ರೈಲ್ವೆಯಿಂದ ಮಾಸ್ಕ್ ಧರಿಸುವ ಬಗ್ಗೆ ಜನ ಜಾಗೃತಿ
ಮೈಸೂರು

ರೈಲ್ವೆಯಿಂದ ಮಾಸ್ಕ್ ಧರಿಸುವ ಬಗ್ಗೆ ಜನ ಜಾಗೃತಿ

May 5, 2021

ಮೈಸೂರು, ಮೇ 4(ಆರ್‍ಕೆ)-ಡೆಡ್ಲಿ ಕೊರೊನಾದಿಂದ ಇಡೀ ವಿಶ್ವವೇ ತತ್ತರಿಸಿರುವ ಇಂದಿನ ಸ್ಥಿತಿಯಲ್ಲಿ ಈ ಮಾರಣಾಂತಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವುದೊಂದೇ ಪರಿಹಾರವಾಗಿದೆ. ಪ್ರತಿ ಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಆಗಿಂದಾಗ್ಗೆ ಸ್ಯಾನಿಟೈಸರ್‍ನಿಂದ ಕೈ ಸ್ವಚ್ಛ ಮಾಡಿಕೊಳ್ಳಬೇಕೆಂದು ಸರ್ಕಾರ, ಸಂಘ-ಸಂಸ್ಥೆಗಳು ಸಾರ್ವಜನಿಕರಲ್ಲಿ ಸಾಕಷ್ಟು ಅರಿವು ಮೂಡಿಸುತ್ತಿವೆ.
ಅದಕ್ಕೆ ಪೂರಕವಾಗಿ ನೈರುತ್ಯ ರೈಲ್ವೆ ವಿಭಾಗವು ಮೈಸೂರಿನ ರೈಲು ನಿಲ್ದಾಣದಲ್ಲಿ ಸ್ಥಾಪಿಸಿರುವ ಪ್ರಯಾ ಣಿಕರನ್ನು ಬಿಂಬಿಸುವ ಆರು ಪ್ರತಿಮೆಗಳ ಬಾಯಿ, ಮೂಗು ಮುಚ್ಚಿ ಕೊಳ್ಳುವಂತೆ ಮಾಸ್ಕ್‍ಗಳನ್ನು ಹಾಕುವ ಮೂಲಕ ಪ್ರತಿಯೊಬ್ಬರೂ ತಪ್ಪದೇ ಮಾಸ್ಕ್ ಧರಿಸುವಂತೆ ಜಾಗೃತಿ ಸಂದೇಶ ಸಾರಿದೆ.
ನೈರುತ್ಯ ರೈಲ್ವೇ ವಿಭಾಗೀಯ ರೈಲ್ವೇ ವ್ಯವಸ್ಥಾಪಕ ರಾಹುಲ್ ಅಗರ್‍ವಾಲ್ ಅವರು, ಎಲ್ಲಾ ರೈಲು ಪ್ರಯಾ ಣಿಕರೂ ತಪ್ಪದೇ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾ ಜಿಕ ಅಂತರ ಕಾಪಾಡುವಂತೆ ಮನವಿ ಮಾಡಿದ್ದಾರೆ. ರೈಲು ನಿಲ್ದಾಣ, ಪ್ಲಾಟ್‍ಫಾರಂ ಹಾಗೂ ರೈಲುಗಾಡಿಯಲ್ಲಿ ಪ್ರಯಾಣಿಸುವಾಗ ಕೋವಿಡ್-19 ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ ಮಹಾಮಾರಿ ಸೋಂಕು ಹರಡ ದಂತೆ ಎಚ್ಚರ ವಹಿಸಿ ಎಂದು ಸಲಹೆ ನೀಡಿದ್ದಾರೆ.

Translate »