ಸೋಂಕು ನಿಯಂತ್ರಣಕ್ಕೆ ಮೈಸೂರಿನ ಪ್ರಮುಖ ರಸ್ತೆಗಳಿಗೆ ರಸಾಯನಿಕ ಸಿಂಪಡಣೆ
ಮೈಸೂರು

ಸೋಂಕು ನಿಯಂತ್ರಣಕ್ಕೆ ಮೈಸೂರಿನ ಪ್ರಮುಖ ರಸ್ತೆಗಳಿಗೆ ರಸಾಯನಿಕ ಸಿಂಪಡಣೆ

May 5, 2021

ಮೈಸೂರು, ಮೇ 4(ಎಂಟಿವೈ)- ಕೊರೊನಾ 2ನೇ ಅಲೆಯ ತೀವ್ರತೆಗೆ ಮೈಸೂರು ನಗರ ತತ್ತರಿಸಿದೆ. ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗರೂಕತಾ ಕ್ರಮವಾಗಿ ಮೈಸೂರಿನ ಪ್ರಮುಖ ರಸ್ತೆಗಳು, ಮಾರುಕಟ್ಟೆ ಪ್ರದೇಶ ಸೇರಿದಂತೆ ಜನ ದಟ್ಟಣೆಯ ಸ್ಥಳಗಳಲ್ಲಿ ಸೋಂಕು ನಿವಾ ರಕ ರಾಸಾಯನಿಕ ದ್ರಾವಣವನ್ನು ಸಿಂಪಡಿಸಲಾಯಿತು. ಆ ಮೂಲಕ ಸ್ಯಾನಿಟೈಸ್ ಪ್ರಕ್ರಿಯೆ ನಡೆಸಲಾಯಿತು.
ಕಳೆದ ಕೆಲ ದಿನಗಳಿಂದ ಹೊಸದಾಗಿ ಸೋಂಕಿತರು ಅಪಾರ ಸಂಖ್ಯೆಯಲ್ಲಿ ಪತ್ತೆ ಯಾಗುತ್ತಿದ್ದಾರೆ. ಸಾವಿಗೀಡಾಗುವವರ ಸಂಖ್ಯೆಯೂ ಹೆಚ್ಚೇ ಇದೆ. ಸೋಂಕು ತಡೆಗಾಗಿ ಜನದಟ್ಟಣೆಯ ಸ್ಥಳಗಳಲ್ಲಿ ಸ್ಯಾನಿ ಟೈಸ್ ಮಾಡಲಾಗುತ್ತಿದೆ. ಕೊರೊನಾ ಮೊದಲ ಅಲೆ ವೇಳೆಯಲ್ಲೂ ನಗರದ ಪ್ರಮುಖ ರಸ್ತೆಗಳು, ಜನನಿಬಿಡ ಸ್ಥಳಗಳಿಗೆ ಹಲವು ಬಾರಿ ಸ್ಯಾನಿಟೈಸ್ ಮಾಡಲಾಗಿತ್ತು. 2ನೇ ಅಲೆ ತೀವ್ರತೆ ಹೆಚ್ಚಿದ ಬಳಿಕ ಮೊದಲ ಬಾರಿಗೆ ಇಂದು ಸ್ಯಾನಿಟೈಸ್ ಮಾಡಲಾಯಿತು.

2 ಅಗ್ನಿಶಾಮಕ ವಾಹನ: ಜನನಿಬಿಡ ಸ್ಥಳ, ಪ್ರಮುಖ ರಸ್ತೆಗಳಲ್ಲಿ ರಾಸಾಯನಿಕ ಸಿಂಪಡಣೆಗೆ 8 ಸಾವಿರ ಲೀ. ಸಾಮಥ್ರ್ಯದ ಅಗ್ನಿಶಾಮಕ ದಳದ 2 ವಾಹನ ಬಳಸಿ ಕೊಳ್ಳಲಾಯಿತು. ನೀರು ತುಂಬಿದ್ದ ಈ ವಾಹನಗಳಿಗೆ ಪಾಲಿಕೆ ಮುಖ್ಯ ಕಚೇರಿ ಎದುರು ಕಪ್ಪು ಫೆನಾಯಿಲ್ ಸೇರಿದಂತೆ ಕೆಲವು ದ್ರಾವಣಗಳನ್ನು ಮಿಶ್ರಣ ಮಾಡ ಲಾಯಿತು. ಬಳಿಕ ಒಂದು ವಾಹನ ವನ್ನು ಕೆ.ಆರ್.ವೃತ್ತ, ದೇವರಾಜ ಅರಸ್ ರಸ್ತೆ, ಸಯ್ಯಾಜಿರಾವ್ ರಸ್ತೆ, ನಗರ ಬಸ್ ನಿಲ್ದಾಣ ದಲ್ಲಿ ಸ್ಯಾನಿಟೈಸ್ ಮಾಡಲು ಕಳುಹಿಸಿದರೆ, ಮತ್ತೊಂದು ವಾಹನವನ್ನು ಎಂಜಿ ರಸ್ತೆಯ ಮಾರುಕಟ್ಟೆ, ದಸರಾ ವಸ್ತು ಪ್ರದರ್ಶನ ಆವರಣದ ತರಕಾರಿ ಸಗಟು ಮಾರುಕಟ್ಟೆ, ಎಂಜಿ ರಸ್ತೆ ಸುತÀ್ತ ಹಾಗೂ ಗ್ರಾಮಾಂತರ ಬಸ್ ನಿಲ್ದಾಣ ಬಳಿ ಸ್ಯಾನಿಟೈಸ್ ಮಾಡಲು ಕಳುಹಿಸಲಾಯಿತು. ಪ್ರತಿ ವಾಹನದಲ್ಲೂ ತಲಾ 10 ಸಿಬ್ಬಂದಿ ಇದ್ದರು. ರಾಸಾಯನಿಕ ಮಿಶ್ರಣಕ್ಕಾಗಿ ಪಾಲಿಕೆಯ 6 ಸಿಬ್ಬಂದಿ ಗಳಿದ್ದರು. ಸೋಂಕಿತರು ಆಕಸ್ಮಿಕವಾಗಿ ಎಲ್ಲಾದರೂ ಉಗುಳಿದ್ದರೆ ಅದನ್ನು ತುಳಿದ ಇತರರಿಗೂ ಸೋಂಕು ಹರಡುವ ಅಪಾಯ ವಿದೆ. ಹಾಗಾಗಿಯೇ ನಿತ್ಯ ಬೆಳಿಗ್ಗೆ ಜನ ದಟ್ಟಣೆಯ ಸ್ಥಳಗಳಲ್ಲಿ ಸ್ಯಾನಿಟೈಸ್ ಮಾಡಲು ಪಾಲಿಕೆ ಆಡಳಿತ ನಿರ್ಧರಿಸಿದೆ.
ಚಾಮರಾಜನU

Translate »