ಬಹುಮುಖ ಪ್ರತಿಭೆಯುಳ್ಳ ವಿದ್ಯಾರ್ಥಿಗಳು ಶಿಕ್ಷಕರಾಗಲಿ: ಕುಲಪತಿ ಸಲಹೆ
ಮೈಸೂರು

ಬಹುಮುಖ ಪ್ರತಿಭೆಯುಳ್ಳ ವಿದ್ಯಾರ್ಥಿಗಳು ಶಿಕ್ಷಕರಾಗಲಿ: ಕುಲಪತಿ ಸಲಹೆ

August 30, 2020

ಮೈಸೂರು, ಆ.29(ಎಸ್‍ಪಿಎನ್)- ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭಾವಂತ ಶಿಕ್ಷಕರ ಕೊರತೆ ಎದುರಾಗಿದ್ದು, ಇದು ಆತಂಕದ ವಿಷಯವಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಮೈಸೂರು ಜೆಎಲ್‍ಬಿ ರಸ್ತೆಯ ಐಡಿ ಯಲ್ ಜಾವ ರೋಟರಿ ಸಭಾಂಗಣದಲ್ಲಿ ಮೈಸೂರು ಸಾಮಾಜಿಕ ಹಾಗೂ ಶೈಕ್ಷಣಿಕ ವಿಕಾಸ ವೇದಿಕೆ ಹಾಗೂ ರೋಟರಿ ಮೈಸೂರು ಮಿಡ್‍ಟೌನ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಅವರು ಮಾತನಾಡಿದರು.

ಬಹುಮುಖ ಪ್ರತಿಭೆಯುಳ್ಳ ವಿದ್ಯಾರ್ಥಿ ಗಳಿಗೆ ಶಿಕ್ಷಕರಾಗುವಂತೆ ಪೋಷಕರು ಪ್ರೋತ್ಸಾಹಿಸಿದರೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ನಾನು ಕಂಪ್ಯೂಟರ್ ಕ್ಷೇತ್ರದಲ್ಲಿ ಶಿಕ್ಷಕ ನಾಗಿದ್ದೇನೆ. ವಿದ್ಯಾರ್ಥಿ ದಿಸೆಯಲ್ಲಿ ಶಿಕ್ಷಕ ನಾಗಬೇಕೆಂಬ ಹಂಬಲ ಮೂಡಿ ನನ್ನ ಗುರುಗಳನ್ನು ನೋಡಿ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ. ಉತ್ತಮ ಅಂಕ ಗಳಿಸಿ ಸಮಾಜದ ಗೌರವಕ್ಕೆ ಪಾತ್ರರಾಗಿರುವ ವಿದ್ಯಾರ್ಥಿಗಳು ಶಿಕ್ಷಕರಾಗಲು ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕ ಎಸ್.ಮನೋ ಹರ ಬೇವಿನಮರ, ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಿ.ಬಿ.ನಟೇಶ್, ಕರ್ನಾಟಕ ಜಾನಪದ ವಿವಿ ಸಿಂಡಿಕೇಟ್ ಸದಸ್ಯ ಕೆ.ವಸಂತ್ ಕುಮಾರ್, ಬೆಂಗಳೂರು ಕೆಎಸ್‍ಐಐಡಿಸಿ ನಿರ್ದೇಶಕ ಎಸ್.ಮಹದೇವಸ್ವಾಮಿ, ಜಿಲ್ಲಾ ಸರ್ಕಾರಿ ವಕೀಲ ಕೆ.ಬಿ.ಸುರೇಶ್, ಯುಪಿಎಸ್‍ಸಿ ಪರೀಕ್ಷೆಯಲ್ಲಿ 527ನೇ ರ್ಯಾಂಕ್ ಪಡೆದ ವರುಣ್ ಕೆ.ಗೌಡ, 257ನೇ ರ್ಯಾಂಕ್ ಪಡೆದ ಎಂ.ಪ್ರಿಯಾಂಕ ಅವರನ್ನು ಸನ್ಮಾನಿಸಲಾಯಿತು.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಹರ್ಷದೀಪ, ಪ್ರಿಯ ದರ್ಶಿನಿ, ಟಿ.ಆರ್.ಚಿರಂತ್, ಹಿಮಶ್ರೀ, ಪೊನ್ನಮ್ಮ, ಬಿ.ಎಂ.ಅಕುಶ್, ಆರ್.ಪ್ರಜ್ಞಾ, ತನುಶ್ರೀ, ಎನ್.ಪರಮೇಶ್, ರತನ್ಯ ಆರ್. ಗೌಡ, ಪೋವಮ್ಮ, ವರ್ಧನ್ ಕುಮಾರ್, ಎಸ್.ಲೇಖನ, ಕಮಲ, ಸಿ.ಎಸ್.ಅಕ್ಷಯ್, ಎಂ.ವಿನಯ್, ಜಯಕೀರ್ತಿ, ವಿ.ಎಂ. ಹರೀಶ್, ವಿ.ಎಂ.ಮಹೇಂದ್ರ, ಮಹೇಂದ್ರ ಪ್ರಸಾದ್, ಕೆ.ಆರ್.ಸೋನು, ಎಂ. ದರ್ಶನ್, ಎಂ.ನಿರಂಜನ್, ಸಿ.ಚಂದನ, ಪಿಯುಸಿಯ ಸುಮಂತ್‍ಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಎಫ್‍ಕೆಸಿಸಿಐ ಸದಸ್ಯ ಎಂ.ಎಲ್.ರವಿಂದ್ರ ಸ್ವಾಮಿ, ಸ್ಕಿಲ್ ಟೆಕ್ ಬಿಲ್ಡರ್ ಅಂಡ್ ಡೆವಲಪರ್ಸ್ ಕಂಪನಿ ನಿರ್ದೇಶಕ ವೀರೇಶ್, ಮೈಸೂರು ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ ಅಧ್ಯಕ್ಷ ವರುಣಾ ಮಹೇಶ್, ಪ್ರಧಾನ ಕಾರ್ಯದರ್ಶಿ ಬಿ.ಎಂ. ಷಡಕ್ಷರಿ ಶೆಟ್ಟಿ, ಸದಸ್ಯರಾದ ಹಂಚ್ಯಾ ಕುಮಾರ ಸ್ವಾಮಿ, ಕೆ.ಪಿ.ರಾಜೇಂದ್ರ ಪ್ರಸಾದ್, ಪಿ.ಸಂಜಯ್, ಚಂದ್ರು, ಎಂ.ಎಸ್.ರುದ್ರ ಸ್ವಾಮಿ, ಶಿವಮಲ್ಲು ವೇದಿಕೆಯಲ್ಲಿದ್ದರು.

Translate »