ಸರ್ಕಾರಿ ವೈದ್ಯರ ವೇತನದಲ್ಲಿ ಭಾರೀ ಹೆಚ್ಚಳ
ಮೈಸೂರು

ಸರ್ಕಾರಿ ವೈದ್ಯರ ವೇತನದಲ್ಲಿ ಭಾರೀ ಹೆಚ್ಚಳ

December 23, 2020

ಬೆಂಗಳೂರು,ಡಿ.22(ಕೆಎಂಶಿ)-ಸರ್ಕಾರಿ ವೈದ್ಯರಿಗೆ ಬಂಪರ್ ಕೊಡುಗೆ ನೀಡಿರುವ ರಾಜ್ಯ ಸರ್ಕಾರ, ಅವರ ವೇತನವನ್ನು ಮಾಸಿಕ 9,500 ರೂ.ಗಳಿಂದ ಗರಿಷ್ಠ 55,100 ರೂ. ವರೆಗೆ ಹೆಚ್ಚಳ ಮಾಡಿದೆ. ವೈದ್ಯರ ಸೇವೆ ಮತ್ತು ವಿದ್ಯಾರ್ಹತೆಯನ್ನು ಪರಿಗಣಿಸಿ ವಿವಿಧ ಹಂತಗಳಲ್ಲಿ ವೇತನ ಹೆಚ್ಚಿಸಿರುವುದಲ್ಲದೆ, ಸೆಪ್ಟೆಂಬರ್ 1ರಿಂದಲೇ ಪೂರ್ವಾನ್ವಯ ವಾಗಿ ಹೊಸ ವೇತನ ಜಾರಿಗೆ ಬರಲಿದೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕೋವಿಡ್ ಸಂದರ್ಭದಲ್ಲಿ ವೈದ್ಯರ ಸೇವೆ ಪರಿಗಣಿಸು ವುದರೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಯುವ ವೈದ್ಯರ ಸೇವೆ ಪ್ರೋತ್ಸಾಹಿಸಲು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಹಿಂದೆ 2015ರಲ್ಲಿ ವಿಶೇಷ ಭತ್ಯೆಗಳನ್ನು ಪರಿಷ್ಕರಿಸ ಲಾಗಿತ್ತು. ನೇಮಕಾತಿ ಸಮಯದಿಂದ 6 ವರ್ಷಗಳವರೆಗೆ ಸೇವೆ ಸಲ್ಲಿಸಿದ ಎಂಬಿಬಿಎಸ್ /ಬಿಡಿಎಸ್ ವಿದ್ಯಾರ್ಹತೆ ವೈದ್ಯರಿಗೆ ಮಾಸಿಕ 21,000 ರೂ.ನಿಂದ 30,500 ರೂ., ಸ್ನಾತ ಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ವೈದ್ಯರಿಗೆ ಮಾಸಿಕ 42,600 ರೂ.ನಿಂದ 55,500 ರೂ., ವಿಶೇಷ ಪರಿಣಿತಿಯ ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ವೈದ್ಯರಿಗೆ ಮಾಸಿಕ 50,800 ರೂ.ನಿಂದ 64,500 ರೂ.ವರೆಗೆ ಹೆಚ್ಚಿಸಲಾಗಿದೆ. 6ರಿಂದ 13 ವರ್ಷಗಳ ಸೇವೆ ಸಲ್ಲಿಸಿದ ಎಂಬಿಬಿಎಸ್/ಬಿಡಿಎಸ್ ಅರ್ಹತೆ ಹೊಂದಿದ ವೈದ್ಯರಿಗೆ ಮಾಸಿಕ 22,000 ರೂ.ನಿಂದ 37,500 ರೂ., ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ವೈದ್ಯರಿಗೆ ಮಾಸಿಕ 43,700 ರೂ.ನಿಂದ 64,500 ರೂ., ವಿಶೇಷ ಪರಿಣಿತಿಯ ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ವೈದ್ಯರಿಗೆ ಮಾಸಿಕ 52,100 ರೂ.ನಿಂದ 73,500 ರೂ.ವರೆಗೆ ಹೆಚ್ಚಿಸ ಲಾಗಿದೆ. 13 ರಿಂದ 20 ವರ್ಷಗಳ ಸೇವೆ ಸಲ್ಲಿಸಿದ ಎಂಬಿಬಿಎಸ್/ಬಿಡಿಎಸ್ ಅರ್ಹತೆ ಹೊಂದಿದವರಿಗೆ ಮಾಸಿಕ 23,000 ರೂ. ನಿಂದ 44,500 ರೂ., ಸ್ನಾತಕೋತ್ತರ ಪದವಿ/ ಡಿಪ್ಲೊಮಾ ವಿದ್ಯಾರ್ಹತೆಯವರಿಗೆ ಮಾಸಿಕ 44,800 ರೂ.ನಿಂದ 73,500 ರೂ., ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಇರುವವರಿಗೆ ಮಾಸಿಕ 58,400 ರೂ.ನಿಂದ 83,500 ರೂ.ಗೆ ಹೆಚ್ಚಿಸಲಾಗಿದೆ. 20-25 ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್/ಬಿಡಿಎಸ್ ಅರ್ಹತೆ ಹೊಂದಿದವರಿಗೆ ಮಾಸಿಕ 23,000 ರೂ. ನಿಂದ 52,500 ರೂ., ಸ್ನಾತಕೋತ್ತರ ಪದವಿ /ಡಿಪ್ಲೊಮಾ ವಿದ್ಯಾರ್ಹತೆಯವರಿಗೆ ಮಾಸಿಕ 44,800 ರೂ.ನಿಂದ 83,500 ರೂ., ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆಯವರಿಗೆ ಮಾಸಿಕ 58,400 ರೂ.ನಿಂದ 93,500 ರೂ.ಗೆ ಹೆಚ್ಚಿಸ ಲಾಗಿದೆ. 25 ವರ್ಷಕ್ಕಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್/ಬಿಡಿಎಸ್ ಅರ್ಹತೆ ಹೊಂದಿದವರಿಗೆ ಮಾಸಿಕ 23,000 ರೂ.ನಿಂದ 60,500 ರೂ., ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆಯವರಿಗೆ ಮಾಸಿಕ 44,800 ರೂ.ನಿಂದ 93,500 ರೂ., ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಯವರಿಗೆ ಮಾಸಿಕ 58,400 ರೂ.ನಿಂದ 1,03,500 ರೂ.ಗೆ ಹೆಚ್ಚಿಸಲಾಗಿದೆ ಎಂದರು.

 

Translate »