ಮೈಸೂರು, ಮೇ 29-ರಾಜ್ಯದಲ್ಲಿ ಪರಿವಾರ ಮತ್ತು ತಳವಾರ ಸಮು ದಾಯ ಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಗೊಳಿಸಿ ಗೆಜೆಟ್ ಅಧಿಸೂಚನೆ ಹೊರಡಿಸ ಬೇಕೆಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಜಲ ಸಂಪ ನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಾಮರಾಜನಗರಕ್ಕೆ ಬಂದಿದ್ದ ವೇಳೆ ಪರಿವಾರ ಮತ್ತು ತಳವಾರ ಸಮು ದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಗೊಳಿಸುವುದಾಗಿ ನೀಡಿದ್ದ ಭರವಸೆ ಯಂತೆ ರಾಜ್ಯಸಭೆ ಮತ್ತು ಲೋಕಸಭೆ ಯಲ್ಲಿ ಕನಾಟಕದ ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ಮಸೂದೆಗೆ ಅಂಗೀ ಕಾರ ದೊರೆತು 2020ರ ಮಾ.19ರಂದು ಈ ಸಂಬಂಧ ಕೇಂದ್ರದ ಗೆಜೆಟ್ ಅಧಿ ಸೂಚನೆ ಹೊರಡಿಸಲಾಗಿದೆ ಎಂದು ಅವರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
2020-21ನೇ ಶೈಕ್ಷಣಿಕ ವರ್ಷ ಆರಂಭ ವಾಗಿದ್ದು, ಮಕ್ಕಳ ಶಾಲಾ ಪ್ರವೇಶಾತಿ ಹಾಗೂ ಇತರ ಸರ್ಕಾರದ ಸವಲತ್ತಿಗಾಗಿ ಜಾತಿ ಪ್ರಮಾಣಪತ್ರ ಸಲ್ಲಿಸುವುದು ಅತ್ಯ ವಶ್ಯಕವಾಗಿರುವುದರಿಂದ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಸದರಿ ವಿಷಯ ವನ್ನು ಪ್ರಸ್ತಾಪಿಸಿ ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ಮಸೂದೆಗೆ ಅಂಗೀ ಕಾರ ನೀಡಿ ರಾಜ್ಯ ಗೆಜೆಟ್ ಅಧಿಸೂಚನೆ ಹೊರಡಿಸಬೇಕೆಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.