ಮನೆ ಬಾಗಿಲಿಗೆ ಔಷಧಿ ಪೂರೈಕೆಗೆ ಬದ್ಧ: ಮೈಸೂರು ಜಿಲ್ಲೆ ಔಷಧಿ ವ್ಯಾಪಾರಿಗಳ ಸಂಘ
ಮೈಸೂರು

ಮನೆ ಬಾಗಿಲಿಗೆ ಔಷಧಿ ಪೂರೈಕೆಗೆ ಬದ್ಧ: ಮೈಸೂರು ಜಿಲ್ಲೆ ಔಷಧಿ ವ್ಯಾಪಾರಿಗಳ ಸಂಘ

May 5, 2021

ಮೈಸೂರು,ಮೇ4(ಎಂಟಿವೈ)-ಕೊರೊನಾ ಸೋಂಕಿನಿಂದಾಗಿ `ಹೋಂ ಐಸೋ ಲೇಷನ್’(ಮನೆಯಲ್ಲೇ ಏಕಾಂತ ವಾಸ) ಆಗಿರುವವರಿಗೆ ಹಾಗೂ ಹಿರಿಯ ನಾಗರಿಕರು ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಎದುರಿಸುತ್ತಿ ರುವವರಿಗೆ ಮುನ್ನೆಚ್ಚರಿಕೆ ಕ್ರಮ ಗಳೊಂದಿಗೆ ಔಷಧಿ ಪೂರೈಸಲು ಮೈಸೂರು ಜಿಲ್ಲೆಯ ಔಷಧಿ ವ್ಯಾಪಾರಿಗಳು ಬದ್ಧ ಎಂದು ಮೈಸೂರು ನಗರ ಮತ್ತು ಜಿಲ್ಲಾ ಚಿಲ್ಲರೆ ಔಷಧಿ ವ್ಯಾಪಾರಿಗಳ ಸಂಘ ಹೇಳಿದೆ.
ಕೊರೊನಾ 1ನೇ ಅಲೆಗಿಂತ 2ನೇ ಅಲೆ ಹೆಚ್ಚು ತೀವ್ರವಾಗಿದೆ. ದೇಶದ ಜನತೆ ಅಕ್ಷರಶಃ ತತ್ತರಿಸಿದ್ದಾರೆ. ಸೋಂಕು ಹರಡುವಿಕೆ ನಿಯಂತ್ರಿಸಲು ಸರ್ಕಾರ 14 ದಿನಗಳ ಕೋವಿಡ್ ಕಫ್ರ್ಯೂ ಜಾರಿ ಮಾಡಿದೆ. ಇಂತಹ ಸಂದಿಗ್ಧ ಕಾಲದಲ್ಲಿ ಮೈಸೂರು ನಗರ-ಜಿಲ್ಲೆಯ ಮೆಡಿಕಲ್ ಸ್ಟೋರ್‍ಗಳವರು ಸಾಮಾಜಿಕ ಕಳಕಳಿ, ಸೇವಾ ತತ್ಪರತೆಯಿಂದ ಅಗತ್ಯ ಔಷಧಿ ಒದಗಿಸುತ್ತಿದ್ದಾರೆ. ಔಷಧ ಮತ್ತು ಕಾಂತಿವರ್ಧಕ ಅಧಿನಿಯಮದಡಿ ಔಷಧಿ ವ್ಯಾಪಾರಿಗಳು ಇದೀಗ ಅನಾರೋಗ್ಯ ಸಮಸ್ಯೆಗೆ ತುತ್ತಾಗಿರುವ ವೃದ್ಧರು ಹಾಗೂ ಹೋಂ ಐಸೋಲೇಷನ್‍ನಲ್ಲಿರುವ ಸೋಂಕಿತರಿಗೆ ಅಗತ್ಯ ಔಷಧಿಯನ್ನು ಮನೆ ಬಾಗಿಲಿಗೆ ತಲುಪಿಸಲು ಔಷಧಿ ವ್ಯಾಪಾರಿಗಳು ನಿರ್ಧರಿಸಿದ್ದಾರೆ. ಹೋಮ್ ಐಸೋಲೇಷನ್‍ನಲ್ಲಿರುವ ಸೋಂಕಿತರು ಔಷಧಿಗಾಗಿ ಹೊರಗೆ ಬಂದರೆ ಸೋಂಕು ಇತರರಿಗೂ ಹರಡುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ ಸಂಪರ್ಕಿತರನ್ನು ಹೊರಗೆ ಕಳುಹಿಸುವುದು ಸಮಂಜಸವಲ್ಲ. ಈ ವರ್ಷವೂ ಸೋಂಕಿತರ ಮನೆ ಬಾಗಿಲಿಗೇ ಔಷಧಿ ತಲುಪಿಸಲು ಮೆಡಿಕಲ್ ಶಾಪ್ ಮಾಲೀಕರು ಸಮ್ಮತಿಸಿದ್ದಾರೆ. ಗ್ರಾಹಕರು ಹಾಗೂ ರೋಗಿಗಳು ತಮ್ಮ ಸಮೀಪದ ಮೆಡಿಕಲ್ ಶಾಪ್‍ಗಳನ್ನು ಸಂಪರ್ಕಿಸಿ ಸೇವೆ ಪಡೆಯುವಂತೆ ಸಂಘದ ಅಧ್ಯಕ್ಷ ಎಂ.ರಾಜು, ಕಾರ್ಯದರ್ಶಿ ಸಿ.ಕೆ.ಅರುಣ್ ಮನವಿ ಮಾಡಿದ್ದಾರೆ.

Translate »