ಮಾ.೧೨ರಂದು ೪೫ ಲಕ್ಷ ಕುಟುಂಬಗಳ ಮನೆ ಬಾಗಿಲಿಗೆ ಆಸ್ತಿ ದಾಖಲೆಗಳು
ಮೈಸೂರು

ಮಾ.೧೨ರಂದು ೪೫ ಲಕ್ಷ ಕುಟುಂಬಗಳ ಮನೆ ಬಾಗಿಲಿಗೆ ಆಸ್ತಿ ದಾಖಲೆಗಳು

March 10, 2022

ಇನ್ಮುಂದೆ ರೈತರೇ ಆಸ್ತಿ ಸರ್ವೇ ಮಾಡಿಸಿ, ನಕ್ಷೆ ತಯಾರಿಸಿ ಅನುಮೋದನೆ ಪಡೆಯಬಹುದು
ಬೆಂಗಳೂರು,ಮಾ.೯(ಕೆಎAಶಿ)-ಕAದಾಯ ಇಲಾಖೆ ಯಿಂದ ನೀಡಲಾಗುವ ಜಾತಿ, ಆದಾಯ ಪ್ರಮಾಣ ಪತ್ರ, ಅಟ್ಲಾಸ್, ಪಹಣ ದಾಖಲಾತಿಗಳನ್ನು ಲಕೋಟೆಯಲ್ಲಿ ಹಾಕಿ ರಾಜ್ಯದ ೪೫ ಲಕ್ಷ ಕುಟುಂಬ ಗಳ ಮನೆ ಬಾಗಿಲಿಗೆ ಉಚಿತವಾಗಿ ಮಾರ್ಚ್ ೧೨ರಂದು ತಲುಪಿಸಲಾಗುವುದೆಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಪರಿಷತ್‌ನಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಗೋವಿಂದರಾಜು ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಇಲಾಖೆಯಿಂದ ೪ ಪುಟಗಳವರೆಗಿನ ಪಹಣ ಗೆ ೧೫ ರೂ. ಪ್ರತಿ ಹೆಚ್ಚು ವರಿ ಪುಟಕ್ಕೆ ೨ ರೂ.ನಂತೆ, ಮ್ಯುಟೇಷನ್ ಪ್ರತಿ ಯೊಂದಕ್ಕೆ ೨೫ ರೂ. ಶುಲ್ಕ ಸಂಗ್ರಹಿಸಲಾಗುತ್ತಿದೆ. ೨೦೧೭ ರಿಂದ ೨೦೨೨ರವರೆಗೆ ೧೭೩ ಕೋಟಿ ಶುಲ್ಕ ಸಂಗ್ರಹವಾಗಿದೆ, ಕಂದಾಯ ಇಲಾಖೆಯ ಎಲ್ಲಾ ಸೇವೆಗಳನ್ನು ಉಚಿತವಾಗಿ ನೀಡುವ ಆಲೋಚನೆ ಸರ್ಕಾರದ ಮುಂದಿಲ್ಲ, ಆದರೆ ಪ್ರತಿ ಐದು ವರ್ಷ ಕ್ಕೊಮ್ಮೆ ಕಂದಾಯ ಇಲಾಖೆ ನಾಲ್ಕು ದಾಖಲೆಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ನೀಡಬೇಕು ಎಂದು ಕಾನೂನಿನಲ್ಲಿದೆ, ಅದನ್ನು ಈವರೆಗೂ ಯಾರು ನೋಡಿರಲಿಲ್ಲ. ರಾಜ್ಯಾದ್ಯಂತ ಉಚಿತವಾಗಿ ರೈತರ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. ಮಾರ್ಚ್ ೧೨ರಂದು ಮುಖ್ಯಮಂತ್ರಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ರಾಜ್ಯಾದ್ಯಂತ ೭೧೯ ಅಟಲ್ ಜನಸ್ನೇಹಿ ಕೇಂದ್ರ ಗಳಲ್ಲಿ ಕಂದಾಯ ದಾಖಲೆಗಳನ್ನು ವಿತರಣೆ ಮಾಡಲಾಗುತ್ತಿದೆ. ಸರ್ವೇ ಕಾರ್ಯಕ್ಕೆ ಸುಮಾರು ಒಂದು ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ಅವನ್ನು ಇತ್ಯರ್ಥಪಡಿಸಲು ಈಗಾಗಲೇ ೮೦೦ ಸರ್ವೇಯರ್ ಗಳನ್ನು ನೇಮಿಸಲಾಗಿದೆ. ಇನ್ನೂ ೮೦೦ ಸರ್ವೇ ಯರ್‌ಗಳನ್ನು ನೇಮಿಸಲಾಗುತ್ತಿದೆ ಎಂದರು.
ಸರ್ವೇಯಲ್ಲಿ ಮಹತ್ವದ ಬದಲಾವಣೆ ತರಲಾಗು ತ್ತಿದೆ. ಈ ಮೊದಲು ಜಮೀನಿನ ನಕ್ಷೆಯನ್ನು ಅಧಿ ಕಾರಿಗಳು ಅಥವಾ ಸಮೀಕ್ಷಾದಾರರು ತಯಾರಿ ಸಬೇಕು ಎಂಬ ರೂಢಿ ಇದೆ. ಅದರಲ್ಲಿ ಬದಲಾ ವಣೆ ತರಲಾಗುತ್ತಿದೆ. ಆಸ್ತಿ ಪಾಲು ಅಥವಾ ಇತರ ವೇಳೆ ರೈತರೇ ತಮ್ಮ ಜಮೀನಿನ ನಕ್ಷೆಯನ್ನು ತಯಾ ರಿಸಿಕೊಳ್ಳಬಹುದು. ಅದನ್ನು ಉಪನೋಂದಣ ಕಚೇರಿಯಲ್ಲಿ ಸಲ್ಲಿಸಬೇಕು. ಅದನ್ನು ಆಧರಿಸಿ ಉಪನೋಂದಣ ಕಚೇರಿಯಲ್ಲಿ ಅಪ್‌ಲೋಡ್ ಮಾಡಿ, ಆಸ್ತಿ ನೋಂದಣ ಮಾಡಿಕೊಡುವ ವ್ಯವಸ್ಥೆ ಯನ್ನು ಜಾರಿಗೆ ತರಲಾಗುತ್ತಿದೆ ಎಂದರು.

ರಾಜ್ಯದಲ್ಲಿರುವ ಬೀಳು ಜಮೀನು ಪ್ರಕರಣಗಳಲ್ಲಿ ಆರ್‌ಟಿಸಿ ತಿದ್ದುಪಡಿ ಮಾಡಲು ಮತ್ತೊಮ್ಮೆ ಅವಕಾಶ ನೀಡುವುದಾಗಿ ಇದೇ ಸಂದರ್ಭದಲ್ಲಿ ಎಂಎಲ್‌ಸಿ ಶ್ರೀಕಂಠೇಗೌಡರ ಮತ್ತೊಂದು ಪ್ರಸ್ತಾವಕ್ಕೆ ಉತ್ತರಿ ಸಿದರು. ರಾಜ್ಯದಲ್ಲಿ ೧,೦೮,೦೯,೦೧೮ ಎಕರೆ ಕಂದಾಯ ಬೀಳು ಜಮೀನುಗಳಿವೆ. ೧೯೬೬ರ ಕರ್ನಾಟಕ ಭೂ ಕಂದಾಯ ನಿಯಮ ೧೧೯ರ ಪ್ರಕಾರ ಮೂರು ವರ್ಷದ ಕಂದಾಯ ಪಾವತಿ ಮಾಡದಿದ್ದರೆ ಅದನ್ನು ಬೀಳು ಭೂಮಿ ಎಂದು ಪಹಣ ಯಲ್ಲಿ ನಮೂ ದಿಸಲಾಗುತ್ತದೆ. ಬದಲಾವಣೆ ಮಾಡಲು ೨೦೧೪ರ ಸೆಪ್ಟೆಂಬರ್ ೬ರವರೆಗೆ ಅವಕಾಶ ನೀಡಲಾಗಿತ್ತು, ಈಗಾಗಲೇ ಅವಧಿ ಮುಗಿದಿದೆ. ಮತ್ತೊಮ್ಮೆ ಅವ ಕಾಶ ನೀಡಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅವಕಾಶ ನೀಡಲಾಗುವುದು ಎಂದರು. ರೈತರ ಬಾಕಿ ಮೊಬಲಗನ್ನು ಪಾವತಿಸಿದರೆ ಪಹಣ ಯಲ್ಲಿ ತಿದ್ದುಪಡಿ ಮಾಡಿಕೊಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

Translate »