರದಿಂದಾಗಿ ಸಭೆಗಳೇ ನಡೆಯಲಿಲ್ಲ. ಪರಿಣಾಮ ಪ್ರಾಧಿಕಾರದಲ್ಲಿ ಯಾವುದೇ ನಿರ್ಣಯಗಳಾಗದೇ ಅದೆಷ್ಟೋ ಸಾರ್ವಜನಿಕ ಕಾರ್ಯಗಳು, ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನವಾಗಲಿಲ್ಲ.

ಕರ್ನಾಟಕ ನಗರಾಭಿವೃದ್ಧಿ ಕಾಯ್ದೆ ಪ್ರಕಾರ ಪ್ರತೀ ೩ ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಬಡಾವಣೆ ರಚಿಸಿ, ಅರ್ಜಿ ಹಾಕಿ ಹಲವು ವರ್ಷಗಳಿಂದ ಕಾದಿರುವ ಆಕಾಂಕ್ಷಿಗಳಿಗೆ ನಿವೇಶನ ಹಂಚಿಕೆ ಮಾಡುವುದು, ಕಾಲ ಕಾಲಕ್ಕೆ ವಸತಿ ಯೋಜನೆ ಗಳನ್ನು ಜಾರಿಗೊಳಿಸಿ ಆಶ್ರಯ ಕಲ್ಪಿಸುವುದು, ಹಂಚಿಕೆಯಾಗಿರುವ ನಿವೇಶನಗಳ ನಾಗರಿಕ ಸಮಸ್ಯೆ ನಿವಾರಣೆ ಮುಡಾದ ಪ್ರಮುಖ ಉದ್ದೇಶ ವಾಗಿದ್ದರೂ ನಾನಾ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಯಾವುದೂ ನೆರವೇರುತ್ತಿಲ್ಲ. ಸಭೆ ನಡೆದಾಗಲೂ ಕೇವಲ ಖಾಸಗಿ ಬಡಾವಣೆಗಳಿಗೆ ನಕ್ಷೆ ಅನುಮೋದನೆ ಮಾಡಿಕೊಟ್ಟು
ನಿವೇಶನ ಬಿಡುಗಡೆ ಮಾಡುವುದು, ಖಾತೆ ನೋಂದಣ , ಖಾತಾ ವರ್ಗಾವಣೆ, ತುಂಡು ಭೂಮಿ ಹಂಚಿಕೆ, ಬದಲಿ ನಿವೇಶನ ಮಂಜೂರು, ಕ್ರಯ ಪತ್ರ ನೀಡುವುದೂ ಸೇರಿದಂತೆ ಖಾಸಗಿ ಡೆವಲಪರ್‌ಗಳು, ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಅನುಕೂಲ ಮಾಡಿಕೊಡುವ ವಿಷಯಗಳೇ ಚರ್ಚೆಗೆ ಬರುತ್ತಿವೆಯೇ ಹೊರತು ಮುಡಾ ಅಭಿವೃದ್ಧಿ ಯೋಜನೆಗಳಾಗಲೀ, ಸಾರ್ವಜನಿಕರಿಗೆ ಪ್ರಯೋಜನವಾಗುವ ವಿಷಯಗಳು ಚರ್ಚೆಗೆ ಬರುತ್ತಿಲ್ಲ.
೨೦೨೧ರ ಆಗಸ್ಟ್ ೨೭ರಂದು ನಡೆದ ಸಭೆಯಲ್ಲಿ ಒಂದೇ ದಿನ ಸುಮಾರು ೬೦೦ ವಿಷಯಗಳನ್ನು ಮಂಡಿಸಲಾಗಿತ್ತು. ಆ ಪೈಕಿ ಶೇ. ೮೦ರಷ್ಟು ವಿಷಯಗಳು ನಗರ ಯೋಜನಾ ಶಾಖೆ (ಖಿPಒ) ಗಳಿಗೆ ಸಂಬAಧಿಸಿದ ಬಡಾವಣೆಗಳ ನಕ್ಷೆ ಅನುಮೋದನೆ, ನಿವೇಶನ ಬಿಡುಗಡೆ, ಖಾತಾ ವರ್ಗಾವಣೆಯಂತಹ ವಿಷಯಗಳಿಗೆ ೯ ತಿಂಗಳ ಹಿಂದೆ ನಡೆದಂತಹ ಸಭೆಯಲ್ಲಿ ಅನುಮೋದನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

೨೦೨೨ರ ಮಾರ್ಚ್ ೩೧ರಂದು ಪ್ರಸಕ್ತ ಸಾಲಿನ ಆಯವ್ಯಯ ಸಭೆ ನಡೆಸಿದ್ದನ್ನು ಹೊರತುಪಡಿಸಿದರೆ, ಈ ವರ್ಷ ಒಂದೇ ಒಂದು ಸಭೆಯನ್ನು ಮುಡಾ ಮಾಡಿಲ್ಲ. ಪರಿಣಾಮ ವಸಂತ ನಗರ, ಲಾಲ್ ಬಹದ್ದೂರ್ ಶಾಸ್ತಿç ನಗರ, ಶಾಂತವೇರಿ ಗೋಪಾಲ ಗೌಡ ನಗರ ಬಡಾವಣೆಗಳ ೩೦೦೦ ನಿವೇಶನಗಳಿಗೆ ಟೈಟಲ್ ಡೀಡ್ ಕೊಡುವ ಪ್ರಸ್ತಾವನೆ ನೆನೆಗುದಿಗೆ ಬಿದ್ದಿತ್ತಲ್ಲದೇ, ನಾಗರಿಕ ಸೌಲಭ್ಯ (ಸಿಎ) ನಿವೇಶನ ಹಂಚಿಕೆ ಗುಂಪು ಮನೆ ನಿರ್ಮಾಣ, ಒಂದೇ ಬಾರಿಗೆ ಕಾಮಗಾರಿ ಪೂರ್ಣಗೊಳಿಸುವುದು (ಒನ್ ಟೈಮ್ ಮೆಸರ್ಸ್) ಇಂತಹ ನೂರಾರು ಕೋಟಿ ರೂ.ಗಳ ಸಾರ್ವಜನಿಕ ಯೋಜನೆಗಳು ಮತ್ತಷ್ಟು ವಿಳಂಬವಾಗಲಿವೆ.

ಮುಡಾ ವ್ಯಾಪ್ತಿಯಲ್ಲಿರುವ ಮೂಲೆ ಮತ್ತು ಮಧ್ಯಂತರ ನಿವೇಶನ, ಮನೆಗಳನ್ನು ಹರಾಜು ಮೂಲಕ ಮಾರಾಟ ಮಾಡಿ ಅದರಿಂದ ಬರುವ ಹಣದಲ್ಲಿ ಪ್ರಾಧಿಕಾರದ ಖರ್ಚು- ವೆಚ್ಚ ನಿರ್ವಹಣೆ ಮಾಡಲಾಗುತ್ತಿದೆಯೇ ಹೊರತು ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ. ನಿವೇಶನಗಳೆಲ್ಲವೂ ಹರಾಜಿನಲ್ಲಿ ಮಾರಾಟವಾದರೆ ನಂತರ ಆದಾಯದ ಮೂಲ ಬಂದಾದರೆ, ಮುಡಾ ಮುಚ್ಚುವ ಪರಿಸ್ಥಿತಿ ಎದುರಾದರೂ ಅಚ್ಚರಿಯಿಲ್ಲ. ಹಾಗಾದಲ್ಲಿ ಮುಡಾ ಕೇವಲ ಯೋಜನಾ ಪ್ರಾಧಿಕಾರವಾಗಿ ಮಾತ್ರ ಉಳಿಯಬೇಕಾಗುತ್ತದೆ. ವಸತಿ, ಇಂಜಿನಿಯರಿAಗ್, ಭೂ ಸ್ವಾಧೀನ, ಎಸ್ಟಾಬ್ಲಿಷ್‌ಮೆಂಟ್ ಸೆಕ್ಷನ್‌ಗಳು, ವ

Translate »