ಬೆಟ್ಟದಪುರದಲ್ಲಿ ಕೋವಿಡ್ ಸೆಂಟರ್ ತೆರೆಯಲು ಒತ್ತಾಯ
ಮೈಸೂರು

ಬೆಟ್ಟದಪುರದಲ್ಲಿ ಕೋವಿಡ್ ಸೆಂಟರ್ ತೆರೆಯಲು ಒತ್ತಾಯ

May 4, 2021

ಬೆಟ್ಟದಪುರ, ಮೇ 3(ಶಿವದೇವ)- ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಬೆಟ್ಟದಪುರ ಹೋಬಳಿಗೆ ಸುಮಾರು 40 ಸಾವಿರ ಜನರು ಸೇರ್ಪಡೆಗೊಳ್ಳುತ್ತಾರೆ. ಆದರೆ ಇಲ್ಲಿರುವ ಒಬ್ಬರೇ ವೈದ್ಯರು ಹಾಗೂ ಬೆರಳೆಣಿಕೆಯಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಾತ್ರಿ ವೇಳೆಯಲ್ಲಿ ಅನಾರೋಗ್ಯಕ್ಕೆ ತುತ್ತಾದರೆ ದೂರದ ಪಿರಿಯಾಪಟ್ಟಣ, ಕುಶಾಲ ನಗರ ಆಸ್ಪತ್ರೆಗಳಿಗೆ ತಲುಪಬೇಕು. ಆದುದ ರಿಂದ ತಕ್ಷಣ ಶಾಸಕ ಕೆ.ಮಹದೇವ್ ಹಾಗೂ ತಹಶೀಲ್ದಾರ್, ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಇತ್ತ ಗಮನ ಹರಿಸಿ ಬೆಟ್ಟದಪುರದಲ್ಲಿ ಕೋವಿಡ್ ಸೆಂಟರ್ ತೆರೆಯಬೇಕಾಗಿ ಹಾಗೂ ಆರೋಗ್ಯ ಕೇಂದ್ರಕ್ಕೆ ಇನ್ನೊಬ್ಬ ವೈದ್ಯರನ್ನು ನೇಮಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಬೆಟ್ಟದಪುರ ಸಮೀಪದ ಹಳ್ಳಿಗಳಾದ ಹರದೂರು, ಆನಿವಾಳು ಕೌಲನಹಳ್ಳಿ, ಕೂರ್ಗಲ್ಲು, ಬೆಟ್ಟದಪುರ, ಐಚನಹಳ್ಳಿ, ಈಚೂರು ಈ ಊರುಗಳ ಜನಸಂಖ್ಯೆ ಸುಮಾರು ಮೂವತ್ತು ಸಾವಿರ ಇದೆ. ಬೆಟ್ಟದಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ಮುನ್ನೂರರಿಂದ ನಾನೂರು ಮಂದಿ ಚಿಕಿತ್ಸೆಗಾಗಿ ಕ್ಯೂ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಈಗ ಕೊರೊನಾ ಪರೀಕ್ಷೆಗಳು ಹಾಗೂ ಇನ್ನಿತರ ತಪಾಸಣೆ ಗಳನ್ನು ಮಾಡಲು ತುಂಬಾ ತೊಂದರೆ ಯಾಗಿದೆ. ಯಾವುದೇ ಪರೀಕ್ಷೆ ಮಾಡಲು ಲ್ಯಾಬ್ ಟೆಕ್ನಿಷಿಯನ್ ಆಗಲಿ ಅಥವಾ ಸಿಬ್ಬಂದಿ ಗಳಾಗಲಿ ಇಲ್ಲ. ನಾಲ್ಕೈದು ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕಿತ್ಸೆ ನೀಡಲು ಒಬ್ಬರೇ ವೈದ್ಯರು ಹರಸಾಹಸ ಪಡುತ್ತಿ ದ್ದಾರೆ. ತಕ್ಷಣವೇ ತಾಲೂಕು ಆಡಳಿತ, ಜಿಲ್ಲಾಡಳಿತ ಬೆಟ್ಟದಪುರದ ಸಾರ್ವಜನಿಕ ಆಸ್ಪತ್ರೆಗೆ ಮತ್ತೊಬ್ಬ ವೈದ್ಯಾಧಿಕಾರಿಯನ್ನು ಹಾಗೂ ಟೆಕ್ನಿಷಿಯನ್ ಹಾಗೂ ಸಿಬ್ಬಂದಿ ಗಳನ್ನು ನೇಮಿಸಬೇಕು. ಬೆಟ್ಟದಪುರದ ಸಾರ್ವಜನಿಕ ಆಸ್ಪತ್ರೆಗೆ ತಕ್ಷಣವೇ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Translate »