ಹುಲಿ ದಾಳಿ: ಹಸು ಬಲಿ
ಮೈಸೂರು

ಹುಲಿ ದಾಳಿ: ಹಸು ಬಲಿ

August 30, 2020

ಮೈಸೂರು, ಆ.29(ಎಸ್‍ಬಿಡಿ)- ಹುಲಿ ದಾಳಿಗೆ ಹಸು ಬಲಿಯಾದ ಘಟನೆ ಸರಗೂರು ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಗ್ರಾಮದ ನಿಂಗೇಗೌಡ ಅವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡು ಹಸು ಸಾವನ್ನಪ್ಪಿದೆ. ಜೀವನೋಪಾಯಕ್ಕೆ ಈ ಹಸುವನ್ನೇ ನೆಚ್ಚಿಕೊಂಡಿದ್ದ ರೈತ ನಿಂಗೇಗೌಡ ಈಗ ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳೀಕ ಪರಿಹಾರ ನೀಡುವ ಬರವಸೆ ನೀಡಿದ್ದಾರೆಂದು ತಿಳಿದುಬಂದಿದೆ.

ಗ್ರಾಮದಲ್ಲಿ ಹುಲಿಗಳ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದ್ದು, ಕೆಲ ದಿನಗಳಿಂದ ಮೂರ್ನಾಲ್ಕು ರಾಸುಗಳು ಬಲಿಯಾಗಿವೆ. ಕಳೆದ ಗುರುವಾರ ಜಮೀನಿನಲ್ಲಿ ಕಟ್ಟಿಹಾಕಿದ್ದ ಶ್ರೀನಿವಾಸ್ ಅವರಿಗೆ ಸೇರಿದ ಜೋಡೆತ್ತು ಸಹ ಹುಲಿ ದಾಳಿಗೆ ತುತ್ತಾಗಿವೆ. ಇದೀಗ ಕೊಟ್ಟಿಗೆಗೂ ನುಗ್ಗಿ ಸಾಕು ಪ್ರಾಣಿಗಳ ತಿನ್ನುತ್ತಿವೆ. ಹಾಗಾಗಿ ಜನರೂ ಆತಂಕಕ್ಕೀಡಾ ಗಿದ್ದಾರೆ. ಹುಲಿ ದಾಳಿ ತಪ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಸಾಕುಪ್ರಾಣಿಗಳನ್ನು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಪಂ ಸದಸ್ಯೆ ಭಾಗ್ಯಮ್ಮ ಶಿವನಂಜೇಗೌಡ ಒತ್ತಾಯಿಸಿದ್ದಾರೆ.

Translate »