ಮುಡಾ ಕಾರ್ಯಾಚರಣೆ: ಒತ್ತುವರಿ ಜಾಗದಲ್ಲಿದ್ದ ಶೆಡ್‍ಗಳ ತೆರವು
ಮೈಸೂರು

ಮುಡಾ ಕಾರ್ಯಾಚರಣೆ: ಒತ್ತುವರಿ ಜಾಗದಲ್ಲಿದ್ದ ಶೆಡ್‍ಗಳ ತೆರವು

July 9, 2020

ಮೈಸೂರು, ಜು. 8(ಆರ್‍ಕೆ)- ಮೈಸೂ ರಿನ ದೇವನೂರು 2ನೇ ಹಂತದ ಬಡಾ ವಣೆಯಲ್ಲಿ ಒತ್ತುವರಿ ಮಾಡಿ ಅನಧಿಕೃತ ವಾಗಿ ನಿರ್ಮಿಸಿದ್ದ ಶೆಡ್‍ಗಳನ್ನು ಮುಡಾ ಅಧಿಕಾರಿಗಳು ಇಂದು ತೆರವುಗೊಳಿಸಿದ್ದಾರೆ.

ದೇವನೂರು 2ನೇ ಹಂತ, 2ನೇ ಫೇಸ್ ಬಡಾವಣೆಯಲ್ಲಿ ಮುಡಾಗೆ ಸೇರಿದ ಸುಮಾರು ಮೂರೂವರೆ ಕೋಟಿ ರೂ. ಬೆಲೆಯ 3 ನಿವೇಶನಗಳಲ್ಲಿ ವ್ಯಕ್ತಿಯೋರ್ವ ಅತಿಕ್ರಮ ಪ್ರವೇಶ ಮಾಡಿ ಅನಧಿಕೃತವಾಗಿ ಶೆಡ್ ಮತ್ತು ಕಾಂಪೌಂಡ್ ನಿರ್ಮಿಸಿ ಕೊಂಡಿದ್ದರು. ವಿಷಯ ತಿಳಿಯುತ್ತಿದ್ದಂ ತೆಯೇ ಉದಯಗಿರಿ ಠಾಣೆ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ನಿವೇಶನವನ್ನು ಪ್ರಾಧಿ ಕಾರದ ವಶಕ್ಕೆ ಪಡೆದು ಸ್ಥಳದಲ್ಲಿ ಸೂಚನಾ ಫಲಕ ಅಳವಡಿಸಿದರು.

ಮುಡಾ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಂ.ಆರ್.ಪಾಂಡುರಂಗ, ವಲಯಾಧಿಕಾರಿ ಗಳಾದ ಜಿ.ಮೋಹನ್, ನರೇಂದ್ರ ಬಾಬು, ಹೆಚ್.ಪಿ.ಶಿವಣ್ಣ, ಕೆ.ಸಿ.ರವಿಶಂಕರ್ ಹಾಗೂ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಆಯುಕ್ತ ಡಾ. ಡಿ.ಬಿ.ನಟೇಶ್ ತಿಳಿಸಿದ್ದಾರೆ

Translate »