ನವದೆಹಲಿ, ಮೇ ೨- ಮಾರಕ ಕೋವಿಡ್-೧೯ ನಾಲ್ಕನೇ ಅಲೆ ಭೀತಿ ನಡುವೆಯೇ ಲಸಿಕೆ ಹಾಕಿಸಿಕೊಳ್ಳಲು ಯಾರನ್ನೂ ಒತ್ತಾಯಿ ಸಬಾರದು ಮತ್ತು ಲಸಿಕೆಯ ಅಡ್ಡಪರಿಣಾಮಗಳನ್ನು ಸಾರ್ವಜನಿಕಗೊಳಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೋವಿಡ್ ಲಸಿಕೆ ವಿಚಾರವಾಗಿ ಇಂದು ನಡೆದ ವಿಚಾರಣೆ ಯಲ್ಲಿ, ಹಾಲಿ ಇರುವ ಕೇಂದ್ರ ಸರ್ಕಾರದ ಲಸಿಕೆ ನೀತಿಯನ್ನು ಅಸಮಂಜಸವೆAದು ಹೇಳಲಾಗುವುದಿಲ್ಲ ಎಂದು ಹೇಳಿದ ಸರ್ವೋಚ್ಛ ನ್ಯಾಯಾಲಯ ಇದೇ ವೇಳೆ ಲಸಿಕೆ ಹಾಕಿಸಿ ಕೊಳ್ಳಲು ಯಾರನ್ನೂ ಒತ್ತಾಯಿಸಬಾರದು ಎಂದೂ ಹೇಳಿದೆ. ಸಂವಿಧಾನದ ಅಡಿ ಯಲ್ಲಿ ದೈಹಿಕ ಸ್ವಾಯತ್ತತೆ ಮತ್ತು ಸಮ ಗ್ರತೆಯನ್ನು ರಕ್ಷಿಸಲಾಗಿದ್ದು, ಲಸಿಕೆ ಪಡೆಯು ವಂತೆ ಯಾರನ್ನೂ ಒತ್ತಾಯಿಸಲಾಗುವು ದಿಲ್ಲ ಎಂದು ನ್ಯಾಯಾಲಯ ಹೇಳಿದೆ.