ಮೈಸೂರು, ಸೆ.13 (ವೈಡಿಎಸ್)- ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಬಂದ ದಾರಿಯನ್ನು ಎಂದಿಗೂ ಮರೆಯ ಬಾರ ದಂತೆ. ಇದಕ್ಕೆ ಅನ್ವರ್ಥಕ ಎಂಬಂತೆ ಮೈಸೂರಿನ ಮಾಡೆಲ್‍ವೊಬ್ಬರು ಅಂತರರಾಷ್ಟ್ರೀಯ ಮಟ್ಟದ ಫ್ಯಾಷನ್ ಶೋನಲ್ಲಿ ಮಿಂಚಿ `ಮಿಸ್ಟರ್ ಏಷ್ಯಾ’ ಆಗಿ ಹೊರ ಹೊಮ್ಮಿದರೂ ಎಲ್ಲಾ ಹಿರಿಮೆ ಗಳನ್ನು ಬದಿಗೊತ್ತಿ ತಮ್ಮ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ದೇವನೂರು ನಿವಾಸಿ ರೈತ ಚಿನ್ನಬುದ್ದಿ ಮತ್ತು ರೇಣುಕಾ ದಂಪತಿ ಪುತ್ರ ನಾಗೇಶ್, ನೇಪಾಳದ ಕಠ್ಮಂಡು ವಿನಲ್ಲಿ ಮಂಜರಿ ನೇಪಾಳ್ ಪ್ರೈ.ಲಿ ವತಿ ಯಿಂದ 2020ರ ಜ.31ರಿಂದ ಫೆ.7ರವ ರೆಗೆ ಆಯೋಜಿಸಿದ್ದ ಮಿಸ್ಟರ್ ಏಷ್ಯಾ-2020, ಮಿಸ್ಟರ್ ಏಷ್ಯಾ ಅಡ್ವೆಂಚರ್-2020 ಮತ್ತು ಮಿಸ್ಟರ್ ಏಷ್ಯಾ ಸೌತ್ ಇಂಡಿಯಾ ಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಈ ಮೂರು ವಿಭಾಗಗಳಲ್ಲೂ ಪ್ರಶಸ್ತಿ ಗಳಿಸುವ ಮೂಲಕ ಅಂತರರಾಷ್ಟ್ರೀಯ ಮಾಡೆಲ್ ಆಗಿ ಹೊರಹೊಮ್ಮಿದ್ದಾರೆ.
ಜತೆಗೆ ಹಲವು ಫ್ಯಾಷನ್ ಶೋಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಆದರೆ, ಲಾಕ್‍ಡೌನ್‍ನಿಂದಾಗಿ ಯಾವುದೇ ಚಟು ವಟಿಕೆಗಳು ನಡೆಯದೆ ಎಲ್ಲಾ ಕ್ಷೇತ್ರಗಳು ಬಂದ್ ಆಗಿದ್ದವು. ಈ ವೇಳೆ ನಾಗೇಶ್, ಎಲ್ಲ ಹಿರಿಮೆಗಳನ್ನು ಬದಿಗೊತ್ತಿ ತಂದೆಗೆ ಹೆಗಲಾಗಿ ನಿಂತು ಕೃಷಿ ಚಟುವಟಿಕೆ ಯಲ್ಲಿ ತೊಡಗಿಸಿಕೊಂಡು ಬಾಳೆ, ಚೆಂಡು ಹೂ, ಮೆಣಸಿನ ಕಾಯಿ, ಟೊಮ್ಯಾಟೊ ಮತ್ತಿತರೆ ಬೆಳೆ ಬೆಳೆಯುವಲ್ಲಿ ನಿರತರಾಗಿದ್ದಾರೆ.
ರೈತನ ಉಡುಪು ತೊಟ್ಟು ರ್ಯಾಂಪ್ ವಾಕ್: ರೂಪದರ್ಶಿಗಳು ಆಧುನಿಕ ಶೈಲಿಯ, ನವ ನವೀನವಾದ ವಿನ್ಯಾಸಗಳುಳ್ಳ ಉಡುಪು ಧರಿಸಿ ರ್ಯಾಂಪ್‍ನಲ್ಲಿ ಹೆಜ್ಜೆ ಹಾಕುವುದು ಸರ್ವೆ ಸಾಮಾನ್ಯ. ಆದರೆ, ರೂಪದರ್ಶಿ ನಾಗೇಶ್, ರೈತನ ಉಡುಗೆ ತೊಟ್ಟು ರ್ಯಾಂಪ್‍ನಲ್ಲಿ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದಾರೆ.
ನೇಪಾಳದ ಕಠ್ಮಂಡುವಿಲ್ಲಿ ನಡೆದ ಮಾಡೆ ಲಿಂಗ್‍ನಲ್ಲಿ ನೇಗಿಲಯೋಗಿಯ ಧಿರಿಸು ತೊಟ್ಟು ರ್ಯಾಂಪ್‍ಮೇಲೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ದ್ದರು. ಈ ಸ್ಪರ್ಧೆಯಲ್ಲಿ ಭಾರತ ಮಾತ್ರವ ಲ್ಲದೆ ನೇಪಾಳ, ಶ್ರೀಲಂಕಾ, ಪಾಕಿಸ್ತಾನ ಮತ್ತು ಫಿಲಿಫೈನ್ಸ್ ಮತ್ತಿತರೆ ರಾಷ್ಟ್ರಗಳ ರೂಪದರ್ಶಿಗಳು ಭಾಗವಹಿಸಿದ್ದರು.
ಫ್ಯಾಷನ್ ಶೋ ಸ್ಪರ್ಧೆಗಳಲ್ಲಿ ಎಲ್ಲರೂ ಆಧುನಿಕ ಶೈಲಿಯ ವೇಷಭೂಷಣಗಳನ್ನು ತೊಟ್ಟು ಪ್ರದರ್ಶಿಸುತ್ತಾರೆ. ಆದರೆ, ವಿನೂ ತನವಾಗಿ ಏನಾದರೂ ಮಾಡಬೇಕೆಂದು ಯೋಚಿಸಿ, ರೈತರು ಧರಿಸುವ ಸಾಂಪ್ರದಾ ಯಿಕ ಉಡುಗೆಗಳನ್ನು ತೊಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದೆ. ಇದು ಹಲವರಿಗೆ ವಿಶೇಷವಾಗಿ ಕಾಣಿಸಿದೆ. ಮುಂದಿನ ದಿನ ಗಳಲ್ಲೂ ನಮ್ಮಲ್ಲೂ ರೈತರು ಧರಿಸುವ ಸಾಂಪ್ರ ದಾಯಿಕ ಉಡುಗೆಗಳನ್ನು ಪರಿಚಯಿಸ ಲಾಗುವುದು ಎಂದು ನಾಗೇಶ್ ಹೇಳಿದರು.
ರೈತರ ಪರಿಶ್ರಮದ ಫಲವಾಗಿ ನಾವು ಊಟ ಮಾಡುತ್ತಿದ್ದೇವೆ. ನಾನೂ ಕೂಡ ರೈತರ ಮಗ. ಹಾಗಾಗಿ ಈ ಸ್ಪರ್ಧೆಯಲ್ಲಿ ರೈತರ ಉಡುಪು ಧರಿಸಿ ಭಾಗವಹಿಸಿದೆ. ಇದರಲ್ಲಿ ರೈತರು ದೇಶದ ಬೆನ್ನೆಲುಬು ಎಂಬ ಸಂದೇಶವನ್ನು ಸಾರುವುದೇ ನನ್ನ ಮುಖ್ಯ ಉದ್ಧೇಶವಾಗಿತ್ತು ಎಂದರು.
2016ರಲ್ಲಿ ಫ್ಯಾಷನ್ ಶೋ ಪ್ರವೇಶ: ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು, ದೆಹಲಿಯ ಕಾಲೇಜೊಂದರಲ್ಲಿ ಉಪ ನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಈ ವೇಳೆ ಸ್ನೇಹಿತರೊಬ್ಬರು ದೆಹಲಿ ಯಲ್ಲಿ ನಡೆಯುತ್ತಿದ್ದ ಫ್ಯಾಷನ್ ಶೋನಲ್ಲಿ ಭಾಗವಹಿಸುವಂತೆ ಹೇಳಿದರು. ಅವರ ಒತ್ತಾಯದ ಮೇರೆಗೆ 2016ರಲ್ಲಿ ಫ್ಯಾಷನ್ ಶೋಗೆ ಪ್ರವೇಶಿಸಿದೆ. ಅಂದಿನಿಂದ ಇಂದಿ ನವರೆಗೆ ಹಲವು ಏಳು-ಬೀಳುಗಳನ್ನು ಕಂಡಿದ್ದೇನೆ. ಈ ಮಧ್ಯೆ ಹಲವು ಶೋ ಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿ ದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಸ್ಪರ್ಧೆ: 2017ರಲ್ಲಿ ಧಾರವಾಡದಲ್ಲಿ ನಡೆದ ಮಿಸ್ಟರ್ ಎಲೈಟ್ ಮಾಡೆಲ್ ಇಂಡಿಯಾ ಬೆಸ್ಟ್ ಫಿನಿಕ್ 2ಕೆ 17ರ ವಿನ್ನರ್, 2018ರ ಮಾರ್ಚ್ ತಿಂಗಳಲ್ಲಿ ನಡೆದ ಮಿಸ್ಟರ್ ರಾಯಲ್ ಮೈಸೂರು 2ಕೆ18ರ ವಿನ್ನರ್, ಏಪ್ರಿಲ್‍ನಲ್ಲಿ ನಡೆದ ಮಿಸ್ಟರ್ ಫ್ಯಾಷನ್ ಫೆಸ್ಟಾ 2ಕೆ 18 ಹಾಗೂ ಮೈಸೂರಿನಲ್ಲಿ ನಡೆದ ಫ್ಯಾಷನ್ ಶೋಗಳಲ್ಲೂ ಭಾಗವಹಿಸಿ ಗೆಲುವು ಸಾಧಿಸಿದ್ದಾರೆ.