ಮುಡಾ ಆಯುಕ್ತರ ಮೇಲೆ ಹಲ್ಲೆ: ಆರ್‌ಟಿಐ ಕಾರ್ಯಕರ್ತ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲು
ಮೈಸೂರು

ಮುಡಾ ಆಯುಕ್ತರ ಮೇಲೆ ಹಲ್ಲೆ: ಆರ್‌ಟಿಐ ಕಾರ್ಯಕರ್ತ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲು

March 11, 2022

ತಮಗೆ ಸಂಬAಧಿಸದ ವಿಚಾರದಲ್ಲಿ ಮಾತಿನ ಚಕಮಕಿ: ವಿಡಿಯೋ ಮಾಡುವುದನ್ನು ಆಕ್ಷೇಪಿಸಿದ್ದಕ್ಕೆ ರೊಚ್ಚಿಗೆದ್ದು ಹಲ್ಲೆ
ಮೈಸೂರು, ಮಾ.೧೦ (ಆರ್‌ಕೆ, ಎಸ್‌ಬಿಡಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಆಯುಕ್ತ ಡಿ.ಬಿ.ನಟೇಶ್ ಮೇಲೆ ಅವರ ಕಚೇರಿ ಯಲ್ಲೇ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಮೈಸೂರಿನ ಬೋಗಾದಿ ನಿವಾಸಿ ಶ್ರೀನಿವಾಸ್ ಹಲ್ಲೆ ನಡೆಸಿದವನಾಗಿದ್ದು, ಈತ ಆರ್‌ಟಿಐ ಕಾರ್ಯ ಕರ್ತ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಡಿ.ಬಿ.ನಟೇಶ್ ಅವರ ಎಡಗೈ ಹೆಬ್ಬೆರಳಿಗೆ ತರಚಿದ ಗಾಯವಾಗಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ(ಎಂಎಲ್‌ಸಿ) ಮಾಡಿಸಿದ ನಂತರ ಲಕ್ಷಿö್ಮÃ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮುಡಾ ಆಯುಕ್ತ ಡಿ.ಬಿ.ನಟೇಶ್ ನೀಡಿದ ದೂರಿ ನನ್ವಯ ಬೋಗಾದಿ ಬ್ಯಾಂಕ್ ಎಂಪ್ಲಾಯೀಸ್ ಲೇಔಟ್ ನಿವಾಸಿ ಶ್ರೀನಿವಾಸ್ ವಿರುದ್ಧ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿರುವ ಕಾರಣಕ್ಕೆ ಐಪಿಸಿ ೩೫೩ ಹಾಗೂ ಏಕವಚನ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಐಪಿಸಿ ೫೦೪ರಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದ್ದು, ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರ್‌ಟಿಐ ಕಾರ್ಯಕರ್ತನೆಂದು ಹೇಳಿಕೊಂಡು ಕಚೇರಿಗೆ ಬಂದ ಶ್ರೀನಿವಾಸ್, ತಮಗೆ ಸಂಬAಧಿಸದ ಮಾಹಿತಿ ಕೇಳಿದರು. ಅಲ್ಲದೆ ಈ ವೇಳೆ ಮೊಬೈಲ್ ನಿಂದ ವಿಡಿಯೋ ಚಿತ್ರೀಕರಿಸುತ್ತಿದ್ದರು. ಇದನ್ನು ಕಚೇರಿಯಲ್ಲಿದ್ದ ದಫೇದಾರ್ ಗಮನಿಸಿ, ವಿಡಿಯೋ ಮಾಡಬಾರದು ಎಂದು ಶ್ರೀನಿವಾಸ್‌ಗೆ ತಿಳಿ ಹೇಳಿ ದರು. ಈ ವೇಳೆ ಮಾತಿಗೆ ಮಾತು ಬೆಳೆದು, ಗಲಾಟೆ ಉಂಟಾಯಿತು. ನನ್ನ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದ ಲ್ಲದೆ, ಕುತ್ತಿಗೆಪಟ್ಟಿ ಹಿಡಿದು, ಹಲ್ಲೆಗೆ ಮುಂದಾಗಿದ್ದು ನನ್ನ ಹೆಬ್ಬೆರಳಿಗೆ ತರಚಿದ ಗಾಯವಾಗಿದೆ ಎಂದು ಡಿ.ಬಿ.ನಟೇಶ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಡಿ.ಬಿ.ನಟೇಶ್ ಪ್ರತಿಕ್ರಿಯಿಸಿ, ಶ್ರೀನಿವಾಸ್ ಎಂದು ಪರಿಚಯಿಸಿಕೊಂಡ ವ್ಯಕ್ತಿ, ತನಗೆ ಸಂಬAಧಿಸದ ಮಾಹಿತಿ ಕೇಳಿದ್ದಲ್ಲದೆ, ಮೊಬೈಲ್‌ನಿಂದ ವಿಡಿಯೋ ಮಾಡಿಕೊಳ್ಳು ತ್ತಿದ್ದ. ನಮ್ಮ ಕಚೇರಿಯಲ್ಲಿದ್ದವರು ವಿಡಿಯೋ ಮಾಡಬಾರದು ಎಂದು ಆತನಿಗೆ ಸೂಚಿಸಿ ದರು. ಆಗ ಇದ್ದಕ್ಕಿದ್ದಂತೆ ಗಲಾಟೆ ಮಾಡಿ, ದಫೇದಾರ್‌ನನ್ನು ನನ್ನ ಮೇಲೆ ತಳ್ಳಿದ. ನಮ್ಮ ಸಿಬ್ಬಂದಿ ಹಿಡಿಯಲು ಪ್ರಯತ್ನಿ ಸಿದರಾದರೂ ಆತ ತಪ್ಪಿಸಿಕೊಂಡ. ಈ ಹಿಂದೆಯೂ ಮುಡಾದ ಕೆಲ ಸಿಬ್ಬಂದಿಯನ್ನು ಬೆದರಿಸಲು ಯತ್ನಿಸಿರುವುದಾಗಿ ತಿಳಿದುಬಂದಿದ್ದು, ಈ ಸಂಬAಧ ಪೊಲೀ ಸರಿಗೆ ದೂರು ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕಚೇರಿಯಲ್ಲಿ ದಾಂಧಲೆ: ಶ್ರೀನಿವಾಸ್, ಮುಡಾಕ್ಕೆ ಸಂಬAಧಿಸಿದ ಕೆಲ ಮಾಹಿತಿಗಾಗಿ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಆದರೆ ಸಮರ್ಪಕ ಮಾಹಿತಿಯನ್ನು ಸಕಾಲದಲ್ಲಿ ಒದಗಿಸಿರಲಿಲ್ಲ ಎಂದು ವಿಚಾರಿಸುವುದಕ್ಕಾಗಿ ಗುರುವಾರ ಸಂಜೆ ೫.೪೦ರ ವೇಳೆಯಲ್ಲಿ ಮುಡಾಗೆ ಬಂದಿದ್ದಾರೆ. ಆಯುಕ್ತರಿಂದ ಮಾಹಿತಿ ಪಡೆಯಲೆಂದು ಬಂದ ಶ್ರೀನಿವಾಸ್, ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಲೇ ಕಚೇರಿ ಒಳಗೆ ಹೋಗಿದ್ದಾರೆ. ಇದಕ್ಕೆ ಅಲ್ಲಿದ್ದ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿ, ಮೊಬೈಲ್ ಆಫ್ ಮಾಡುವಂತೆ ತಿಳಿಸಿದ್ದಾರೆ. ಮುಡಾ ಆಯುಕ್ತರೂ ವಿಡಿಯೋ ಮಾಡದಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಜಗ್ಗದ ಶ್ರೀನಿವಾಸ್, ಇಲ್ಲಿನ ಭ್ರಷ್ಟಾಚಾರ, ಅವ್ಯವಹಾರವನ್ನು ಬಯಲಿಗೆಳೆಯುತ್ತೇನೆ. ಅದಕ್ಕಾಗಿಯೇ ವಿಡಿಯೋ ಮಾಡುತ್ತಿರುವೆ ಎಂದು ಹೇಳಿದ್ದಾನೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿ, ಶ್ರೀನಿವಾಸ್ ಹಲ್ಲೆ ನಡೆಸಿದ್ದಾನೆ. ಕಚೇರಿಯಲ್ಲಿ ಕೂಗಾಟ ಕೇಳಿ ಓಡಿಬಂದ ಸಿಬ್ಬಂದಿ, ಸಾರ್ವಜನಿಕರು ಇಬ್ಬರ ಜಗಳ ಬಿಡಿಸಿ, ಆಯುಕ್ತರನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಮತ್ತೊಂದು ಮೂಲದಿಂದ ತಿಳಿದುಬಂದಿದೆ.

Translate »