ಕೆಎಸ್‌ಸಿಎಗೆ ಪೊಲೀಸ್ ಇಲಾಖೆಯ ಕ್ರೀಡಾಂಗಣ
ಮೈಸೂರು

ಕೆಎಸ್‌ಸಿಎಗೆ ಪೊಲೀಸ್ ಇಲಾಖೆಯ ಕ್ರೀಡಾಂಗಣ

May 16, 2022

ಮೈಸೂರು,ಮೇ೧೫(ಜಿಎ)-ಕ್ರಿಕೆಟ್ ಆಡಲು ಪೊಲೀಸ್ ಇಲಾಖೆಯ ಕ್ರೀಡಾಂಗಣವೊAದನ್ನು ನೀಡುವಂತೆ ಕರ್ನಾಟಕ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮನವಿ ಮಾಡಿದ್ದು, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಚರ್ಚಿಸಿ ಕ್ರೀಡಾಂಗಣವನ್ನು ಕೆಎಸ್‌ಸಿಎಗೆ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯ ಮೈಸೂರು ವಲಯದ ವತಿಯಿಂದ ಆಯೋಜಿಸಿದ್ದ ಪಂದ್ಯಾ ವಳಿಯಲ್ಲಿ ಭಾಗವಹಿಸಿ ವಿಜೇತರಾದ ತಂಡಗಳಿಗೆ, ಉತ್ತಮ ಪ್ರದರ್ಶನ ನೀಡಿದ ಬ್ಯಾಟ್ಸ್ಮೆನ್, ಬೌಲರ್ ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಕ್ರೀಡಾಪಟು ಗಳಿಗಾಗಿ ಮೈಸೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಮೈಸೂರು ಪೊಲೀಸ್ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೈಸೂರು ವಲಯ ಒಡಂಬಡಿಕೆ ಮಾಡಿ ಕೊಂಡು ಮೈಸೂರಿನಲ್ಲಿರುವ ಪೊಲೀಸ್ ಇಲಾಖೆಯ ಕ್ರೀಡಾಂಗಣಗಳನ್ನು ಕ್ರಿಕೆಟ್ ಆಡಲು ನೀಡುವಂತೆ ಕೆಎಸ್‌ಸಿಎ ಮನವಿ ಸಲ್ಲಿಸಿದೆ. ಒಂದು ಕ್ರೀಡಾಂಗಣವನ್ನು ನಿತ್ಯ ಬಳಸಿದರೆ ಕ್ರೀಡಾಂಗಣಕ್ಕೆ ಗೌರವ ನೀಡಿದಂತೆ. ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಚರ್ಚಿಸಿ ಪೊಲೀಸ್ ಇಲಾ ಖೆಯ ಕ್ರೀಡಾಂಗಣಗಳನ್ನು ಬಳಸಿಕೊಳ್ಳಲು ನೀಡುತ್ತೇವೆ ಎಂದು ಭರವಸೆ ನೀಡಿದರು.

ನಾನು ಜೀವನದಲ್ಲಿ ಶಾಲೆ, ಕಾಲೇಜು ಹಾಗೂ ಪೊಲೀಸ್ ಟ್ರೆöÊನಿಂಗ್ ಸಮಯ ದಲ್ಲಿ ಓದುವುದಕ್ಕಿಂತ ಹೆಚ್ಚು ಸಮಯವನ್ನು ಕ್ರಿಕೆಟ್‌ಗೆ ಮೀಸಲಿಟ್ಟಿದ್ದೆ ಎಂದ ಅವರು ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಕ್ಷೇತ್ರದಲ್ಲಿ ಅನೇಕ ಬದಲಾವಣೆ ಮತ್ತು ಅಪ್ಡೇಟ್ ಆಗಿದ್ದು, ಅದನ್ನು ಯುವ ಪ್ರತಿಭೆಗಳು ಸದುಪ ಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದರು.

ಕ್ರಿಕೆಟ್ ಸೇರಿದಂತೆ ಯಾವುದೇ ಕ್ರೀಡೆ ಗಳಲ್ಲಿ ಮಕ್ಕಳು ಆಸಕ್ತಿ ತೋರಿದರೆ ಪೋಷ ಕರು ಅವರಿಗೆ ಪ್ರೋತ್ಸಾಹ ನೀಡಬೇಕು. ಏಕೆಂದರೆ ಗುರಿ ಸಾಧಿಸಲು, ಜೀವನದಲ್ಲಿ ಬರುವ ಕಷ್ಟಗಳನ್ನು ಸಹಿಸಿಕೊಳ್ಳುವುದನ್ನು ಮತ್ತು ಮತ್ತೊಬ್ಬರಿಗೆ ತೊಂದರೆಯಾ ಗದಂತೆ ಹೇಗೆ ಜೀವನ ಸಾಗಿಸಬಹುದು ಎಂಬುದನ್ನು ಕ್ರೀಡೆ ಕಲಿಸುತ್ತದೆ ಎಂದರು.

ಕೆಎಸ್‌ಸಿಎ ಉಪಾಧ್ಯಕ್ಷ ಜೆ.ಅಭಿರಾಂ ಮಾತನಾಡಿ, ರಾಜ್ಯದಲ್ಲಿ ಬೆಂಗಳೂರು ಬಳಿಕ ಅತಿಹೆಚ್ಚು ಕ್ರಿಕೆಟ್ ಚಟುವಟಿಕೆ ನಡೆಯು ವುದು ಮೈಸೂರಿನಲ್ಲಿ. ಮೈಸೂರು ವಲ ಯವು ಹಲವು ಪ್ರತಿಭಾನ್ವಿತ ಕ್ರಿಕೆಟಿಗರನ್ನು ರಾಜ್ಯ ಹಾಗೂ ದೇಶಕ್ಕೆ ನೀಡಿದೆ. ಎಲ್ಲ ವಯೋವರ್ಗಗಳಲ್ಲೂ ಉತ್ತಮ ಆಟ ಗಾರರು ಇಲ್ಲಿದ್ದು, ಹಲವರು ಈಗಾಗಲೇ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಟದ ಜೊತೆಗೆ ಶಿಕ್ಷಣದೆಡೆಗೂ ಗಮನ ಕೊಡಬೇಕು. ಏಕೆಂದರೆ ಇಲ್ಲಿರುವ ಎಲ್ಲ ಹುಡುಗರಿಗೂ ಮುಂದೆ ಸಚಿನ್ ತೆಂಡೂಲ್ಕರ್ ಅಥವಾ ವಿರಾಟ್ ಕೊಹ್ಲಿ ಆಗಲು ಸಾಧ್ಯವಿಲ್ಲ. ಕ್ರೀಡೆ ಮತ್ತು ಶಿಕ್ಷಣದ ನಡುವೆ ಸಮತೋಲನ ಕಾಪಾಡಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಿರಿ’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಆರ್.ಕೆ. ಹರಿಕೃಷ್ಣ ಕುಮಾರ್, ಎಸ್. ಸುಧಾಕರ್, ಇರ್ಫಾನ್ ಸೇಠ್ ಸೇರಿದಂತೆ ಮೈಸೂರು ವಲಯದ ಪದಾಧಿಕಾರಿಗಳು ಭಾಗವಹಿಸಿದರು.
ಇದಕ್ಕೂ ಮೊದಲು ಕೊರೊನಾ ಯೋಧರು ಮತ್ತು ರಾಜ್ಯದ ಹಿರಿಯ ಅಂಪೈರ್ ಗಳಾದ ಹರಿನಾರಾಯಣ್, ಅನಂತ್, ವಿಜಯ್ ಪ್ರಕಾಶ್ ಅವರನ್ನು ವಲಯದ ವತಿಯಿಂದ ಗೌರವಿಸಲಾಯಿತು.

ನಂತರ ೨೦೨೧-೨೨ನೇ ಸಾಲಿನಲ್ಲಿ ರಾಜ್ಯ ವನ್ನು ಪ್ರತಿನಿಧಿಸಿದ ಎಂ.ವೆAಕಟೇಶ್, ಎಂ.ಬಿ. ದರ್ಶನ್, ಎಸ್.ಜೆ. ನಿಕಿನ್ ಜೋಸ್, ಕೃಷ್ಣ ಬೇಂದ್ರೆ, ಕೃತಿಕ ಕೃಷ್ಣ, ಎಲ್.ಆರ್. ಚೇತನ್, ಎಲ್.ಆರ್. ಕುಮಾರ್, ರಕ್ಷಿತ ಕೃಷ್ಣಪ್ಪ, ಶುಭ ಸತೀಶ್, ಪಿ.ಸಲೋನಿ ಮತ್ತು ಉತ್ತಮ ವಾದ ಪ್ರದರ್ಶನ ನೀಡಿದ ಎಂ.ಡಿ. ಆಯುಷ್, ರಾಜಶೇಖರ್ ಸ್ವಾಮಿ, ಮನೋಜ್ ಕುಮಾರ್, ಬಿ.ಧೀಮಂತ್, ಜಿ. ಶಾಂತರಾಜು, ಅಬಿದ್ ಅಲಿ ಅಹಮ್ಮ ದಾಲಿ ಮುಲ್ಲ, ವಿಭೋದ್ ರಮೇಶ್, ರಂಜಿತ್ ಸತೀಶ್, ಪಿ.ಎ. ಚಂದ್ರು, ಹೇಮಂತ್ ರಾಜ್‌ಕುಮಾರ್, ಸಬಾಸ್ಟಿನ್ ಆಲಿ, ವಿಷ್ಣು ಪ್ರಿಯ, ಆರ್. ಮಾಧವನ್ ಹಾಗೂ ಪಂದ್ಯಾವಳಿಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳಾದ ಫ್ರೆಂಡ್ಸ್ ಯೂನಿಯನ್ ಕ್ರಿಕೆಟ್ ಕ್ಲಬ್, ನಾಷನಲ್ ಕ್ರಿಕೆಟ್ ಕ್ಲಬ್, ಸರಸ್ವತಿಪುರಂ ಸ್ಪೋರ್ಟ್ಸ್ ಕ್ಲಬ್, ರಾವ್ ಬಹದ್ದೂರ್ ನರಸಪ್ಪ ಕ್ರಿಕೆಟ್ ಕ್ಲಬ್, ಜೋ ಜೋ ಕ್ರಿಕೆಟ್ ಕ್ಲಬ್, ನೋಟ್ ಮುದ್ರಣ ಕ್ರಿಕೆಟ್ ಕ್ಲಬ್, ಫ್ರೆಂಡ್ಸ್ ಅಸೋಸಿಯೇಷನ್ ಕ್ರಿಕೆಟ್ ಕ್ಲಬ್, ಗಾರ್‌ನಿರ್ ಕ್ರಿಕೆಟ್ ಕ್ಲಬ್, ಕುವೆಂಪುನಗರ ಕ್ರಿಕೆಟ್ ಕ್ಲಬ್, ಮೋಹನ್ಸ್ ಇಲೆವೆನ್, ಕರಾವಳಿ ಕ್ರಿಕೆರ‍್ಸ್ ಹಾಗೂ ಯುವರಾಜ ಕಾಲೇಜಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Translate »