ಮೈಸೂರಲ್ಲಿ ಸಾಧಕರಿಗೆ ಚಿದಾನಂದ ಪ್ರಶಸ್ತಿ ಪ್ರದಾನ
ಮೈಸೂರು

ಮೈಸೂರಲ್ಲಿ ಸಾಧಕರಿಗೆ ಚಿದಾನಂದ ಪ್ರಶಸ್ತಿ ಪ್ರದಾನ

May 16, 2022

ಮೈಸೂರು, ಮೇ ೧೫(ಎಂಟಿವೈ)- ಬೆಂಗಳೂರಿನ ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂವರು ಸಾಧಕರಿಗೆ ‘ಚಿದಾನಂದ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

ಮೈಸೂರಿನ ಅಗ್ರಹಾರದಲ್ಲಿರುವ ಜೆಎಸ್‌ಎಸ್ ಆಸ್ಪತ್ರೆಯ ಆವರಣದಲ್ಲಿ ರುವ ರಾಜೇಂದ್ರ ಭವನದಲ್ಲಿ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞ ಮತ್ತು ಪುರಾತತ್ವಶಾಸ್ತçಜ್ಞ ಡಾ.ಎಂ.ಎಸ್. ಕೃಷ್ಣಮೂರ್ತಿ (೨೦೨೦ನೇ ಸಾಲಿನ ಪ್ರಶಸ್ತಿ), ಗ್ರಂಥ ಸಂಪಾದಕರು ಮತ್ತು ಹರಿದಾಸ ಸಾಹಿತ್ಯ ಸಂಶೋಧಕರಾದ ಡಾ.ಟಿ.ಎನ್. ನಾಗರತ್ನ (೨೦೨೧ನೇ ಸಾಲು) ಹಾಗೂ ಸಮುದಾಯ ಅಧ್ಯಯನ ಸಂಶೋಧಕ ಡಾ.ಬಿ.ಕೆ.ಪ್ರಣತಾರ್ತಿಹರನ್ (೨೦೨೨ನೇ ಸಾಲು) ಅವರಿಗೆ ‘ಚಿದಾನಂದ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವರಿಗೆ ಪ್ರತಿ ವರ್ಷ ‘ಚಿದಾನಂದ ಪ್ರಶಸ್ತಿ’ ನೀಡಿ ಗೌರವಿಸುವ ಸಂಪ್ರದಾಯವನ್ನು ಬೆಂಗಳೂರಿನ ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ಅನುಸರಿಸುತ್ತಿದ್ದು, ಕೋವಿಡ್ ಹಿನ್ನೆಲೆ ಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ನಡೆದ ಕಾರ್ಯ ಕ್ರಮದಲ್ಲಿ ಮೂರು ವರ್ಷಗಳ ಪ್ರಶಸ್ತಿ ಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಅಮೆರಿಕ ಪ್ರವಾಸದಲ್ಲಿರುವ ಕಾರಣ ಎಂ.ಎಸ್.ಕೃಷ್ಣಮೂರ್ತಿ ಅವರು ಸಮಾ ರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ಅಕ್ಕ ಉಮಾ ಎಸ್.ರಾವ್, ಅಣ್ಣನ ಮಗ ಉದಯ್‌ಶಾಸ್ತಿç ಪ್ರಶಸ್ತಿ ಸ್ವೀಕರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತಿç ಮಾತ ನಾಡಿ, ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದವರನ್ನು ಗುರುತಿಸಿ ಚಿದಾ ನಂದಮೂರ್ತಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಚಿದಾನಂದ ಮೂರ್ತಿ ಅವರ ಹೆಸರಲ್ಲಿ ಸಾಧಕರಿಗೆ ಪ್ರಶಸ್ತಿ ನೀಡುವ ಮೂಲಕ ಇನ್ನಷ್ಟು ಮಂದಿ ಸಾಧಕರಾಗಿ ಹೊರಹೊಮ್ಮಲು ಪ್ರೇರಣೆ ನೀಡಿದಂತಾಗಿದೆ. ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿಯು ಉನ್ನತ ವ್ಯಕ್ತಿತ್ವಗಳನ್ನು ಹುಡುಕಿ ಪ್ರಶಸ್ತಿ ನೀಡುವ ಮೂಲಕ ತನ್ನ ಬದ್ಧತೆಯನ್ನು ತೋರ್ಪಡಿಸಿದೆ ಎಂದರು.

ಇದೇ ವೇಳೆ ನಾಡೋಜ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲ ಶಾಸ್ತಿç ಅವರನ್ನು ಸನ್ಮಾನಿಸಲಾಯಿತು. ಕಾರ್ಯ ಕ್ರಮದಲ್ಲಿ ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ಅಧ್ಯಕ್ಷ ಸಿ.ಯು.ಮಂಜುನಾಥ್, ಕಾರ್ಯ ದರ್ಶಿ ಡಾ.ಎಸ್.ಎಲ್.ಶ್ರೀನಿವಾಸಮೂರ್ತಿ, ಎನ್.ಎಂ.ಶಿವಕುಮಾರ್ ಪಾಲ್ಗೊಂಡಿದ್ದರು.

 

 

Translate »