ಮುನಿರತ್ನ, ಜಾರಕಿಹೊಳಿ ಸಂಪುಟ  ಸೇರೋದು ಖಚಿತ: ನಾರಾಯಣಗೌಡ
ಮೈಸೂರು

ಮುನಿರತ್ನ, ಜಾರಕಿಹೊಳಿ ಸಂಪುಟ ಸೇರೋದು ಖಚಿತ: ನಾರಾಯಣಗೌಡ

July 2, 2021

ಮೈಸೂರು, ಜು.1(ವೈಡಿಎಸ್)- ಶಾಸಕ ಮುನಿರತ್ನ ಮತ್ತು ರಮೇಶ್ ಜಾರಕಿಹೊಳಿ ಅವರು ಯಾಕೆ ಸಚಿವ ಸಂಪುಟ ಸೇರಬಾರದು? ಎಂದು ಸುದ್ದಿಗಾರರನ್ನೇ ಮರು ಪ್ರಶ್ನಿಸಿದ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಕೆ.ಸಿ.ನಾರಾಯಣಗೌಡ, ಅವರಿಬ್ಬರೂ ಸಚಿವ ಸಂಪುಟ ಸೇರೇ ಸೇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುನಿರತ್ನ ಪ್ರಕರಣ ಇತ್ಯರ್ಥವಾಗಿದೆ. ರಮೇಶ್ ಜಾರಕಿಹೊಳಿ ಪ್ರಕರಣ ಕೂಡ ನ್ಯಾಯಾಲಯದಲ್ಲಿ ಕ್ಲಿಯರ್ ಆಗಲಿದೆ. ರಮೇಶ್ ಜಾರಕಿಹೊಳಿ ದೆಹಲಿಗೆ ವೈಯಕ್ತಿಕ ಕೆಲಸದ ಮೇಲೆ ಹೋಗಿರುತ್ತಾರೆ. ಆದರೆ, ಹೈಕಮಾಂಡ್ ಭೇಟಿಗೆ ಹೋಗಿಲ್ಲ. ಮೊದಲಿ ನಿಂದಲೂ ಮುಂಬೈನಲ್ಲಿ ಅವರ ಕಚೇರಿ ಮತ್ತು ಮನೆ ಇರುವುದರಿಂದ ಹೋಗುತ್ತಿರು ತ್ತಾರೆ. ಹಾಗಾಗಿ ಮುಂಬೈಗೆ ಹೋದ ಕೂಡಲೇ ಬೇರೆ ಕೆಲಸಕ್ಕೆ ಹೋಗಿದ್ದಾ ರೆಂದು ತಿಳಿಯುವುದು ತಪ್ಪು ಎಂದರು.
ತಪ್ಪೇನಿದೆ: ಅವರ ಮುಂಬೈ ಮನೆ ಪ್ರದೇಶದಲ್ಲಿಯೇ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಮನೆಯೂ ಇದೆ. ಹೀಗಾಗಿ ಆಗಾಗ್ಗೆ ಅವರನ್ನು ಭೇಟಿ ಮಾಡುತ್ತಿರುತ್ತಾರೆ. ಅದರಲ್ಲಿ ತಪ್ಪೇನಿದೆ? ಎಂದರು.

ಹಸ್ತಕ್ಷೇಪವಿಲ್ಲ: ರಾಜ್ಯದಲ್ಲಿ ಮುಖ್ಯ ಮಂತ್ರಿ ಬದಲಾವಣೆ ಇಲ್ಲ. ಮುಂದಿನ 2 ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಮುಂಬರುವ ಚುನಾವಣೆಯೂ ಅವರ ನೇತೃತ್ವದಲ್ಲೇ ನಡೆಯುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಯಾವುದೇ ಇಲಾಖೆಯಲ್ಲೂ ಸಿಎಂ ಪುತ್ರ ವಿಜಯೇಂದ್ರರ ಹಸ್ತಕ್ಷೇಪವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಮನ್‍ಮುಲ್‍ನ ಹಾಲಿಗೆ ನೀರು ಬೆರೆಸುವ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಸ್ಥಳೀಯ ಪೆÇಲೀಸರ ತನಿಖೆ ಮುಗಿಯಲಿ ಎಂಬ ಕಾರಣಕ್ಕೆ ಸಿಐಡಿ ತನಿಖೆ ವಿಳಂಬ ಆಗಿರಬಹುದು ಎಂದರು.

ಜಲಾಶಯದಲ್ಲಿ ಬಿರುಕಿಲ್ಲ: ಚೆಲುವರಾಯಸ್ವಾಮಿ ಆಡಿಯೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ವಿಷಯ ನನಗೆ ಗೊತ್ತಿಲ್ಲ. ಕೆಆರ್‍ಎಸ್ ಜಲಾಶಯದಲ್ಲಿ ಬಿರುಕು ಎಂಬುದು ವದಂತಿಯಷ್ಟೆ. ಅಲ್ಲಿ ಯಾವುದೇ ಬಿರುಕು ಕಾಣಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕೊರೊನಾ ಕಡಿಮೆ ಆಗಿದೆಯೇ?: ಅಧಿವೇಶನ ಕರೆಯಲು ಸರ್ಕಾರಕ್ಕೆ ಭಯವಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವರು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರ ಬಗ್ಗೆ ಗೌರವವಿದೆ. ಕಿಟ್ ಹಂಚಲು ಸಾವಿರಾರು ಮಂದಿ ಸೇರುತ್ತಾರೆ. ಕೊರೊನಾ ಇನ್ನು ಕಡಿಮೆಯೇ ಆಗಿಲ್ಲ. ಅಧಿವೇಶವನವನ್ನು ಕರೆಯಲು ಹೇಗೆ ಸಾಧ್ಯ. ಕಳೆದ ಬಾರಿ ಅಧಿವೇಶನ ಸಂದರ್ಭದಲ್ಲೇ ಸಿದ್ದರಾಮಯ್ಯ ಅವರಿಗೆ ಪಾಸಿಟಿವ್ ಬಂದಿತ್ತು. ಅದನ್ನು ಅವರು ಮರೆಯಬಾರದು ಎಂದರು. ಜಿ¯್ಲÁಧಿಕಾರಿ ಡಾ. ಬಗಾದಿ ಗೌತಮ್ ಇದ್ದರು.

Translate »