ಮುಮ್ಮಡಿ ಕೃಷ್ಣರಾಜ ಒಡೆಯರ್  ಜನ್ಮದಿನ ಆಚರಣೆ
ಮೈಸೂರು

ಮುಮ್ಮಡಿ ಕೃಷ್ಣರಾಜ ಒಡೆಯರ್  ಜನ್ಮದಿನ ಆಚರಣೆ

July 17, 2018

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ ಮುಂಭಾಗದಲ್ಲಿರುವ ರಾಗರಾಗಿಣಿ ಸಂಗೀತ ಮಂಟಪದಲ್ಲಿ ನಮ್ಮ ಕರ್ನಾಟಕ ಸೇನಾ ಪಡೆ ವತಿಯಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಚಾಮುಂಡಿಬೆಟ್ಟದ ಪ್ರಧಾನ ದೀಕ್ಷಿತರಾದ ಡಾ. ಶಶಿ ಶೇಖರ್ ಪುಷ್ಪಾರ್ಚನೆ ಮಾಡಿದರು. ನಂತರ ಮಾತನಾಡಿದ ಅವರು, ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರು ಮತ್ತು ಚಾಮುಂಡಿಬೆಟ್ಟದ ಅಭಿವೃದ್ಧಿಯನ್ನು ಮಾಡಿದರು. ಮುಮ್ಮಡಿ ಕೃಷ್ಣರಾಜ ಒಡೆಯರು ಚಾಮುಂಡೇಶ್ವರಿ ದೇವಿಯ ಪರಮ ಭಕ್ತರಾಗಿದ್ದರು. ಆದ್ದರಿಂದ ಅವರ ಪ್ರತಿಮೆಯನ್ನು ಗುಡಿಯೊಳಗೆ ಇರಿಸಲಾಗಿದೆ. ಮೈಸೂರಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಅವರ ಪ್ರತಿಮೆಯನ್ನು ಶೀಘ್ರದಲ್ಲೇ ಚಾಮುಂಡಿಬೆಟ್ಟದಲ್ಲಿ ಅನಾವರಣ ಮಾಡಿಸಲಿದ್ದೇವೆ ಎಂದು ತಿಳಿಸಿದರು.

ಸಮಾಜ ಸೇವಕ ಡಾ. ಬಿ. ಆರ್ ನಟರಾಜ್ ಜೋಯಿಸ್ ಮಾತನಾಡಿ, ನಮಗೆಲ್ಲಾ ಮಹಾರಾಜರೇ ಪ್ರತ್ಯಕ್ಷ ದೈವ. ಟಿಪ್ಪುವಿನ ಕಾಲಾನಂತರ ಮುಮ್ಮಡಿ ಕೃಷ್ಣರಾಜ ಒಡೆಯರು ಮಹಾರಾಜರಾಗಿ ಹಳ್ಳಿಯಂತಿದ್ದ ಮೈಸೂರನ್ನು ರಾಜಧಾನಿಯಾಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಮುಮ್ಮಡಿ ಜಯಂತಿ ಆಚರಿಸುವಂತಾಗಲಿ ಎಂದು ಹೇಳಿದರು.

ಎಸ್‍ಜೆಕೆ ಎಕರ್ಸ್ ಅಧ್ಯಕ್ಷ ಎಂ.ಎನ್. ದೊರೆಸ್ವಾಮಿ, ಚಾಮುಂಡಿಬೆಟ್ಟದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವ ಸ್ವಾಮಿ, ಡಾ. ಎಂ. ಜಿ. ಆರ್. ಅರಸ್, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ, ಬೆಟ್ಟದ ಮಣೇಗಾರ ಎಂ. ಡಿ ಪ್ರಸಾದ್, ಎಂ. ಡಿ ಸೋಮಣ್ಣ, ಮೂರ್ತಿ, ವಿಶ್ವ, ನಂದೀಶ್ ಅರಸ್, ಪಿ. ಪ್ರಜೀಶ, ಶಾಂತರಾಜೇ ಅರಸ್, ಹರೀಶ್, ಪರಿಸರ ಚಂದ್ರು, ಮಹದೇವ ಸ್ವಾಮಿ, ನಂಜುಂಡಸ್ವಾಮಿ, ಮಿನಿ ಬಂಗಾರಪ್ಪ, ಸುನಿಲ್ ಕುಮಾರ್, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ ಮುಂಭಾಗದಲ್ಲಿರುವ ರಾಗರಾಗಿಣಿ ಸಂಗೀತ ಮಂಟಪದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.

Translate »