ಮೈಸೂರು, ಆ. 12(ಆರ್‍ಕೆ)- ಇ-ಹರಾಜು ಪ್ರಕ್ರಿಯೆ ಬಗ್ಗೆ ತಿಳಿಯದ ನಾಗರಿಕರು ಇ-ಪ್ರಕ್ಯೂರ್‍ಮೆಂಟ್ ವೆಬ್‍ಸೈಟ್‍ನಲ್ಲಿ ನೋಂದಣಿ ಮೂಲಕ ಬಿಡ್‍ನಲ್ಲಿ ಭಾಗವಹಿಸಿ ಮೂಲೆ ನಿವೇಶನಗಳನ್ನು ಪಡೆ ಯಿರಿ ಎಂದು ಮುಡಾ ಆಯುಕ್ತ ಡಾ. ಡಿ.ಬಿ. ನಟೇಶ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ರುವ ಅವರು, ಸೆಪ್ಟೆಂಬರ್ 13ರಂದು ನಡೆಯುವ ಬಿಡ್‍ನಲ್ಲಿ ಯಶಸ್ವಿಯಾಗದಿದ್ದಲ್ಲಿ ಮತ್ತೊಮ್ಮೆ ಇಎಂಡಿ ಪಾವತಿಸಿ ನೋಂದಣಿಯಾಗಿ ಸೆಪ್ಟೆಂಬರ್ 20ರಂದು ಇ-ಹರಾಜಿನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಮುಡಾದ ಮಧ್ಯಂತರ ಹಾಗೂ ಮೂಲೆ ನಿವೇಶನಗಳನ್ನು ವಿಲೇವಾರಿ ಮಾಡಲು ಸೆಪ್ಟೆಂಬರ್ 13ರಿಂದ 18ರವರೆಗೆ ಇಎಂಡಿ ಪಾವತಿಸಿ ನೋಂದಣಿಯಾಗಲು ಅವಕಾಶವಿದ್ದು, ನೋಂದಣಿಯಾದ ಬಿಡ್ಡುದಾರರಿಗೆ ಸೆಪ್ಟೆಂಬರ್ 17ರಿಂದ 20ರವರೆಗೆ ಪ್ರತೀದಿನ 75 ನಿವೇಶನಗಳಂತೆ ಬಿಡ್ ನಡೆಯಲಿದೆ. ಇ-ಹರಾಜಿನಲ್ಲಿ ಯಶಸ್ವಿಯಾಗುವ ಬಿಡ್ಡುದಾರರಿಗೆ ಸಾಲ ಸೌಲಭ್ಯ ನೀಡಲು ಹಲವು ಬ್ಯಾಂಕುಗಳು ಮುಂದೆ ಬಂದಿದ್ದು, ಸಾರ್ವ ಜನಿಕರು ಈ ಅವಕಾಶ ಬಳಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.