ಮೈಸೂರಿಗರಿಗೆ ಕೋಟ್ಯಾಂತರ ರೂ.  ವಂಚಿಸಿದ ಮುಂಬೈನ ಸ್ಟಾಕ್ ಬ್ರೋಕರ್ಸ್
ಮೈಸೂರು

ಮೈಸೂರಿಗರಿಗೆ ಕೋಟ್ಯಾಂತರ ರೂ.  ವಂಚಿಸಿದ ಮುಂಬೈನ ಸ್ಟಾಕ್ ಬ್ರೋಕರ್ಸ್

September 27, 2020

ಉತ್ತರಿಸಿದ್ದು, ಮತ್ತೆ ವಿಚಾರಣೆಗೆ ಕರೆದಿಲ್ಲ. ಆದರೆ ಮತ್ತೆ ಕರೆದರೆ ಹಾಜರಾಗುತ್ತೇನೆ. ಡ್ರಗ್ ಮಾಫಿಯಾ ರಾಜ್ಯಕ್ಕೆ ಅಂಟಿರುವ ಭೂತ. ಆ ಭೂತವನ್ನು ಹೋಗಲಾಡಿಸಲು ಪೆÇಲೀಸರು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಾವು ಸಹಕಾರ ನೀಡಬೇಕು ಎಂದರು. ಡ್ರಗ್ಸ್ ಪಾರ್ಟಿ ವಿಚಾರವಾಗಿ ಉತ್ತರಿಸಿದ ಅವರು, ಪಾರ್ಟಿಯಲ್ಲಿ ಭಾಗಿಯಾಗಿರುವ ವಿಚಾರಕ್ಕೆ ಸಂಬಂಧಿಸಿ ನನ್ನನ್ನು ವಿಚಾರಣೆಗೆ ಕರೆದಿಲ್ಲ. ಅವರು ನನ್ನ ಡ್ಯಾನ್ಸ್ ಕೊರಿಯೋಗ್ರಾಫರ್ ಆದ ಕಾರಣ ವಿಚಾರಣೆಗೆ ಕರೆದಿದ್ದರು. ಕಿಶೋರ್ ಅಮನ್ ಶೆಟ್ಟಿ ಹಾಗೂ ತರುಣ್ ಇವರಿಬ್ಬರು ಕೂಡಾ 12 ವರ್ಷಗಳ ಹಿಂದೆ ಒಂದು ಕಾರ್ಯ ಕ್ರಮದಲ್ಲಿ ನನ್ನ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿದ್ದರು ಎಂದು ಹೇಳಿದರು.

ಮೈಸೂರು, ಸೆ. 26- ಅಧಿಕ ಲಾಭಾಂಶ ನೀಡುವುದಾಗಿ ಷೇರು ಮಾರ್ಕೆಟ್ ಮತ್ತು ಸ್ಟಾಕ್ ಎಕ್ಸ್‍ಚೇಂಜ್ ಕಂಪನಿಗಳ ಹೆಸರಲ್ಲಿ ಆಮಿಷವೊಡ್ಡಿ ಮೈಸೂರಿನ ಹಲವರು ಕೋಟ್ಯಾಂತರ ರೂ. ವಂಚನೆಗೆ ಒಳಗಾಗಿರುವ ಪ್ರಕರಣ ಬಯಲಿಗೆ ಬಂದಿದೆ.

ಮುಂಬೈ ಮೂಲದ ಮನೋಜ್ ಜವೇರಿ ಸ್ಟಾಕ್ ಬ್ರೋಕಿಂಗ್ ಪ್ರೈವೇಟ್ ಲಿಮಿಟೆಡ್, ಟ್ರಿಲಿಯನ್ ಕ್ಯಾಪಿಟಲ್ ಕಂಪನಿ ಲಿಮಿಟೆಡ್ ಹಾಗೂ ಮ್ಯಾಕ್ಸ್ ಸರ್ಜ್‍ವೆಲ್ತ್ ಮ್ಯಾನೇಜ್‍ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳ ಹೆಸರಿನಲ್ಲಿ ಮೈಸೂರಿನ ಓರ್ವ ಸೇರಿದಂತೆ ಮುಂಬೈನ 10 ಮಂದಿ ಸ್ಟಾಕ್ ಬ್ರೋಕರ್‍ಗಳು ಮೈಸೂರಿನ 15 ಮಂದಿಗೆ ಕೋಟ್ಯಾಂತರ ರೂ. ವಂಚಿಸಿದ್ದಾರೆ.

ಮಹಾರಾಷ್ಟ್ರದ ಮುಂಬೈ ನಗರ, ನಾರಿಮನ್ ಪಾಯಿಂಟ್‍ನ ಕೊನಾರ್ಡ್ ಸೆಕ್ಯೂರಿಟೀಸ್ ಪ್ರೈ. ಲಿ. ನಿರ್ದೇಶಕಿ ಶಿಖಾ ಹೇಮಂಗ್ ಶಾ, ಫೋರ್ಟ್ ಮುಂಬೈನ ಮನೋಜ್ ಜವೇರಿ ಸ್ಟಾಕ್ ಬುಕ್ಕಿಂಗ್ ಪ್ರೈ. ಲಿ. ನಿರ್ದೇಶಕ ಮನೋಜ್ ಮೋಹನ್‍ಚಂದ್ರ ಜವೇರಿ, ಮೈಸೂರಿನ ಕುವೆಂಪುನಗರದ ಮ್ಯಾಕ್ಸ್ ಸರ್ಜ್‍ವೆಲ್ತ್ ಮ್ಯಾನೇಜ್ ಮೆಂಟ್ ಪ್ರೈ. ಲಿ. ನಿರ್ದೇಶಕ ರವಿ ನಾರಾಯಣರಾವ್, ಮುಂಬೈನ ಟ್ರಿಲಿಯನ್ ವೆಲ್ತ್ ಮ್ಯಾನೇಜ್‍ಮೆಂಟ್ ಪ್ರೈ. ಲಿ. ನಿರ್ದೇಶಕ ಅನಿಲ್ ಉಪಾಧ್ಯಾಯ, ಫೋರ್ಟ್ ಮುಂಬೈನ ಪ್ರಮೀಳಾ ಮನೋಜ್ ಜವೇರಿ ಅಲೋಕ್, ರಾಜ್‍ದೀಪ್ ಮನೋಜ್ ಜವೇರಿ, ರಾಧಿಕಾ ಅನಿಲ್ ಉಪಾಧ್ಯಾಯ, ಅಶೋಕ್ ಕಾರ್ಕಳ ದೇವದಾಸ್ ಹಾಗೂ ಹೇಮಂಗ್ ಶಾ, ಕೋಟ್ಯಾಂತರ ರೂ. ಹಣ ಸಂಗ್ರಹಿಸಿಕೊಂಡು ತಲೆಮರೆಸಿಕೊಂಡಿ ರುವ ಆರೋಪಿಗಳು. ಮೈಸೂರಿನ ವಿಜಯನಗರ 3ನೇ ಹಂತ, 1ನೇ ಮೇನ್, ‘ಡಿ’ ಬ್ಲಾಕ್ ನಿವಾಸಿ ಹೆಚ್.ಎಸ್. ಗೋಪಿನಾಥ್ ಅವರ ಮಗ ಹೆಚ್.ಜಿ. ಶರತ್ ಎಂಬುವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆಗಸ್ಟ್ 3ರಂದು ಐಪಿಸಿ ಸೆಕ್ಷನ್ 120 ಬಿ,

409, 420 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುವ ಮೈಸೂರಿನ ದೇವರಾಜ ಠಾಣೆ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ಹಣ ತೊಡಗಿಸಿದವರು: 50 ಲಕ್ಷ ರೂ. ಹಣ ತೊಡಗಿಸಿರುವ ಶರತ್, ಅವರ ಜೊತೆಗೆ ವಿಜಯನಗರ 1ನೇ ಹಂತ, 4ನೇ ಮೇನ್, 13ನೇ ಕ್ರಾಸ್ ನಿವಾಸಿ ಬಿ.ಸೀಮಾ, ಆರ್. ವಿಶ್ವನಾಥ್, ವಿಜಯನಗರ 3ನೇ ಹಂತ, 1ನೇ ಮೇನ್ ನಿವಾಸಿ ಜೆ.ಎಸ್.ಮೇಘನಾ, ವಿನಾಯಕ ನಗರ 9ನೇ ಮೇನ್, 5ನೇ ಬ್ಲಾಕ್‍ನ ಡಾ.ಮಂಜುನಾಥ್ ಸಂಜೀವ ಶೆಟ್ಟಿ, ಮಹೇಶ್ ಶೆಟ್ಟಿ, ಸಾರಿಕಾ ಎಂ.ಶೆಟ್ಟಿ, ಸರಸ್ವತಿಪುರಂ 12ನೇ ಮೇನ್, 5ನೇ ಕ್ರಾಸ್‍ನ ಮೀನಾ ಶೇಷ ನಾರಾಯಣ್, ವಿವಿ ಮೊಹಲ್ಲಾದ ಗೋಕುಲಂ ನಿವಾಸಿ ಪ್ರಿಯಾ ಮಹೇಶ್, ಸರಸ್ವತಿಪುರಂ 12ನೇ ಮೇನ್, 5ನೇ ಕ್ರಾಸ್‍ನ ಶರಣ್ ರವಿಶಂಕರ್, ನ್ಯೂ ಕಾಂತರಾಜ ಅರಸ್ ರಸ್ತೆ, 16ನೇ ಮೇನ್ ನಿವಾಸಿ ಸಿ. ಪ್ರಸನ್ನ, ಜಯಲಕ್ಷ್ಮಿಪುರಂ 3ನೇ ಕ್ರಾಸ್‍ನ ರಿಷಿಕಾ ವೇಣು, ಶ್ರೀರಾಂಪುರ 3ನೇ ಕ್ರಾಸ್ ನಿವಾಸಿ ಎಸ್. ಸುನಂದ ಹಾಗೂ ಸರಸ್ವತಿಪುರಂ 5ನೇ ಕ್ರಾಸ್ ನಿವಾಸಿ ಎಸ್. ರವಿಶಂಕರ್ ಎಂಬುವರೂ ಈ ಕಂಪನಿಗಳಿಗೆ ಒಬ್ಬೊಬ್ಬರು ಲಕ್ಷಾಂತರ ರೂ. ಹಣ ತೊಡಗಿಸಿ, ಮೋಸ ಹೋಗಿದ್ದಾರೆ.

ರವಿ ನಾರಾಯಣರಾವ್ ಸೂತ್ರಧಾರ: ಮುಂಬೈ ಸ್ಟಾಕ್ ಬ್ರೋಕರ್ಸ್ ಕಂಪನಿಗಳೊಂದಿಗೆ ಸಂಪರ್ಕ ಹೊಂದಿದ್ದ ಮೈಸೂರಿನ ರವಿ ನಾರಾಯಣರಾವ್ ಇಲ್ಲಿ ತಮಗೆ ಗೊತ್ತಿರುವವರನ್ನು ತನ್ನತ್ತ ಸೆಳೆದು, ಕಂಪನಿಗಳಲ್ಲಿ ಹಣ ತೊಡಗಿಸಿದರೆ ಪ್ರತೀ ತಿಂಗಳು ಶೇ. 3ರಿಂದ 4 ರಷ್ಟು ಲಾಭಾಂಶ ಬರುತ್ತದೆ ಎಂದು ನಂಬಿಸಿದ.

ಪಾರ್ಟಿ ಮಾಡಿದ್ದ: ಕಳೆದ ಒಂದು ವರ್ಷದಿಂದ ಮೂರ್ನಾಲ್ಕು ಮಂದಿಯಿಂದ ತಲಾ 20ರಿಂದ 60 ಲಕ್ಷ ರೂ.ವರೆಗೆ ಹಣ ಹೂಡಿಕೆ ಮಾಡಿಸಿದ್ದ ರವಿ ನಾರಾಯಣರಾವ್, 2019ರ ಜೂನ್ 30ರಂದು ಸಂಜೆ 6.30 ಗಂಟೆಗೆ ಮೈಸೂರಿನ ಹೃದಯ ಭಾಗದ ಪ್ರತಿಷ್ಠಿತ ಸ್ಟಾರ್ ಹೋಟೆಲ್‍ನಲ್ಲಿ ಹೂಡಿಕೆದಾರರ ಸಭೆ ನೆಪದಲ್ಲಿ ಗ್ರ್ಯಾಂಡ್ ಪಾರ್ಟಿ ಆಯೋಜಿಸಿದ್ದ. ಈ ಸಭೆಯಲ್ಲಿ ಹಣ ಹೂಡಿದ್ದವರು ಎಂದು ಕೆಲವರನ್ನು ಪರಿಚಯಿಸಿ ಪ್ರತೀ ತಿಂಗಳು ಲಾಭಾಂಶದ ಹಣ ಬರುತ್ತಿದೆ ಎಂದು ಹೇಳಿಸುವ ಮೂಲಕ ಸಭೆಗೆ ಬಂದಿದ್ದವರಿಗೆ ಹಣ ಹೂಡುವಂತೆ ಪ್ರೇರೇಪಿಸಿದ್ದ ರಾವ್, ಕನಿಷ್ಠ 25 ಲಕ್ಷದಿಂದ ಗರಿಷ್ಠ 10 ಕೋಟಿವರೆಗೂ ಹಣ ತೊಡಗಿಸಬಹುದೆಂದು ಹೇಳಿದ್ದ. ಆ ದಿನ ಪಾರ್ಟಿಗೆ ಮುಂಬೈ ಕಂಪನಿಗಳ ನಿರ್ದೇಶಕರೂ ಬಂದಿದ್ದರು.

ಹಣ ಹೂಡಿದರು: ಇನ್‍ವೆಸ್ಟರ್ಸ್ ಮೀಟ್‍ನಲ್ಲಿ ವಿಶ್ವಾಸ ಮೂಡುತ್ತಿದ್ದಂತೆಯೇ ಪ್ರತಿಯೊಬ್ಬರೂ ತಮ್ಮೊಂದಿಗೆ ಕುಟುಂಬದ ಸದಸ್ಯರ ಹೆಸರಿನಲ್ಲೂ 25, 50, 75, 80 ಲಕ್ಷ ರೂ.ನಂತೆ ಆತ ಹೇಳಿದ ಕಂಪನಿಗೆ ಹಣ ತೊಡಗಿಸಿದರು. ಆರಂಭದಲ್ಲಿ ಪ್ರತೀ 3 ತಿಂಗಳಿಗೊಮ್ಮೆ ಲಾಭಾಂಶ ನೀಡಲಾಯಿತಾದರೂ, ನಂತರ ಯಾವುದೇ ಹಣ ಬರಲಿಲ್ಲ. ಇತ್ತ ರವಿ ನಾರಾಯಣರಾವ್ ಸಿಗಲಿಲ್ಲ. ಕಡೆಗೆ ಆತನ ಮೊಬೈಲ್ ಸಂಪರ್ಕವೂ ಕಡಿತವಾಯಿತು.

.5 ಕೋಟಿ ರೂ. ಪಂಗನಾಮ: ದೂರು ನೀಡಿರುವ 14 ಮಂದಿಯಿಂದ 7.55 ಕೋಟಿ ರೂ. ಹಣ ಹೂಡಿಕೆಯಾಗಿದ್ದು, ಅತ್ತ ಲಾಭಾಂಶವೂ ಇಲ್ಲ, ಇತ್ತ ಮೂಲ ಹಣವೂ ಇಲ್ಲದಂತಾಗಿ ಅವರು ಕಂಗಾಲಾಗಿದ್ದಾರೆ. ಇನ್ನು ತಮ್ಮ ಹೆಸರು ಬಯಲಾಗುತ್ತದೆ ಎಂದು ಅಥವಾ ಇನ್ನಿತರ ತಾಂತ್ರಿಕ ಸಮಸ್ಯೆ ಎದುರಾಗುತ್ತದೆ ಎಂದು ಹೆದರಿ ಹಲವರು ದೂರು ನೀಡಲು ಮುಂದಾಗಿಲ್ಲ.

ಮೈಸೂರೊಂದರಲ್ಲೇ ಇಷ್ಟು ಮಂದಿಯಾದರೆ, ಇನ್ನು ರಾಜ್ಯಾದ್ಯಂತ ನೂರಾರು ಕೋಟಿ ರೂ.ಗಳನ್ನು ಕಟ್ಟಿಸಿಕೊಂಡು ಮುಂಬೈ ಕಂಪನಿಗಳ ಬ್ರೋಕರ್‍ಗಳು ವಂಚಿಸಿರುವ ಶಂಕೆ ಇರುವುದರಿಂದ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ.

ವಿವಿ ಪುರಂನಲ್ಲೂ…: ಇದೇ ಮಾದರಿಯಲ್ಲಿ ಯಾದವಗಿರಿಯ ಅಪಾರ್ಟ್‍ಮೆಂಟ್‍ವೊಂದರಲ್ಲಿ ವ್ಯಕ್ತಿಯೋರ್ವ ಅಲ್ಲಿನ ಹಲವರಿಂದ ಕೋಟ್ಯಾಂತರ ರೂ.ಗಳನ್ನು ಷೇರ್ ಮಾರ್ಕೆಟ್ ಹೂಡಿಕೆ ರೂಪದಲ್ಲಿ ಪಡೆದು ಕಳೆದ 20 ದಿನಗಳಿಂದ ಕಣ್ಮರೆಯಾಗಿದ್ದಾರೆ. ಮೂರ್ನಾಲ್ಕು ಐಷಾರಾಮಿ ಕಾರುಗಳನ್ನಿಟ್ಟುಕೊಂಡು ತಾನು ದೊಡ್ಡ ಬ್ಯುಸಿನೆಸ್‍ಮನ್ ಎಂಬಂತೆ ಬಿಂಬಿಸಿ ದೊಡ್ಡ ದೊಡ್ಡ ವ್ಯಕ್ತಿಗಳಿಂದ ಹಣ ಪಡೆದು ಪರಾರಿಯಾಗಿದ್ದಾನಾದರೂ, ಹಣ ತೊಡಗಿಸಿದವರು ದೂರು ನೀಡಲು ಮುಂದಾಗುತ್ತಿಲ್ಲ ಎಂದು ವಿವಿ ಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ.

 

ಎಸ್.ಟಿ. ರವಿಕುಮಾರ್

 

 

 

 

Translate »