ಸ್ಮಾರ್ಟ್ ಮೀಟರ್‌ನಿಂದ ಬಹುಪಯೋಗ: ಎಲ್ ಅಂಡ್ ಟಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಡಾ.ಶ್ಯಾಮ್ ಪ್ರಭು ಅಭಿಮತ
ಮೈಸೂರು

ಸ್ಮಾರ್ಟ್ ಮೀಟರ್‌ನಿಂದ ಬಹುಪಯೋಗ: ಎಲ್ ಅಂಡ್ ಟಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಡಾ.ಶ್ಯಾಮ್ ಪ್ರಭು ಅಭಿಮತ

July 29, 2018

ಮೈಸೂರು:  ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ವಿದ್ಯುತ್‍ನ್ನು ಅವಶ್ಯಕತೆಗೆ ತಕ್ಕಂತೆ ಬಳಸಬಹುದು ಎಂದು ಲಾರ್ಸನ್ ಅಂಡ್ ಟಬ್ರೋ ಸಂಸ್ಥೆಯ ಡಿಸೈನ್ ಅಂಡ್ ಡೆವಲಪ್‍ಮೆಂಟ್ ವಿಭಾಗದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಡಾ.ಶ್ಯಾಮ್ ಪ್ರಭು ತಿಳಿಸಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯ ದಿ ಇನ್ಸ್‍ಟಿಟೂಷನ್ ಆಫ್ ಇಂಜಿನಿಯರಿಂಗ್(ಇಂಡಿಯಾ) ಸಂಸ್ಥೆ ವತಿಯಿಂದ ಎಸ್.ಪಿ.ಭಟ್ ಸಭಾಂಗಣದಲ್ಲಿ ನಡೆದ ‘ಸೋಷಿಯೋ ಇಕನಾಮಿಕ್ ಸ್ಮಾರ್ಟ್ ಗ್ರಿಡ್ ಅಂಡ್ ಸ್ಮಾರ್ಟ್ ಮೀಟರ್’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಸ್ಮಾರ್ಟ್ ಮೀಟರ್ ಬಳಕೆಯಿಂದ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ವೇಳೆಯಲ್ಲಿ ವಿದ್ಯುತ್ ಬಳಕೆಯ ಪ್ರಮಾಣ ತಿಳಿಯುತ್ತದೆ.

ಕಡಿಮೆ ವಿದ್ಯುತ್ ಬಳಸುವ ಪ್ರದೇಶದಿಂದ ಹೆಚ್ಚಾಗಿ ವಿದ್ಯುತ್ ಉಪಯೋಗಿಸುವ ಪ್ರದೇಶಗಳಿಗೆ ವಿದ್ಯುತ್‍ನ್ನು ವರ್ಗಾಯಿಸಲು ಸ್ಮಾರ್ಟ್ ಮೀಟರ್ ಸಹಕಾರಿಯಾಗಿದೆ. ಮನೆಯಲ್ಲಿಯೇ ಕುಳಿತು ವಿದ್ಯುತ್ ಬಳಕೆ ಮತ್ತು ಶುಲ್ಕವನ್ನು ತಿಳಿಯಬಹುದು. ಹಾಗೆಯೇ ವಿದ್ಯುತ್ ಕಳ್ಳತನವಾಗುವುದನ್ನು ತಡೆಯಬಹುದಾಗಿದೆ.

ಸ್ಮಾರ್ಟ್ ಮೀಟರ್ ಅನ್ನು ಕರ್ನಾಟಕದಲ್ಲಿಯೇ ಮೊದಲ ಭಾರಿಗೆ ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಒಂಟಿಕೊಪ್ಪಲ್ ಮತ್ತು ಜಯಲಕ್ಷ್ಮಿಪುರಂನಲ್ಲಿ ಅಳವಡಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

ಸೌರಶಕ್ತಿ ಉತ್ಪಾದನೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದ್ದು, ರೈತರಿಗೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ 2000 ಮೆಗಾವ್ಯಾಟ್ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಯಾಗುತ್ತಿದೆ. ಇದು ದೇಶದಲ್ಲಿಯೇ ಅತೀ ದೊಡ್ಡ ಘಟಕವಾಗಿದೆ. ಸಾರ್ವಜನಿಕರು ಪರಿಸರ ಸ್ನೇಹಿ ಸೌರವಿದ್ಯುತ್ ಬಳಕೆಯತ್ತ ಜಾಗೃತರಾಗುತ್ತಿದ್ದಾರೆ.

ನವೀಕರಿಸಲಾಗದ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಗೆ ಬದಲಾಗಿ ನವೀಕರಿಸಬಹುದಾದ ಜಲವಿದ್ಯುತ್, ಸೌರಶಕ್ತಿ ಮತ್ತು ಪವನ ಶಕ್ತಿಯನ್ನು ಹೆಚ್ಚಾಗಿ ಬಳಸಬೇಕು. ಇದರಿಂದ ಪÀರಿಸರ ಮಾಲಿನ್ಯವನ್ನು ತಡೆಯಬಹುದು. ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಮಾಡುತ್ತಿದೆ. ಆದರೆ ಇದರ ಸರಿಯಾದ ಬಳಕೆ ಮಾತ್ರ ಆಗುತ್ತಿಲ್ಲ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ದಿ ಇನ್ಸ್‍ಟಿಟೂಷನ್ ಆಫ್ ಇಂಜಿನಿಯರಿಂಗ್ ಸಂಸ್ಥೆ ಅಧ್ಯಕ್ಷ ಎಂ.ಚಿನ್ನಸ್ವಾಮಿ, ಗೌರವ ಕಾರ್ಯದರ್ಶಿ ಬಿ.ವಿ.ರವೀಂದ್ರನಾಥ್ ಇದ್ದರು

Translate »