ಹಾಸನ, ಆ.29-ಹಾಸನ ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಮನೆ ಬೀಗ ಮುರಿದು ಲಕ್ಷಾಂತರ ರೂ. ಚಿನ್ನಾಭರಣ ಕಳವು ಮಾಡಿದ್ದ ಕುಖ್ಯಾತ ಹಾಗೂ ಚಾಣಾಕ್ಷ ಮನೆಗಳ್ಳನನ್ನು ಹಾಸನ ಗ್ರಾಮಾಂತರ ಪೆÇಲೀ ಸರು ಬಂಧಿಸಿ, 35 ಲಕ್ಷ ರೂಪಾಯಿ ಮೌಲ್ಯದ 650 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಪಿ ಆರ್.ಶ್ರೀನಿವಾಸ್‍ಗೌಡ ತಿಳಿಸಿದರು.
ಗಿರೀಶ್ ಕುಮಾರ್ ಬಂಧಿತ ಆರೋಪಿ. ನಂಜನ ಗೂಡು ತಾಲೂಕಿನ ಹೆಡತಲೆ ಗ್ರಾಮದ ಈತ, ಹದಿನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ.
ಈತನಿಗೆ ಸಹಕರಿಸಿದ ಮತ್ತೊಬ್ಬ ಆರೋಪಿ ಬೆಳಗಾವಿಯ ರಾಜೇಶ್ ತಲೆಮರೆಸಿಕೊಂಡಿದ್ದಾನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಆರೋ ಪಿಗೆ ಕೋವಿಡ್ ದೃಢಪಟ್ಟಿರುವುದರಿಂದ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದರು.
ಜ.1ರಂದು ದುದ್ದ ಪೆÇಲೀಸ್ ಠಾಣಾ ವ್ಯಾಪ್ತಿಯ ಅಟ್ಟಾವರ ಹೊಸಹಳ್ಳಿ ಕೊಪ್ಪಲು ಗ್ರಾಮದ ನಂಜೇ ಗೌಡರ ಮನೆಯ ಬೀರುವಿನ ಲಾಕರ್ ಮುರಿದು 2.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ ಕೊಂಡು ಹೋಗಿದ್ದ. ಗ್ರಾಮಾಂತರ ಸಿಪಿಐ ವೈ. ಸತ್ಯನಾರಾಯಣ ನೇತೃತ್ವದ ತಂಡ ಶಾಂತಿ ಗ್ರಾಮ ಬಳಿ ಬೈಕ್‍ನಲ್ಲಿ ಬರುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸ್ನೇಹಿತ ರಾಜೇಶ್ ಜತೆ ಸೇರಿ ಹಲವು ಮನೆಗಳ್ಳತನ, ಸುಲಿಗೆ ಪ್ರಕರಣ ಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಹಾಸನ ಜಿಲ್ಲೆಯ ಅರಸೀಕೆರೆ 2, ಜಾವಗಲ್ 1, ನುಗ್ಗೇಹಳ್ಳಿ 1, ಹಳೇಬೀಡು 1, ದುದ್ದ 2, ಹಾಸನ ಬಡಾವಣೆ 4, ಹಾಸನ ನಗರ 1, ತುಮಕೂರು ಜಿಲ್ಲೆಯ ಕುಣಿಗಲ್ 1, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾವರಕೆರೆ 1 ಪ್ರಕರಣಗಳಲ್ಲಿ ಭಾಗಿ ಯಾಗಿದ್ದಾರೆ ಎಂದರು.
ಹಳ್ಳಿಗಳಿಗೆ ಬೈಕ್‍ನಲ್ಲಿ ಒಬ್ಬನೇ ಹೋಗುತ್ತಿದ್ದ ಗಿರೀಶ್, ಬೀಗ ಹಾಕಿರುವ ಮನೆಗಳು, ಮನೆ ಯಿಂದ ಹೊರಗೆ ಹೋದವರು ಎಷ್ಟು ಹೊತ್ತಿಗೆ ವಾಪಸ್ ಬರುತ್ತಿದ್ದರು ಎಂಬುದನ್ನು ಗಮನಿಸು ತ್ತಿದ್ದ. ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದ್ದ ಈತ ಕಳ್ಳತನ ಸಂದರ್ಭದಲ್ಲಿ ಮೊಬೈಲ್ ಬಳಸುತ್ತಿರಲಿಲ್ಲ. ಅಲ್ಲದೇ ಬೆರಳಚ್ಚು ಗುರುತು ಸಿಗದಂತೆ ನೋಡಿ ಕೊಳ್ಳುತ್ತಿದ್ದ. ಸಾಕಷ್ಟು ಬಾರಿ ಒಬ್ಬನೇ ಕಳ್ಳತನ ಮಾಡಿದ್ದ.