ಮುಡಾ-ಖಾಸಗಿ ಆಸ್ಪತ್ರೆ ಸಹಯೋಗ ಆಮ್ಲಜನಕ ಸಹಿತ 500 ಹಾಸಿಗೆ
ಮೈಸೂರು

ಮುಡಾ-ಖಾಸಗಿ ಆಸ್ಪತ್ರೆ ಸಹಯೋಗ ಆಮ್ಲಜನಕ ಸಹಿತ 500 ಹಾಸಿಗೆ

April 24, 2021

ಮೈಸೂರು,ಏ.23(ವೈಡಿಎಸ್)- ಮೈಸೂ ರಲ್ಲಿ ಕೊರೊನಾ ಸೋಂಕಿನ ಪ್ರಕರಣ ಹೆಚ್ಚು ವುದರ ಜೊತೆಗೇ ವೈದ್ಯಕೀಯ ಆಮ್ಲಜನಕ ಅವಶ್ಯವಿರುವವರ ಸಂಖ್ಯೆಯೂ ಹೆಚ್ಚು ತ್ತಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರವು(ಮುಡಾ) ಆಮ್ಲಜನಕ ಸೌಲಭ್ಯವಿರುವ 500 ಹಾಸಿಗೆಗಳನ್ನು ಸಿದ್ಧಪಡಿಸಲು ತೀರ್ಮಾನಿಸಲಾಯಿತು.
ಮುಡಾ ಸಭಾಂಗಣದಲ್ಲಿ ಅಧ್ಯಕ್ಷ ಹೆಚ್.ವಿ.ರಾಜೀವ್ ಅಧ್ಯಕ್ಷತೆಯಲ್ಲಿ ಶುಕ್ರ ವಾರ ನಡೆದ ಖಾಸಗಿ ಆಸ್ಪತ್ರೆ ವೈದ್ಯರೊಂದಿ ಗಿನ ಕೋವಿಡ್ ಸಂಬಂಧಿತ ಸಭೆಯಲ್ಲಿ, `ಆಮ್ಲಜನಕ ಅವಶ್ಯವಿರುವವರ ಸಂಖ್ಯೆ ನಗರ ದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ತುರ್ತಾಗಿ ಆಮ್ಲಜನಕ ಸೌಲಭ್ಯದ ಹಾಸಿಗೆಗಳ ಅವಶ್ಯ ಕತೆಯೂ ಹೆಚ್ಚಿದೆ’ ಎಂದು ಖಾಸಗಿ ವೈದ್ಯರು ತಿಳಿಸಿದ್ದರಿಂದ ಈ ತೀರ್ಮಾನ ಕೈಗೊಳ್ಳಲಾಯಿತು.

ಹೆಚ್.ವಿ.ರಾಜೀವ್ ಮಾತನಾಡಿ, ಕೊರೊನಾ ಸೋಂಕಿತರು ಹೋಂ ಐಸೊ ಲೇಷನ್(ಏಕಾಂತ ವಾಸ) ಆಗುತ್ತಿರು ವುದರಿಂದ ಕುಟುಂಬದ ಇತರರಿಗೂ ಹರಡುತ್ತಿದೆ. ಸೋಂಕಿತರಲ್ಲಿ ಹೆಚ್ಚಿನವರಿಗೆ ಆಕ್ಸಿಜನ್ ತುರ್ತು ಅವಶ್ಯವಿದೆ. ಹಾಗಾಗಿ ಕಾವೇರಿ ಆಸ್ಪತ್ರೆಯ ಡಾ.ಚಂದ್ರಶೇಖರ್ ಅವರು ತುಳಸಿದಾಸ್ ಆಸ್ಪತ್ರೆಗೆ ಆಮ್ಲಜನಕ ಸೌಲಭ್ಯದ 200 ಹಾಸಿಗೆಗಳ ವ್ಯವಸ್ಥೆ ಮಾಡು ವುದಾಗಿ ಭರವಸೆ ನೀಡಿದ್ದಾರೆ. ಮುಡಾ ದಿಂದ ಮಂಡಕಳ್ಳಿಯ ಕೋವಿಡ್ ಸೆಂಟರ್ ನಲ್ಲಿ 150 ಮತ್ತು ಆಯುರ್ವೇದ ಆಸ್ಪತ್ರೆ ಯಲ್ಲಿ 150 ಆಮ್ಲಜನಕ ಸಹಿತ ಹಾಸಿಗೆ ವ್ಯವಸ್ಥೆಯನ್ನು ವಾರದೊಳಗೆ ಮಾಡಲಾಗು ವುದು ಎಂದು ಪ್ರಕಟಿಸಿದರು. ಕಳೆದ ವರ್ಷ ಕೊರೊನಾ ವಾರಿಯರ್ಸ್ ಗಳ ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡ ಲಾಗಿತ್ತು. ಕೊರೊನಾ ಹಾವಳಿ ತಗ್ಗಿದ ಬಳಿಕ ಆ ವಿಭಾಗವನ್ನು ಮುಚ್ಚಲಾಯಿತು. ಕೊರೊನಾ 2ನೇ ಅಲೆ ಆರಂಭವಾಗಿರುವುದರಿಂದ ಆ ವಿಭಾಗವನ್ನು ದುರಸ್ತಿ ಮಾಡಿಸಿ ಪುನಃ ಚಾಲನೆ ನೀಡುತ್ತೇವೆ. ಇಲ್ಲಿ 80 ಹಾಸಿಗೆ ಗಳ ಸೌಲಭ್ಯವಿದೆ. ಅದರ ನಿರ್ವಹಣೆಯನ್ನು ಖಾಸಗಿ ಆಸ್ಪತ್ರೆಯವರೇ ನೋಡಿಕೊಳ್ಳು ತ್ತಾರೆ ಎಂದು ರಾಜೀವ್ ಹೇಳಿದರು.

Translate »