ಮೈಸೂರು ಜಿಲ್ಲೆ: ಕೊರೊನಾ ಹರಡುವಿಕೆ ನಿಯಂತ್ರಣ-ಟೆಸ್ಟ್ ಸಂಖ್ಯೆ ಇಳಿಕೆ
ಮೈಸೂರು

ಮೈಸೂರು ಜಿಲ್ಲೆ: ಕೊರೊನಾ ಹರಡುವಿಕೆ ನಿಯಂತ್ರಣ-ಟೆಸ್ಟ್ ಸಂಖ್ಯೆ ಇಳಿಕೆ

June 18, 2021

ಮೈಸೂರು, ಜೂ.17(ಎಂಟಿವೈ)- ಮೈಸೂರು ಜಿಲ್ಲೆಯಲ್ಲಿ ಕೆಲ ದಿನಗಳಿಂದ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತಿದ್ದು, ಇದೀಗ ಕೋವಿಡ್ ಟೆಸ್ಟ್‍ಗೆ ಬರುವವರ ಸಂಖ್ಯೆ ಯಲ್ಲೂ ಇಳಿಕೆಯಾಗಿದೆ.

1 ವಾರದಿಂದ ಕೋವಿಡ್ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಿದ್ದರೂ, ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ನಗರ, ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಜಿಲ್ಲಾಡಳಿತ 3-4 ದಿನದಿಂದ ಮತ್ತಷ್ಟು ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ತೆರೆದು ಪರೀಕ್ಷೆಯ ಪ್ರಮಾಣವನ್ನೂ ಹೆಚ್ಚಿಸಿದೆ. ಇದರಿಂದ ಈ ಹಿಂದೆ ಪರೀಕ್ಷಾ ಕೇಂದ್ರದ ಮುಂದೆ ಸಾಲುಗಟ್ಟಿರುತ್ತಿದ್ದ ಜನರ ಸಂಖ್ಯೆ ಈಗ ಬೆರಳೆಣಿಕೆಗೆ ಇಳಿದಿದೆ.

ಮೇ ತಿಂಗಳಲ್ಲಿ ಮೈಸೂರು ನಗರ, ತಾಲೂಕುಗಳಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಗಳು ಹಾಗೂ ಕೋವಿಡ್ ಪರೀಕ್ಷೆ ಪ್ರಮಾಣ ಮಿತಗೊಳಿಸಲಾಗಿತ್ತು. ಸೋಂಕಿ ತರು ಹೆಚ್ಚಾಗಿದ್ದರಿಂದ ಸೋಂಕು ಸಮು ದಾಯಕ್ಕೆ ಹರಡಿರುವ ಆತಂಕ ಎದು ರಾಗಿತ್ತು. ಪರಿಣಾಮ ಕೆಲವು ಕೋವಿಡ್ ಟೆಸ್ಟ್ ಸೆಂಟರ್‍ಗಳ ಮುಂದೆ ನೂರಾರು ಮಂದಿ ಸಾಲುಗಟ್ಟಲಾರಂಭಿಸಿದರು.

ಮೈಸೂರು ಮಹಾನಗರ ಪಾಲಿಕೆ ಸೋಂಕಿನ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಮನೆಗೆ ತೆರಳಿ ಕೋವಿಡ್ ಪರೀಕ್ಷೆಗಾಗಿ 9 ವಲಯಗಳಲ್ಲೂ ತಲಾ 1 ಮೊಬೈಲ್ ಯುನಿಟ್ ನೀಡಿದ್ದರಿಂದ ಪರೀಕ್ಷಾ ಕೇಂದ್ರಗಳ ಮುಂದಿನ ಸಾಲು ಕರಗಿದೆ.

ಮೈಸೂರು ನಗರ: ಪುರಭವನದಲ್ಲಿ 150 ಮಂದಿಗೆ, ಕೂಬಾ ಆಂಪಿ ಥಿಯೇಟರ್ ನಲ್ಲಿ 100 ಮಂದಿ, ಕುಂಬಾರಕೊಪ್ಪಲು ಪಿಹೆಚ್‍ಸಿ 50, ರಾಜೇಂದ್ರನಗರ 50, ಜಯ ನಗರ ಪಿಹೆಚ್‍ಸಿಯಲ್ಲಿ 150, ಬನ್ನಿಮಂಟಪ ದಲ್ಲಿ 50, ಚಾಮುಂಡಿಪುರಂ 100, ವಿವಿ ಪುರಂ 50, ಚಿಕ್ಕ ಗಡಿಯಾರ ವೃತ್ತದ ಬಳಿ 150, ಬೀಡಿ ಕಾರ್ಮಿಕರ ಆಸ್ಪತ್ರೆಯಲ್ಲಿ 50, ಮಕ್ಕಳ ಕೂಟದಲ್ಲಿ 125, ನಾಚನಹಳ್ಳಿ ಪಾಳ್ಯ ಪಿಹೆಚ್‍ಸಿ 50, ಗಿರಿಯಾಭೋವಿ ಪಾಳ್ಯ ಪಿಹೆಚ್‍ಸಿ 50, ಟಿ.ಕೆ.ಲೇಔಟ್ 50, ಮೊಬೈಲ್ ಯುನಿಟ್ ತಲಾ 50 ಹಾಗೂ ಕೆ.ಆರ್. ಆಸ್ಪತ್ರೆಯಲ್ಲಿ ಮಧ್ಯಾಹ್ನ 3ರಿಂದ ರಾತ್ರಿ 8ರವರೆಗೆ 50, ಜಿಲ್ಲಾಸ್ಪತ್ರೆಯಲ್ಲಿ 100, ತುಳಸಿ ದಾಸ್ ಆಸ್ಪತ್ರೆಯಲ್ಲಿ(ಗಂಭೀರ ಸ್ಥಿತಿಯಲ್ಲಿ ದ್ದವರಿಗೆ ಮಾತ್ರ) 50 ಮಂದಿಗೆ ಸೇರಿದಂತೆ ಮೈಸೂರು ನಗರದಲ್ಲಿ ನಿತ್ಯ ಒಟ್ಟು 1425 ಮಂದಿಗೆ ಕೊರೊನಾ ಪರೀಕ್ಷೆ ಮಾಡಲು ಗುರಿ ನಿಗದಿಪಡಿಸಲಾಗಿದೆ. ಆದರೆ ಇಂದು 882 ಮಂದಿ ಆರ್‍ಟಿಪಿಸಿಆರ್, 344 ಮಂದಿ ರ್ಯಾಪಿಡ್ ಆಕ್ಷನ್ ಟೆಸ್ಟ್(ಆರ್‍ಎಟಿ) ಮಾಡಿ ಸಿದ್ದಾರೆ. ಇವರಲ್ಲಿ 131 ಮಂದಿಗೆ ಸೋಂಕು ದೃಢಪಟ್ಟಿದೆ. ಪ್ರತಿ ತಾಲೂಕಲ್ಲೂ ತಲಾ 200 ಮಂದಿಗೆ ಪರೀಕ್ಷೆ ಮಾಡಲಾಗುತ್ತಿದೆ.

Translate »