ಮೈಸೂರಿನ ಅನುಪಮರಾವ್‌ಗೆ ಮಿಸೆಸ್ ಸೌತ್ ಏಷಿಯಾ ಕಿರೀಟ ಸಿಂಗಾಪುರದ ವರ್ಲ್ಡ್ವೈಡ್ ಸ್ಪರ್ಧೆಗೆ ಆಯ್ಕೆ
ಮೈಸೂರು

ಮೈಸೂರಿನ ಅನುಪಮರಾವ್‌ಗೆ ಮಿಸೆಸ್ ಸೌತ್ ಏಷಿಯಾ ಕಿರೀಟ ಸಿಂಗಾಪುರದ ವರ್ಲ್ಡ್ವೈಡ್ ಸ್ಪರ್ಧೆಗೆ ಆಯ್ಕೆ

May 16, 2022

ಮೈಸೂರು, ಮೇ ೧೫-ಮಿಸೆಸ್ ಇಂಡಿಯಾ ಯೂನಿವರ್ಸ್ ಸ್ಪರ್ಧೆಯ ಪ್ಲಾಟಿನಂ ವಿಭಾಗದ ವಿಜೇತರಾದ ಮೈಸೂರಿನ ಕುವೆಂಪುನಗರ ನಿವಾಸಿ ಅನುಪಮಾ ರಾವ್ ಅವರು ಮುಂಬಯಿಯಲ್ಲಿ ಇತ್ತೀಚೆಗೆ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಮಿಸೆಸ್ ಸೌತ್ ಏಷಿಯಾ-೨೦೨೨ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಮುAಬಯಿಯ ಸಂಮಕಿತ್ ಪ್ರೊಡಕ್ಷನ್ಸ್ ಹಾಗೂ ತುಷಾರ್ ದಾರಿವಾಲ್ ಈ ಪೇಜೆಂಟ್‌ನ ಆಯೋಜಕರಾಗಿದ್ದರು. ಮಿಸೆಸ್ ಇಂಡಿಯಾ ಯೂನಿವರ್ಸ್ ಸ್ಪರ್ಧೆಯ ಮುಂದುವರೆದ ಈ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಅನುಪಮರಾವ್ ಅವರು ಮುಂಬರುವ ಅಕ್ಟೋಬರ್‌ನಲ್ಲಿ ಸಿಂಗಾಪುರದಲ್ಲಿ ನಡೆಯುವ ಮಿಸೆಸ್ ವರ್ಲ್್ಡ ವೈಡ್ ೨೦೨೨ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅನುಪಮರಾವ್ ಭರತ ನಾಟ್ಯ ಕಲಾವಿದೆಯಾಗಿಯೂ ಜನ ಪ್ರಿಯತೆ ಪಡೆದವರು. ಅನುಪಮರಾವ್ ಅನೇಕ ಸಮಾಜಮುಖಿ ಸೇವಾ ಕಾರ್ಯ ದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ರೀಮತಿಯವರು ಮೈಸೂರಿನ ಎಸ್‌ಬಿಐ ಉದ್ಯೋಗಿಯಾಗಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಗೋವಾದಲ್ಲಿ ನಡೆದ ಮಿಸಸ್ ಇಂಡಿಯಾ ಯೂನಿವರ್ಸ್ ೨೦೨೦-೨೧ ಸ್ಪರ್ಧೆಯಲ್ಲಿ ಅನುಪಮಾ ರಾವ್ ಮಿಸಸ್ ಇಂಡಿಯಾ ಯೂನಿವರ್ಸ್ ವಿಶ್ವ ಪ್ಲಾಟಿನಂ ವಿಭಾಗದಲ್ಲಿ ವಿಜೇತರಾಗಿದ್ದರು.

Translate »