ಮೈಸೂರು, ಆ.29(ಎಂಟಿವೈ)- ಮೈಸೂ ರಿನ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂ ಗಣದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾದಿನ ಕಾರ್ಯಕ್ರಮದಲ್ಲಿ 6 ಕ್ರೀಡಾ ಸಾಧಕರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸನ್ಮಾನಿಸಿದರು.
ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂ ಗಣದಲ್ಲಿ ಶನಿವಾರ ಬೆಳಗ್ಗೆ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ-ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾ ಚರಣೆ ಸಮಿತಿ ಜಂಟಿಯಾಗಿ ನಡೆಸಿದ ರಾಷ್ಟ್ರೀಯ ಕ್ರೀಡಾದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಹಾಕಿ ಮಾಂತ್ರಿಕ ಧ್ಯಾನಚಂದ್ ಜನ್ಮದಿನ ವನ್ನು ರಾಷ್ಟ್ರೀಯ ಕ್ರೀಡಾದಿನ ಎಂದು ಆಚ ರಿಸಲಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಯಿತು. ಸಾಧಕರ ಸನ್ಮಾನಕ್ಕೆ ಸೀಮಿತಗೊಳಿಸಲಾಗಿತ್ತು. ಹಿರಿಯ ಟೆನ್ನಿಸ್ ಪಟು ಆರ್.ನಾಗರಾಜ್, ಹಿರಿಯ ಟೇಬಲ್ ಟೆನ್ನಿಸ್ ಪಟು ಕೆ.ವಿ.ಕೃಷ್ಣ ಮೂರ್ತಿ, ಹಾಕಿ ಪಟು ಎಂ.ಡಿ.ಮುತ್ತಪ್ಪ, ಮೈವಿವಿಯ ಪುಲಿಕೇಶಿ ವೈ.ಶೆಟ್ಟಪ್ಪನವರ್, ಅಥ್ಲೆಟಿಕ್ಸ್ ಜಿ.ಬೆನಕ ಪ್ರಸಾದ್, ಸ್ಕೇಟಿಂಗ್ ಪಟು ವರ್ಷ ಎಸ್.ಪುರಾಣಿಕ್ ಹಾಗೂ ಕ್ರೀಡಾ ವರದಿಗಾರಿಕೆಗಾಗಿ ಸಿ.ದಿನೇಶ್ ಅವ ರನ್ನು ಸನ್ಮಾನಿಸಲಾಯಿತು. ಸಂಸದ ಪ್ರತಾಪ ಸಿಂಹ, ಶಾಸಕ ಎಲ್.ನಾಗೇಂದ್ರ, ಯುವ ಸಬಲೀಕರಣ-ಕ್ರೀಡಾ ಇಲಾಖೆ ಸಹಾ ಯಕ ನಿರ್ದೇಶಕ ಕೆ.ಸುರೇಶ್, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥನ್, ಹ್ಯಾಂಡ್‍ಬಾಲ್ ಕೋಚ್, ಹಿರಿಯ ಈಜುಪಟು ಸುಕುಮಾರ್, ಹಾಕಿ ಮೈಸೂರು ಕ್ಲಬ್ ಅಧ್ಯಕ್ಷ ದಿಲೀಪ್, ಕಾರ್ಯ ದರ್ಶಿ ಸತೀಶ್, ವಿಎಸ್‍ಡಿ ಸಂಸ್ಥೆ ಪ್ರಸನ್ನ, ಸದಾನಂದಗೌಡ ಮತ್ತಿತರರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು. ಮೈವಿವಿ ದೈಹಿಕ ಶಿಕ್ಷಣ ವಿಭಾಗದ ಹಂಗಾಮಿ ನಿರ್ದೇಶಕ ಕೃಷ್ಣಯ್ಯ, ಕೆ.ಎಂ.ಕಾಂತರಾಜು, ಮಹಾಜನ ಪಿಯು ಕಾಲೇಜು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಕೆ.ಎಂ.ಕಾಂತರಾಜು, ಎಎಫ್‍ಸಿ ಮೈಸೂರು ಗ್ರೂಪ್‍ನ ವಿನೋದ್, ಗುರು ರಾಜ್, ಗೋಪಿನಾಥ್, ಸೋಮು, ಮುರುಗನ್, ಯೋಗೇಂದ್ರ, ದುರ್ಗಾಪ್ರಸಾದ್, ಲೀಲಪ್ಪ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.