ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಾನೂನು ಅರಿವು ನೆರವು
ಚಾಮರಾಜನಗರ

ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಾನೂನು ಅರಿವು ನೆರವು

July 17, 2018

ಚಾಮರಾಜನಗರ: ಕಾನೂನು ಎಲ್ಲರಿಗೂ ಒಂದೇ 18 ವರ್ಷ ತುಂಬಿದ ಮೇಲೆ ವಾಹನ ಪರವಾನಿಗೆ ಪಡೆದು ವಿದ್ಯಾರ್ಥಿಗಳು ವಾಹನ ಓಡಿಸುವುದು ಉತ್ತಮ. ಪರವಾನಿಗೆ ಇಲ್ಲದೆ ವಾಹನ ಚಾಲಿಸು ವುದು ಅಪರಾಧ ಎಂದು ಚಾಮರಾಜ ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಎಂ. ವಿಶಾಲಕ್ಷಿ ತಿಳಿಸಿದರು.

ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸರ್ಕಾರಿ ಪಾಲಿಟ್ನಿಕ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.

18ರಿಂದ 20ವರ್ಷಗಳ ಸಮಯದಲ್ಲಿ ನಿಮ್ಮ ಮನಸ್ಸು ಬೇರೆ ಕಡೆಗೆ ಜಾರಿಹೊಗ ಬಾರದು ಎಂದು ವಿದ್ಯಾರ್ಥಿಗಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ಮನುಷ್ಯ ಕಾನೂನು ಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಸಂವಿಧಾನ ದತ್ತ ಕಾನೂನುಗಳನ್ನು ಪಾಲಿಸಬೇಕು.

ರಸ್ತೆ ನಿಯಮಗಳನ್ನು ಪಾಲಿಸುವುದ ರಿಂದ ಅಪಘಾತಗಳನ್ನು ತಡೆಗಟ್ಟಬಹುದು. ವಿದ್ಯಾರ್ಥಿಗಳು ಬೈಕ್ ಸವಾರಿ ಮಾಡುವಾಗ ಎಚ್ಚರಿಕೆ ವಹಿಸಬೇಕು. ಅತಿ ವೇಗವಾಗಿ ಹೋಗಬಾರದು. ಇದರಿಂದ ಅಪ ಘಾತಗಳು ಸಂಭವಿಸುತ್ತದೆ. ವಾಹನಗಳಿಗೆ ದಾಖಲೆಗಳು ಇಲ್ಲದೆ ಇರುವುದು, ವಿಮೆ ಇಲ್ಲದಿರುವುದು ಕಾನೂನಿನಲ್ಲಿ ಅಪರಾಧ ವಾಗುತ್ತದೆ. ಯಾವುದೇ ವಾಹನ ಓಡಿ ಸಲು ನಿಮ್ಮ ಪರನಿಗೆ ಅತ್ಯ ಅಗತ್ಯ ಇಲ್ಲದಿ ದ್ದರೆ ಅದು ಅಪರಾಧವಾಗುತ್ತದೆ. ಚಿಕ್ಕ ಮಕ್ಕಳಿಗೆ ಬೈಕ್ ಹೋಡಿಸಲು ನೀಡಬೇಡಿ ಅವರು ಅಪಘಾತ ಮಾಡಿದರೆ ಮನೆಯ ಹಿರಿಯರಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ವೇಗವಾಗಿ ಬೈಕ್ ಸವಾರಿ ಮಾಡುತ್ತಿರುವುದು ಕಂಡು ಬರುತ್ತಿದೆ. ಅತಿ ವೇಗ ಅಪಾಯಕ್ಕೆ ದಾರಿ. ವಾಹನ ಚಲಿ ಸುವಾಗ ಎಚ್ಚರಿಕೆ ವಹಿಸಿ ಎಂದು ವಿದ್ಯಾ ರ್ಥಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮ ತ್ತೂರು ಇಂದುಶೇಖರ್ ಮಾತನಾಡಿ, ಇದು ನಮ್ಮ ದೇಶದ ಸಂವಿಧಾನದಲ್ಲಿ ಸಾವಿ ರಾರು ಕಾನೂನುಗಳನ್ನು ಕಾಣುತ್ತೇವೆ. ಯಾರು ಕೂಡ ಎಲ್ಲಾ ರೀತಿಯ ಕಾನೂನು ಗಳನ್ನು ತಿಳಿದು ಕೊಳ್ಳಲು ಸಾಧ್ಯವಿಲ್ಲ.

ಪ್ರತಿನಿತ್ಯದ ಅಗತ್ಯಕ್ಕಾಗಿ ಇರುವಂತಹ ಕಾನೂನುಗಳನ್ನು ನೀವು ತಿಳಿದುಕೊಂಡರೆ ಅನುಕೂಲವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮದುವೆಯ ನಂತರ ವಿಚ್ಚೇದನ ಅರ್ಜಿಗಳು ಹೆಚ್ಚಾಗಿ ಬರುತ್ತಿರುವುದು ವಿಷಾದಕರ ಸಂಗತಿ. ಗಂಡ, ಹೆಂಡತಿ ಸುಖ ದಿಂದ ಜೀವನ ನಡೆಸಬೇಕು. ಬೇರೆಯ ವರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.

ವಕೀಲ ಸಂಘದ ಪ್ರಧಾನ ಕಾರ್ಯ ದರ್ಶಿ ಅರುಣ್‍ಕುಮಾರ್ ಮಾತನಾಡಿ, ಚಾಮರಾಜನಗರ ಜಿಲ್ಲೆ ಬಾಲ್ಯ ವಿವಾಹ ದಲ್ಲಿ 4ನೇ ಸ್ಥಾನದಲ್ಲಿದೆ. ಇದನ್ನು ತಡೆಗ ಟ್ಟಲು ವಿದ್ಯಾರ್ಥಿಗಳು ಶ್ರಮವಹಿಸಬೇಕು ಎಂದು ತಿಳಿಸಿದರು.

ಮಹಿಳಾ ಪೊಲೀಸ್ ಪಿಎಸ್‍ಐ ಉಮಾವತಿ ಮಾತನಾಡಿ, ವಿದ್ಯಾರ್ಥಿಗಳಾಗಲಿ, ವಿದ್ಯಾರ್ಥಿನಿಯರಾಗಲಿ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆ ಕೊಡುವುದು ಅಪರಾಧವಾಗುತ್ತದೆ ತೊಂದರೆ ಅನುಭವಿ ಸಿದ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಬಂದು ದೂರು ನೀಡಬಹುದು ಎಂದು ತಿಳಿಸಿದರು.

ಬಾಲ ನ್ಯಾಯಮಂಡಲಿ ಸದಸ್ಯ ಟಿ.ಜೆ. ಸುರೇಶ್ ಬ್ಯಾಲ ವಿವಾಹದಿಂದ ಅಗುವ ಪರಿಣಾಮಗಳ ಬಗ್ಗೆ ತಿಳಿಸಿದರು. ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅಧೀಕ್ಷಕ ಜಯಶಂಕರ್ ಮಾತನಾಡಿ ದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Translate »