ಸಂಸದೆ ಸುಮಲತಾ ಕಾರು ಚಾಲಕ ಸೇರಿ ೭ ಮಂದಿ ಕಾಂಗ್ರೆಸ್ ಮುಖಂಡರ ವಿರುದ್ಧ ಕೊಲೆ ಯತ್ನ ಕೇಸ್
ಮೈಸೂರು

ಸಂಸದೆ ಸುಮಲತಾ ಕಾರು ಚಾಲಕ ಸೇರಿ ೭ ಮಂದಿ ಕಾಂಗ್ರೆಸ್ ಮುಖಂಡರ ವಿರುದ್ಧ ಕೊಲೆ ಯತ್ನ ಕೇಸ್

March 11, 2022

ಭೇರ್ಯ,ಮಾ.೧೦(ಮಹೇಶ್)-ಕೆ.ಆರ್.ನಗರ ತಾಲೂಕು ಮುಂಜನಹಳ್ಳಿಯಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ವೇಳೆ ನಡೆದ ಗಲಾಟೆಗೆ ಸಂಬAಧಿಸಿದAತೆ ಸಂಸದೆ ಸುಮಲತಾ ಅವರು ಜೆಡಿಎಸ್‌ನ ೭ ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಗುರು ವಾರ ಜೆಡಿಎಸ್ ಪರಿಶಿಷ್ಟ ಪಂಗಡದ ಮುಖಂಡ ಮಹೇಶ್ ನಾಯಕ್ ಅವರು ಸುಮಲತಾ ಅವರ ಕಾರು ಚಾಲಕ ಸೇರಿದಂತೆ ಆರು ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
ಮುಂಜನಹಳ್ಳಿಯಲ್ಲಿ ಬುಧವಾರ ನಡೆದ ಗುದ್ದಲಿ ಪೂಜೆ ಕಾರ್ಯಕ್ರಮದ ವೇಳೆ ಹಾರೆಯಿಂದ ನನ್ನ ಎದೆಗೆ ತಿವಿಯಲಾಗಿದೆ. ತಾನು ಮೈಸೂರಿನ ಜಯ ದೇವ ಹೃದ್ರೋಗ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಸಾಲಿಗ್ರಾಮ ಠಾಣೆ ಪೊಲೀಸರಿಗೆ ಸಂಸದೆ ಸುಮಲತಾ ಅಂಬರೀಶ್ ಅವರ ಕಾರು ಚಾಲಕ, ಕಾಂಗ್ರೆಸ್ ಮುಖಂಡ ಡಿ. ರವಿಶಂಕರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಭೇರ್ಯ ಗ್ರಾಮದ ಟಿ.ಸಿ.ಮಂಜು, ಮುಂಜನಹಳ್ಳಿ ಗ್ರಾಪಂ ಸದಸ್ಯ ಮಹದೇವನಾಯಕ, ಕಾವಲ್ ಹೊಸೂರು ಗ್ರಾಮದ ಕಾಂತರಾಜ್ ವಿರುದ್ಧ ದೂರು ಸಲ್ಲಿಸಿದ್ದಾರೆ. ಈ ಸಂಬAಧ ಸಾಲಿಗ್ರಾಮ ಠಾಣೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖ ಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »