ಇಂದಿನಿಂದ ವಾರದಲ್ಲಿ 3 ದಿನ ಮೈಸೂರು-ಹುಬ್ಬಳ್ಳಿ ವಿಮಾನ ಸಂಚಾರ
ಮೈಸೂರು

ಇಂದಿನಿಂದ ವಾರದಲ್ಲಿ 3 ದಿನ ಮೈಸೂರು-ಹುಬ್ಬಳ್ಳಿ ವಿಮಾನ ಸಂಚಾರ

May 3, 2022

ಮೈಸೂರು,ಮೇ೨(ಆರ್‌ಕೆ)-ನಾಳೆ (ಮೇ ೩)ಯಿಂದ ವಾರದಲ್ಲಿ ೩ ದಿನ ಮೈಸೂರು ಮತ್ತು ಹುಬ್ಬಳ್ಳಿ ನಡುವೆ ವಿಮಾನ ಹಾರಾಟ ಆರಂಭವಾಗಲಿದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಈಗ ಅಧಿಕ ವಿಮಾನಗಳು ಸಂಚರಿ ಸುತ್ತಿವೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆ ಯಲ್ಲಿ ಇದೀಗ ಇಂಡಿಗೋ ಸಂಸ್ಥೆಯು ಮೈಸೂರು-ಹುಬ್ಬಳ್ಳಿ ನಡುವೆ ಸೇವೆ ಕಲ್ಪಿಸಲು ಮುಂದಾಗಿದೆ. ಮಂಗಳವಾರ ಸಂಜೆ ೫.೩೦ಗಂಟೆಗೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮೈಸೂರು -ಹುಬ್ಬಳ್ಳಿ ಇಂಡಿಗೋ ವಿಮಾನ ಸೇವೆಗೆ ಶಾಸಕ ನಾಗೇಂದ್ರ ಚಾಲನೆ ನೀಡುವರು ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ್ ತಿಳಿಸಿದ್ದಾರೆ.

ಮಂಗಳವಾರ, ಗುರುವಾರ ಮತ್ತು ಶನಿವಾರಗಳಂದು ಇಂಡಿಗೋ ವಿಮಾನ ಸಂಚರಿಸಲಿದೆ. ಸಂಜೆ ೫-೦೫ ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ ವಿಮಾನವು, ಸಂಜೆ ೬.೦೫ ಗಂಟೆಗೆ ಮೈಸೂರು ತಲುಪಲಿದೆ. ಸಂಜೆ ೬.೨೫ಕ್ಕೆ ಮೈಸೂರಿನಿಂದ ಪ್ರಯಾಣ ಬೆಳೆಸಿ ೭.೪೦ಕ್ಕೆ ಹುಬ್ಬಳ್ಳಿ ತಲುಪಲಿದೆ. ಸದ್ಯಕ್ಕೆ ವಾರದಲ್ಲಿ ೩ ದಿನ ಮಾತ್ರ ಸೇವೆ ಕಲ್ಪಿಸಲಿರುವ ವಿಮಾನವು ಪ್ರಯಾಣ ಕರಿಂದ ಪ್ರತಿಕ್ರಿಯೆ ನೋಡಿಕೊಂಡು ಅಗತ್ಯಬಿದ್ದರೆ ಮುಂದಿನ ದಿನಗಳಲ್ಲಿ ನಿತ್ಯ ಸೇವೆ ವಿಸ್ತರಿಸಲಾಗುವುದು ಎಂದರು. ಪ್ರಸ್ತುತ ಮೈಸೂರಿನಿಂದ ಬೆಂಗಳೂರು, ಗೋವಾ, ಕೊಚ್ಚಿನ್, ಚೆನ್ನೆöÊ, ಹೈದರಾ ಬಾದ್‌ಗೆ ಅಲೆಯನ್ಸ್, ಏರ್ ಇಂಡಿಗೋ ಸಂಸ್ಥೆಗಳಿAದ ವಿಮಾನ ಸೇವೆ ಕಲ್ಪಿಸಲಾಗಿದೆ.

Translate »