ಹಾಲು ಉತ್ಪಾದಕರಿಗೆ ಮೈಸೂರು ಜಿಲ್ಲಾ ಹಾಲು ಒಕ್ಕೂಟ ಬೆನ್ನೆಲುಬು
ಮೈಸೂರು

ಹಾಲು ಉತ್ಪಾದಕರಿಗೆ ಮೈಸೂರು ಜಿಲ್ಲಾ ಹಾಲು ಒಕ್ಕೂಟ ಬೆನ್ನೆಲುಬು

May 4, 2021

ಭೇರ್ಯ, ಮೇ 3(ಮಹೇಶ್)- ರೈತರಿಗೆ ಹಾಗೂ ಹಾಲು ಉತ್ಪಾದಕರಿಗೆ ಬೆನ್ನಲುಬಾಗಿ ಮೈಸೂರು ಜಿಲ್ಲಾ ಹಾಲು ಒಕ್ಕೂಟವು ಯಾವಾಗಲೂ ಇರುತ್ತದೆ ಎಂದು ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಪಿ.ಎಂ. ಪ್ರಸನ್ನ ಹೇಳಿದರು.

ಕೆ.ಆರ್.ನಗರ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ನೂತನ ವಾಗಿ ನಿರ್ಮಿಸಿರುವ ಹಾಲು ಉತ್ಪಾದಕರ ಕಟ್ಟಡ ಹಾಗೂ ಬಿ.ಎಂ.ಸಿ. ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರು ಡೈರಿ ಬೆಳೆÀದಿದೆ ಎಂದರೆ ಅದು ರೈತರಿಂದಲೇ ಎಂದ ಅವರು, ಹಾಲು ಉತ್ಪಾದಕರ ಸಹಕಾರ ಮತ್ತು ಗುಣಮಟ್ಟದ ಹಾಲು ಸರಬರಾಜು ಮಾಡುವುದರಿಂದ ಮೈಸೂರು ಡೈರಿ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.

ನಿರ್ದೇಶಕ ಎ.ಟಿ. ಸೋಮಶೇಖರ್ ಬೆಂಬಲ, ಸಹಕಾರದಿಂದಾಗಿ ನಾನು ಇಂದು ಮೈಮುಲ್ ಅಧ್ಯಕ್ಷನಾಗಿದ್ದೇನೆ. ಅಂದು ನನ್ನನ್ನು ಸಹಕಾರ ಕ್ಷೇತ್ರಕ್ಕೆ ಧುಮುಕುವಂತೆ ಮಾಡಿ, ಈ ಕ್ಷೇತ್ರದಲ್ಲಿಯೂ ಹೆಸರು ಮಾಡಬಹುದು ಎಂಬುದನ್ನು ತೋರಿಸಿದವರು ಎ.ಟಿ. ಸೋಮಶೇಖರ್ ಎಂದ ಅವರು, ಪ್ರಸ್ತುತ ಅವರು ಮೈಸೂರು ಡೈರಿ ಸಭೆಯಲ್ಲಿ ಕೂಡ ರೈತರ ಪರವಾಗಿ ಮಾತನಾಡುತ್ತಾರೆ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಆಸಕ್ತಿ ವಹಿಸಿ ತಮ್ಮ ವಾದವನ್ನು ಮಂಡಿಸುವ ವ್ಯಕ್ತಿ. ಇಂದು ಉತ್ಪಾದಕರು ಸರಬರಾಜು ಮಾಡುವ ಹಾಲಿಗೆ ಎರಡು ರೂಪಾಯಿ ಹೆಚ್ಚು ಮಾಡಲು ಅವರೇ ಕಾರಣಕರ್ತರು ಎಂದು ತಿಳಿಸಿದರು.

ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಬಹಳ ಶಿಸ್ತುಬದ್ಧವಾಗಿ ನಡೆಯುತ್ತಿದೆ. ಈಗಿನ ಕಾರ್ಯದರ್ಶಿ ಲೋಕೇಶ್ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಆಡಳಿತ ಮಂಡಳಿ ಉತ್ತಮವಾಗಿ ಇದೆ. ಕಾರ್ಯದರ್ಶಿ ಜತೆ ಸಂಪೂರ್ಣವಾಗಿ ಸಹಕಾರ ಇರುವುದ ರಿಂದಲೇ ನೂತನವಾಗಿ ಕಟ್ಟಡ ನಿರ್ಮಾಣ ಮಾಡಿರುವುದೇ ಸಾಕ್ಷಿ ಎಂದರು. ಬಿ.ಎಂ.ಸಿ. ಕೇಂದ್ರದ ಕಟ್ಟಡ ಹೊಸ ವಿನ್ಯಾಸ ದೊಂದಿಗೆ ನಿರ್ಮಾಣ ಮಾಡಿದ್ದಾರೆ. ಇದೇ ಮಾದರಿಯಲ್ಲಿ ಪಿರಿಯಾಪಟ್ಟಣ ತಾಲೂಕಿನಲ್ಲಿ ಬಿ.ಎಂ.ಸಿ. ಕೇಂದ್ರದ ಕಟ್ಟಡವನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದರು.
ನಂತರ ಮೈಮುಲ್ ನಿರ್ದೇಶಕ ಎ.ಟಿ. ಸೋಮಶೇಖರ್ ಮಾತನಾಡಿ, ಮೈಮುಲ್ ಅಧ್ಯಕ್ಷ ಪ್ರಸನ್ನ ಅವರ ಮೊದಲ ಕಾರ್ಯ ಕ್ರಮ ಕೆ.ಆರ್.ನಗರ ತಾಲೂಕಿನಿಂದ ಆರಂಭ ಗೊಂಡಿದೆ. ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡಿದಾಗ ಮಾತ್ರ ಡೈರಿ ಏಳಿಗೆಯಾಗಲು ಸಾಧÀ್ಯ. ಅದೇ ರೀತಿ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿ ದಾಗ ಮಾತ್ರ ಸಂಘ ಅಭಿವೃದ್ಧಿ ಹೊಂದುತ್ತದೆ ಎಂದರು.

ಕೆ.ಆರ್.ನಗರ ತಾಲೂಕಿನಲ್ಲಿ ಡೈರಿ ಹಾಗೂ ಬಿಎಂಸಿ ಕೇಂದ್ರಗಳನ್ನು ಹೆಚ್ಚಾಗಿ ಸ್ಥಾಪಿಸ ಲಾಗಿದೆ. ಒಂದು ಹಳ್ಳಿಯಲ್ಲಿ ಡೈರಿ ಇದ್ದರೆ ಆ ಹಳ್ಳಿ ಅಭಿವೃದ್ಧಿ ಹೊಂದುತ್ತದೆ. ಆರ್ಥಿಕವಾಗಿ ಗ್ರಾಮ ಸದೃಢವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಕೋವಿಡ್ ಹಿನ್ನೆಲೆ ಯಲ್ಲಿ ಸರಳವಾಗಿ ಆಚರಿಸ ಲಾಯಿತು. ಮಾಸ್ಕ್ ಹಾಗೂ ಸ್ಯಾನಿಟೈಸ್ ಕಡ್ಡಾಯ ಗೊಳಿಸಲಾಗಿತ್ತು.

ಮೈಮುಲ್ ನಿರ್ದೇಶಕ ಜಗದೀಶ್, ವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ, ಉಪ ವ್ಯವಸ್ಥಾಪಕ ಜಿ.ಎನ್.ಸಂತೋಷ್, ವಿಸ್ತರಣಾಧಿಕಾರಿಗಳು ಯೋಗೀಶ್.ಪಿ, ಜಯಂತ್ ಕುಮಾರ್, ನಂದಿನಿ, ರಶ್ಮಿ ಸಿ.ಕೆ., ಸುಮಂತ್, ಡೈರಿ ಅಧ್ಯಕ್ಷ ದೊರೆ ಸ್ವಾಮಿ, ಉಪಾಧ್ಯಕ್ಷ ನಾಗೇಶ್, ನಿರ್ದೇ ಶಕರಾದ ಬಿ.ಹೆಚ್.ಹರೀಶ್, ಬಿ.ಎಂ. ಹರೀಶ್, ರಮೇಶ್, ಸೋಮ ಶೇಖರ್, ಗಿರೀಶ್, ಬಿ.ಟಿ. ಶಂಕರ್, ಸೋಮೇಶ್, ನಾಗರತ್ನ, ಶಾರದಮ್ಮ, ಹಾಲು ಪರೀಕ್ಷಕ ಸುಬ್ರಹ್ಮಣ್ಯ, ಸಹಾಯಕರು ಅರ್ಜುನ, ಗಣೇಶ್ ಮತ್ತಿತರರು ಹಾಜರಿದ್ದರು.

 

Translate »