ಮೈಸೂರಿನ ವೈಹೆಚ್‍ಎ ಕಟ್ಟಡದಲ್ಲಿ ಕೋವಿಡ್ ಐಸೋಲೇಷನ್ ಕೇರ್ ಸೆಂಟರ್
ಮೈಸೂರು

ಮೈಸೂರಿನ ವೈಹೆಚ್‍ಎ ಕಟ್ಟಡದಲ್ಲಿ ಕೋವಿಡ್ ಐಸೋಲೇಷನ್ ಕೇರ್ ಸೆಂಟರ್

May 4, 2021

ಮೈಸೂರು, ಮೇ 3 (ಆರ್‍ಕೆಬಿ)- ಮೈಸೂರಿನ ಗೋಕುಲಂನಲ್ಲಿರುವ ಅಂತಾರಾಷ್ಟ್ರೀಯ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಅನ್ನು 64 ಬೆಡ್ ಗಳುಳ್ಳ ಕೋವಿಡ್ ಐಸೋಲೇಷನ್ ಕೇರ್ ಸೆಂಟರ್ (ಕೋವಿಡ್ ಪ್ರತ್ಯೇಕ ಆರೈಕೆ ಕೇಂದ್ರ) ಆಗಿ ಪರಿವರ್ತಿ ಸಲಾಗಿದೆ. ಮೈಸೂರಿನ ಸ್ಪಂದನಾ ಆಸ್ಪತ್ರೆ, ಬೃಂದಾ ವನ ಆಸ್ಪತ್ರೆ ಸಹಯೋಗದಲ್ಲಿ ಆರಂಭಿಸಲಾಗಿರುವ ಐಸೋಲೇಷನ್ ಕೇರ್ ಸೆಂಟರ್‍ಗೆ ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ಸೋಮವಾರ ಚಾಲನೆ ನೀಡಿದರು. ಕೋವಿಡ್‍ನ ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿರುವವರಿಗಾಗಿ ಈ ಐಸೋಲೇಷನ್ ಕೇರ್ ಸೆಂಟರ್ ತೆರೆಯಲಾಗಿದ್ದು, 8 ಕೊಠಡಿ, 16 ಡಾರ್ಮಿಟರಿಯಲ್ಲಿ ಒಟ್ಟು 64 ಬೆಡ್‍ಗಳನ್ನು ಸಿದ್ಧಪಡಿಸಲಾಗಿದೆ. ಜೊತೆಗೆ ಅಗತ್ಯವಾದ ಪೂರಕ ಆಕ್ಸಿಜನ್ ಕೂಡ ಇರಲಿದೆ. ಡಾ.ಎಂ.ಆರ್.ಅಯ್ಯಪ್ಪ ಸೇರಿದಂತೆ ನಾಲ್ವರು ವೈದ್ಯರು, 6 ಮಂದಿ ನರ್ಸ್‍ಗಳು sಒಳಗೊಂಡು ಒಟ್ಟು 16 ಮಂದಿ ಇಲ್ಲಿ ಕಾರ್ಯನಿರ್ವಸಿಸಲಿದ್ದಾರೆ.

ಕೇಂದ್ರದ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ಸಂಸದ ಪ್ರತಾಪ್‍ಸಿಂಹ, ಈ ಆರೈಕೆ ಕೇಂದ್ರವನ್ನು ಸ್ಪಂದನಾ ಆಸ್ಪತ್ರೆ, ಬೃಂದಾವನ ಅಸ್ಪತ್ರೆ ಮತ್ತು ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಜಂಟಿ ಯಾಗಿ ಕಾರ್ಯ ನಡೆಸಲಿದೆ. ಕೋವಿಡ್ ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿರುವ ಯಾರಿಗೆ ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಸಾಧ್ಯವಿಲ್ಲವೋ ಅಂಥವರಿ ಗಾಗಿ ಇಲ್ಲಿ ಪ್ರತ್ಯೇಕ ಆರೈಕೆ ದೊರೆಯಲಿದೆ. ತುರ್ತು ಅವಶ್ಯಕತೆಯನ್ನು ಪೂರೈಸಲು ಈ ಕೇಂದ್ರದಲ್ಲಿ ಪೂರಕ ಆಕ್ಸಿಜನ್ ಸಂಗ್ರಹಿಸಲಾಗುವುದು ಎಂದರು.

ಜಗತ್ತಿನಾದ್ಯಂತ ಜೀವ ಹಾನಿಗೆ ಕಾರಣವಾಗಿರುವ ಕೊರೊನಾ ಮಹಾಮಾರಿಯ ಬಗ್ಗೆ ನಿರ್ಲಕ್ಷ್ಯ ತೋರದೆ ಸಾರ್ವಜನಿಕರು ಕೋವಿಡ್ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ಪಡೆಯಲು ಹಿಂಜರಿಯಬೇಡಿ ಎಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಗೋಕುಲಂ ಕೋವಿಡ್ ಐಸೋಲೇಷನ್ ಕೇರ್ ಸೆಂಟರ್‍ನ ಮುಖ್ಯಸ್ಥ ಡಾ.ಎಂ.ಆರ್.ಅಯ್ಯಪ್ಪ, ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ರವಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Translate »