ಸಿಐಐ ಕರ್ನಾಟಕ ಅಧ್ಯಕ್ಷರಾಗಿ ಅರ್ಜುನ್ ರಂಗ ಅಧಿಕಾರ ಸ್ವೀಕಾರ
ಮೈಸೂರು

ಸಿಐಐ ಕರ್ನಾಟಕ ಅಧ್ಯಕ್ಷರಾಗಿ ಅರ್ಜುನ್ ರಂಗ ಅಧಿಕಾರ ಸ್ವೀಕಾರ

March 11, 2022

ಸೈಕಲ್ ಪ್ಯೂರ್ ಅಗರಬತ್ತಿ ಮ್ಯಾನೆಜಿಂಗ್ ಡೈರೆಕ್ಟರ್ ಅರ್ಜುನ್ ರಂಗ (ಎಡಗಡೆ) ಅವರನ್ನು ನಿಕಟಪೂರ್ವ ಸಿಐಐ ಅಧ್ಯಕ್ಷ ರಮೇಶ್ ರಾಮದುರೈ ಅವರು ಅಭಿನಂದಿಸುತ್ತಿರುವುದು.
ಅರೂನ್ ರಾಮನ್, ಮುತ್ತುಕುಮಾರ್ ನಂತರ ಸಿಐಐ ಕರ್ನಾಟಕದ ಅಧ್ಯಕ್ಷರಾದ ಮೈಸೂರಿನ ಮೂರನೆಯವರು ಎಂಬ ಹೆಮ್ಮೆ

ಮೈಸೂರು, ಮಾ. ೧೦- ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟಿç (ಸಿಐಐ) ಕರ್ನಾಟಕ ರಾಜ್ಯ ಕೌನ್ಸಿಲ್‌ನ ೨೦೨೨-೨೩ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಸ್ಥೆ (ಎಐಎಎಂಎ) ಅಧ್ಯಕ್ಷರೂ ಆದ ಮೈಸೂರಿನ ಸೈಕಲ್ ಅಗರ್‌ಬತ್ತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ರಂಗ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ಸಿಐಐ ರಾಜ್ಯಾಧ್ಯಕ್ಷ ರಮೇಶ್ ರಾಮದುರೈ ಅವರಿಂದ ಅಧಿಕಾರ ಸ್ವೀಕರಿಸಿದರು. ಅರ್ಜುನ್ ರಂಗ ಅವರು ಈ ಉದ್ಯಮ ಸಂಸ್ಥೆಯೊAದಿಗೆ ಅನೇಕ ವರ್ಷಗಳಿಂದ ನಿಕಟ ಸಂಬAಧ ಹೊಂದಿದ್ದಾರೆ ಮತ್ತು ಈ ಹಿಂದೆ ೨೦೧೭-೧೮ನೇ ಸಾಲಿನಲ್ಲಿ ಸಿಐಐ, ಮೈಸೂರು ವಲಯದ ಅಧ್ಯಕ್ಷರಾಗಿದ್ದರು.

ತಮ್ಮ ಹೊಸ ಜವಾಬ್ದಾರಿ ಪಾತ್ರದಲ್ಲಿ ಅರ್ಜುನ್ ಅವರು ಯೋಜನಾ ವಿಷಯಗಳಲ್ಲಿ ಸರ್ಕಾರದೊಂದಿಗೆ ನಿಕಟತೆಯಿಂದ ಕೆಲಸ ಮಾಡಬಲ್ಲರು. ಇವರು ಚಿಂತನಾಶೀಲವುಳ್ಳ ನಾಯಕರೊಂದಿಗೆ ಸಂಪರ್ಕ ಹೊಂದಿದ್ದು, ಹೊಸ ವಹಿವಾಟು ಅವಕಾಶಗಳನ್ನು ಸೃಷ್ಟಿಸುವ ಕಾರ್ಯತಂತ್ರದಲ್ಲಿ ಬದಲಾವಣೆಗಳನ್ನು ತರುವ ವಿಶ್ವಾಸವಿದೆ.
ನೂತನ ಹುದ್ದೆ ಬಗ್ಗೆ ಪ್ರತಿಕ್ರಿಯಿಸಿದ ಅರ್ಜುನ್, ಸಿಐಐ ಕರ್ನಾಟಕ ರಾಜ್ಯ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ನಾನು ಧನ್ಯವಾದ ಹೇಳಬಯಸುತ್ತೇನೆ. ವಹಿವಾಟುಗಳು, ಕಂಪನಿಗಳು, ವಾಣ ಜ್ಯೋದ್ಯಮಿಗಳನ್ನು ಮುನ್ನಡೆಸುವುದು ಮತ್ತು ಸಕ್ರಿಯಗೊಳಿಸಲು ನನಗೆ ಇದು ಒಂದು ಅವಕಾಶವಾಗಿದೆ. ಈ ಒಂದು ಹೊಸ ಪಾತ್ರದಲ್ಲಿ, ಎಲ್ಲಾ ಪಾಲುದಾರರಿಗೆ ಅನುಕೂಲವಾಗುವ ನೀತಿಗಳ ಮೂಲಕ ಉದ್ಯಮ ಸಂಸ್ಥೆಗೆ ಒಳ್ಳೆಯ ಹೆಸರು ತರಲು ನಾನು ಎದುರು ನೋಡುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು.

“ನಾವು ಕರ್ನಾಟಕದ ಸ್ಥಾನಮಾನವನ್ನು ಭಾರತದ ಜ್ಞಾನ, ನಾವೀನ್ಯತೆ ಮತ್ತು ಆರ್ ಅಂಡ್ ಡಿ ರಾಜಧಾನಿಯಾಗಿ ಪ್ರವರ್ಧಿಸಲು ಬಯಸುತ್ತೇವೆ ಮತ್ತು ನಮ್ಮ ರಾಜ್ಯವನ್ನು ಉದ್ಯಮ ಬೆಳವಣ ಗೆ ಮತ್ತು ವಿದೇಶಿ ಹೂಡಿಕೆಗಳಿಗೆ ಜಾಗತಿಕ ತಾಣವನ್ನಾಗಿಯೂ ಮಾಡಲು ಪ್ರಯತ್ನಿಸುತ್ತೇವೆ. ನಮ್ಮ ಸರ್ಕಾರದ ಆತ್ಮ ನಿರ್ಭರ ಭಾರತ ದೃಷ್ಟಿಕೋನಕ್ಕೆ ಅನುಗುಣವಾಗಿ ಕಾರ್ಯತಂತ್ರದ ನೀತಿಯ ಮಧ್ಯಸ್ಥಿಕೆ ವಹಿಸಿ ನಮ್ಮ ರಾಜ್ಯದ ಸ್ಟಾರ್ಟ್ ಅಪ್ ಎಕೋ ಸಿಸ್ಟಂ ಅನ್ನು ಬಲಪಡಿಸಲು ನಾವು ಬಯಸುತ್ತೇವೆ” ಎಂದು ಆಶಿಸಿದರು. ಇದೇ ವೇಳೆ ವಿಜಯ್ ಕೃಷ್ಣನ್ ವೆಂಕಟೇಶನ್ ನೂತನ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

 

Translate »