ಮೈಸೂರು,ಆ.29(ಆರ್‍ಕೆ)- ಬಿಇಎಂಎಲ್‍ನ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್‍ಗಳಿಗೆ ಅಗತ್ಯವಿರುವ ಮೋಟಾರ್ ಕೋಚ್ ವ್ಹೀಲ್ ಸೆಟ್‍ಗಳನ್ನು ಮೈಸೂರು ರೈಲ್ವೆ ಕಾರ್ಯಾ ಗಾರವು ತಯಾರಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ನೈರುತ್ಯ ರೈಲ್ವೆಯು, 6 ವ್ಹೀಲ್ ಸೆಟ್‍ಗಳ ಮೊದಲ ಯೂನಿಟ್ ಅನ್ನು ಬೆಮೆಲ್‍ಗೆ ರವಾನಿಸಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದೆ. 188 ಟ್ರೈಲರ್ ಕೋಚ್ ಚಕ್ರಗಳು ಮತ್ತು 52 ಮೋಟಾರ್ ಕೋಚ್ ಚಕ್ರಗಳನ್ನು ಈವರೆಗೆ ತಯಾರಿಸಿದ್ದು, ಅವುಗಳನ್ನು ದೆಹಲಿಯ ಬೆಮೆಲ್ ಉತ್ಪಾದಿಸಿದ 8 ಕೋಚ್ ಎಂಇಎಂಯುಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ 225 ಟ್ರೈಲರ್ ಕೋಚ್ ಕಾರ್‍ಗಳಿಗೆ 900 ವ್ಹೀಲ್ ಹಾಗೂ 75 ಮೋಟಾರ್ ಕೋಚ್ ಕಾರ್‍ಗಳಿಗೆ 300 ವ್ಹೀಲ್ ಸೆಟ್‍ಗಳನ್ನು ಪೂರೈಸುವಂತೆ ಕಾರ್ಯಾಗಾರವನ್ನು ಕೋರಿತ್ತು.
