ಮೈಸೂರು

ಕಲಾಮಂದಿರದ ‘ಕಿರುರಂಗ’ ಮಂದಿರದಲ್ಲಿ ಪಾಶ್ರ್ವಸಂಗೀತ ನಾಟಕ ಪ್ರದರ್ಶನ

February 23, 2021

ಮೈಸೂರು,ಫೆ.22-ಮೈಸೂರಿನ ರಂಗವಲ್ಲಿ ತಂಡದಿಂದ ಫೆ.24 ಮತ್ತು 25ರಂದು ಸಂಜೆ 7 ಗಂಟೆಗೆ ಮೈಸೂರಿನ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಸಾಹಿತಿ ಶ್ರೀನಿವಾಸ ವೈದ್ಯ ಬರಹಗಳ ನ್ನಾಧರಿಸಿದ “ಪಾಶ್ರ್ವಸಂಗೀತ” ನಾಟ ಕದ ಪ್ರದರ್ಶನ ಏರ್ಪಡಿಸಿದೆ. ರಂಗಾ ಯಣದ ಹಿರಿಯ ಕಲಾವಿದ ಪ್ರಶಾಂತ್ ಹಿರೇಮಠ ನಾಟಕ ನಿರ್ದೇಶಿಸಿದ್ದಾರೆ.

ನಾಟಕದ ಕುರಿತು : ಪ್ರತಿಯೊಂದು ತಲೆಮಾರಿಗೂ ತಮ್ಮದೇ ಆದ ನೆಚ್ಚಿನ ಚಿತ್ರತಾರೆಯರು ಮತ್ತು ಮೆಚ್ಚಿನ ಹಾಡು ಗಳಿರುತ್ತವೆ. ಸಂಗೀತ ಲೋಕದ ಅದ್ಭುತ ಗಾಯಕರಾದ ಕೆ.ಎಲ್.ಸೈಗಲ್, ಜೊಹ್ರಾ ಬಾಯಿ ಅಂಬಾಲೆವಾಲಿ, ಅಮಿರ್ ಬಾಯಿ ಕರ್ನಾಟಕಿ, ರಾಜ್‍ಕುಮಾರಿ, ಶಂಶಾದ್ ಬೇಗಂ, ಮಹೇಂದ್ರಕಪೂರ್, ತಲತ್ ಮಹಮೂದ್, ಮಹಮದ್ ರಫಿ, ಕಿಶೋರ್‍ಕುಮಾರ್, ಲತಾ ಮಂಗೇಶ್ಕರ್, ಮನ್ನಾಡೇ ಮುಂತಾದವರ ಸುಶ್ರಾವ್ಯ ಗಾಯನ, ಸಂಗೀತ ಮತ್ತು ಮನಮುಟ್ಟುವ ಸಾಹಿತ್ಯ ಅಂದಿನ ಮಧ್ಯಮವರ್ಗದ ಜನರ ಜೀವನದಲ್ಲಿ ಹಾಸುಹೊಕ್ಕಾಗಿ ದ್ದುದನ್ನು ಈ ನಾಟಕದ ಮೂಲಕ ತೆರೆದಿಡುವ ಪ್ರಯತ್ನ ಈ ರಂಗ ಪ್ರಯೋಗ.

ನಾಟಕದ ನಿರೂಪಕ ಶೀನೂ ತನ್ನ ಬಾಲ್ಯದ ಅನುಭವದ ಅಂದಿನ ಕಾಲದ ಹಿಂದಿ ಚಿತ್ರಸಂಗೀತದ ಸುವರ್ಣಯುಗವನ್ನು ನೆನಪಿಸಿಕೊಳ್ಳುತ್ತಾನೆ. ಬಾಲ್ಯದ ತನ್ನ ನೆಚ್ಚಿನ ಹೀರೋ, ಅಪ್ರತಿಮ ಚಿತ್ರಪ್ರೇಮಿ, ಸೈಗಲ್‍ನ ಪುನರಾವತಾರ ಎಂದೇ ಭಾವಿಸಿ ನೆಲ ಒದ್ದು ಅಡ್ಡಾಡುತ್ತಿದ್ದ ಶಾಮಾ ಚಿಕ್ಕಪ್ಪನ ಕಾಲಘಟ್ಟವನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತಾನೆ.

ಬಿ.ಪಿ.ಅರುಣ್ ರಂಗರೂಪ ಮಾಡಿರುವ ಈ ನಾಟಕದ ರಂಗವಿನ್ಯಾಸ-ಹೆಚ್.ಕೆ.ದ್ವಾರಕಾ ನಾಥ್, ಸಂಗೀತ ನಿರ್ವಹಣೆ-ವಿಶ್ವಾಸ್‍ಕೃಷ್ಣ, ಬೆಳಕಿನ ವಿನ್ಯಾಸ-ಕೃಷ್ಣಕುಮಾರ್ ನಾರ್ಣಕಜೆ, ವಸ್ತ್ರವಿನ್ಯಾಸ-ನಂದಿನಿ ಕೆ.ಆರ್., ನೃತ್ಯಸಂಯೋಜನೆ-ಕಾರ್ತಿಕ್‍ಉಪಮನ್ಯು, ರಂಗನಿರ್ವಹಣೆ, ಸಹನಿರ್ದೇಶನ-ಮಹೇಶ್‍ಕುಮಾರ್ ಅವರದ್ದು. ಹೆಚ್ಚಿನ ಮಾಹಿತಿ ಗಾಗಿ ಮೊ:9964656482/ 9448871815 ಸಂಪರ್ಕಿಸಬಹುದು.

 

Translate »