ಮೈಸೂರಲ್ಲಿ ಪ್ರತ್ಯೇಕ ಅಪಘಾತ: ಇಬ್ಬರು ಸಾವು, ಓರ್ವನಿಗೆ ಗಂಭೀರ ಗಾಯ
ಮೈಸೂರು

ಮೈಸೂರಲ್ಲಿ ಪ್ರತ್ಯೇಕ ಅಪಘಾತ: ಇಬ್ಬರು ಸಾವು, ಓರ್ವನಿಗೆ ಗಂಭೀರ ಗಾಯ

March 11, 2022

ಮೈಸೂರು, ಮಾ.೧೦(ಆರ್‌ಕೆ, ಎಸ್‌ಬಿಡಿ)- ಮೈಸೂರಿನಲ್ಲಿ ಬುಧವಾರ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೈಸೂರಿನ ಮಂಚೇಗೌಡನಕೊಪ್ಪಲು ನಿವಾಸಿ ರಾಮಕೃಷ್ಣ ಅವರ ಮಗ ಭರತ್ (೩೫) ಹಾಗೂ ಚಾಮರಾಜನಗರ ಜಿಲ್ಲೆ, ಹನೂರು ಸಮೀಪದ ಪಿ.ಜಿ.ಪಾಳ್ಯದ ಕೃಷ್ಣಪ್ಪ ಅವರ ಪುತ್ರ ಜಡೆಯಪ್ಪ ಮೃತಪಟ್ಟಿದ್ದು, ಗಾಯಗೊಂಡಿರುವ ಮತ್ತೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ೧: ಮೈಸೂರು ಹೊರವಲಯದ ಗದ್ದಿಗೆ ರಸ್ತೆಯಲ್ಲಿ ಬುಧವಾರ ರಾತ್ರಿ ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಭರತ್(೩೫) ಸಾವ ನ್ನಪ್ಪಿದ್ದಾರೆ. ತವರಿನಲ್ಲಿದ್ದ ಪತ್ನಿಯನ್ನು ಕರೆತರಲೆಂದು ಹೀರೋ ಹೋಂಡಾ ಪ್ಯಾಷನ್ ಪ್ರೋ ಬೈಕಿನಲ್ಲಿ ಬೆಟ್ಟದಬೀಡು ಗ್ರಾಮಕ್ಕೆ ಹೋಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಬಜಾಜ್ ಪಲ್ಸರ್ ಬೈಕು, ಗದ್ದಿಗೆ ರಸ್ತೆಯ ಮಾದಳ್ಳಿ ಗ್ರಾಮದ ಬಳಿ ಡಿಕ್ಕಿ ಹೊಡೆದಿದೆ. ಪ್ಯಾಷನ್ ಪ್ರೋಗೆ ಡಿಕ್ಕಿ ಹೊಡೆದ ಬಜಾಜ್ ಪಲ್ಸರ್ ಬೈಕು, ಸುಮಾರು ೩೦ ಅಡಿ ದೂರಕ್ಕೆ ಉಜ್ಜಿ ಕೊಂಡು ಹೋಯಿತು ಎಂದು ಅಲ್ಲಿನ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

ಘಟನೆಯಲ್ಲಿ ಪ್ಯಾಷನ್ ಪ್ರೋ ಬೈಕ್‌ನಲ್ಲಿದ್ದ ಭರತ್ ಬಲತೊಡೆ ಬಳಿ ತೀವ್ರ ಗಾಯಗಳಾಗಿ ರಕ್ತಸ್ರಾವವಾದ ಕಾರಣ, ಅವರನ್ನು ಅಪೊಲೋ ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ನಂತರ ಸುಯೋಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿ ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮುಂಜಾನೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಡಿಕ್ಕಿ ಹೊಡೆದ ಬಜಾಜ್ ಪಲ್ಸರ್ ಬೈಕ್ ಸವಾರ ಸಹ ಗಾಯಗೊಂಡಿದ್ದು, ಆತನನ್ನು ಮೈಸೂರಿನ ಬೃಂದಾವನ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಇಲವಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಭರತ್ ದೇಹ ವನ್ನು ವಾರಸುದಾರರಿಗೆ ಒಪ್ಪಿಸಿದರು.

ಘಟನೆ ೨: ಬೈಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಚಾಮ ರಾಜನಗರ ಜಿಲ್ಲೆ, ಹನೂರು ಸಮೀಪದ ಪಿ.ಜಿ.ಪಾಳ್ಯದ ಕೃಷ್ಣಪ್ಪ ಅವರ ಪುತ್ರ ಜಡೆಯಪ್ಪ ಮೃತಪಟ್ಟಿದ್ದಾರೆ. ಮೈಸೂರಿನ ಖಾಸಗಿ ಬಡಾವಣೆಯೊಂದರ ವಾಚ್‌ಮನ್ ಆಗಿ ಕೆಲಸ ಮಾಡಿಕೊಂಡಿದ್ದ ಇವರು, ಬುಧವಾರ ಸಂಜೆ ಲಿಂಗಾAಬುದಿ ಪಾಳ್ಯ, ಆರ್‌ಟಿ ನಗರ ವೃತ್ತದ ಬಳಿ ಬೈಕ್‌ನಲ್ಲಿ ತೆರಳು ವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ನೆಲಕ್ಕುರುಳಿದ ಜಡೆಯಪ್ಪ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯ ಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಹೆಲ್ಮೆಟ್ ಧರಿಸಿರಲಿಲ್ಲ: ಜಡೆಯಪ್ಪ ಹೆಲ್ಮೆಟ್ ಧರಿಸಿದ್ದರೆ ಪ್ರಾಣಾಪಾಯದಿಂದ ಪಾರಾಗುತ್ತಿದ್ದರು. ಹೆಲ್ಮೆಟ್ ಧರಿಸದ ಕಾರಣ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬAಧ ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತವಾದಾಗ ತಲೆಗೆ ಪೆಟ್ಟು ಬೀಳುವ ಸಾಧ್ಯತೆಯೇ ಹೆಚ್ಚು. ಈ ಕಾರಣದಿಂದಲೇ ಜೀವರಕ್ಷಕ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಬಹುತೇಕ ಜನ, ಪೊಲೀಸರಿಗೆ ದಂಡ ತೆರದಂತೆ ತಪ್ಪಿಸಿಕೊಳ್ಳುವುದಕ್ಕಾಗಿ ಮಾತ್ರ ಹೆಲ್ಮೆಟ್ ಧರಿಸುತ್ತಾರೆ. ತಪಾಸಣೆ ನಡೆಸುತ್ತಿರುವ ಸ್ಥಳದಲ್ಲಿ ಅಥವಾ ಸಿಸಿಟಿವಿ ಕ್ಯಾಮರಾ ಅಳವಡಿಸಿರುವ ಜಾಗದಲ್ಲಿ ಮಾತ್ರ ಹೆಲ್ಮೆಟ್ ಧರಿಸಿಕೊಂಡು, ನಂತರ ದ್ವಿಚಕ್ರ ವಾಹನದ ಟ್ಯಾಂಕ್ ಮೇಲಿಟ್ಟು ಅಥವಾ ಹ್ಯಾಂಡಲ್ ಅಥವಾ ಮಿರರ್‌ಗೆ ನೇತು ಹಾಕುತ್ತಾರೆ. ದಂಡ ತೆರದೆ ಹಣ ಉಳಿಸುವ ಉದ್ದೇಶಕ್ಕಷ್ಟೇ ಅಲ್ಲದೆ ಜೀವ ಉಳಿಸಿಕೊಳ್ಳುವುದಕ್ಕಾಗಿ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

Translate »