ರಾಷ್ಟ್ರೀಯ ವೈದ್ಯರ ದಿನ; ನಾಲ್ವರು ತಜ್ಞರಿಗೆ ಸನ್ಮಾನ
ಮೈಸೂರು

ರಾಷ್ಟ್ರೀಯ ವೈದ್ಯರ ದಿನ; ನಾಲ್ವರು ತಜ್ಞರಿಗೆ ಸನ್ಮಾನ

July 2, 2021

ಮೈಸೂರು,ಜು.1(ಎಂಕೆ)-`ರಾಷ್ಟ್ರೀಯ ವೈದ್ಯರ ದಿನ’ದಂಗವಾಗಿ ಮೈಸೂರಿನ `ಸುವರ್ಣ ಬೆಳಕು ಫೌಂಡೇಷನ್’ ಹಾಗೂ `ಯೂತ್ ಹಾಸ್ಟೆಲ್’ ಜಂಟಿಯಾಗಿ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ ಮಧುಮೇಹ ತಜ್ಞ ಡಾ.ಎ.ಆರ್.ರೇಣುಕಾ ಪ್ರಸಾದ್, ಶ್ವಾಸಕೋಶ ತಜ್ಞರಾದ ಡಾ.ಆರ್.ಅವಿನಾಶ್, ಡಾ.ಕೆ.ಮಧು, ಆಯುರ್ವೇದ ತಜ್ಞ ಡಾ.ಹೆಚ್.ಎನ್. ನವೀನ್‍ಕುಮಾರ್ ಅವರನ್ನು ಸನ್ಮಾನಿಸಲಾಯಿತು. ನಗರದ ಗಂಗೋತ್ರಿ ಬಡಾವಣೆ ಯಲ್ಲಿರುವ ಯೂತ್ ಹಾಸ್ಟೆಲ್‍ನಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಯೂತ್ ಹಾಸ್ಟೆಲ್ ವ್ಯವಸ್ಥಾಪಕ ಪ್ರಸಾದ್ ಅವರು ವೈದ್ಯರನ್ನು ಅಭಿನಂದಿಸಿದರು. ಬಳಿಕ ಮಾತನಾಡಿ, ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲಿ ವೈದ್ಯರು ತಮ್ಮ ಜೀವದ ಹಂಗು ತೊರೆದು ಸೇವೆ ಮಾಡಿದ್ದಾರೆ. ವೈದ್ಯರ ಸೇವೆಯನ್ನು ಸ್ಮರಿಸಬೇಕೆ ಹೊರತು ಅವರ ಮೇಲೆ ಹಲ್ಲೆ ಮಾಡುವುದಲ್ಲ ಎಂದರು. ಸುವರ್ಣ ಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ್ ನಾಯಕ್, ಯೋಗ ಶಿಕ್ಷಕ ಎನ್.ಅನಂತ, ಪ್ರದೀಪ್, ತೇಜಸ್, ಚೆಸ್ ಆಟಗಾರ ವಿಜಯೇಂದ್ರ, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »