ಮೈಸೂರು ದಸರಾ ವೇಳೆ ಮಂಡ್ಯ ಜಿಲ್ಲೆಯಲ್ಲೂ ಹೊರ  ರಾಜ್ಯದವಾಹನಗಳಿಗೆ ತೆರಿಗೆ ವಿನಾಯ್ತಿಗೆ ಪ್ರಸ್ತಾವನೆ
ಮೈಸೂರು

ಮೈಸೂರು ದಸರಾ ವೇಳೆ ಮಂಡ್ಯ ಜಿಲ್ಲೆಯಲ್ಲೂ ಹೊರ ರಾಜ್ಯದವಾಹನಗಳಿಗೆ ತೆರಿಗೆ ವಿನಾಯ್ತಿಗೆ ಪ್ರಸ್ತಾವನೆ

August 30, 2022

ಮೈಸೂರು, ಆ.29(ಎಸ್‍ಬಿಡಿ)-ಮೈಸೂರು ದಸರಾ ಮಹೋತ್ಸವದ ವೇಳೆ ಹೊರ ರಾಜ್ಯದ ಪ್ರವಾಸಿ ವಾಹನಗಳಿಗೆ ನೀಡಲಾ ಗುವ ತೆರಿಗೆ ವಿನಾಯ್ತಿಯನ್ನು ಮಂಡ್ಯ ಜಿಲ್ಲೆಗೂ ವಿಸ್ತರಿಸಲು ಪರಿಷ್ಕøತ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ದಸರಾ ಪೂರ್ವಭಾವಿ ಸಭೆ ನಡೆಸಿದ ಅವರು, ದಸರಾ ಮಹೋತ್ಸವದ ವೇಳೆ ಮೈಸೂರಿಗೆ ಆಗಮಿಸುವ ಹೊರ ರಾಜ್ಯದ ಪ್ರವಾಸಿಗರು ನೆರೆ ಜಿಲ್ಲೆ ಮಂಡ್ಯದ ಕೆಆರ್‍ಎಸ್, ಶ್ರೀರಂಗಪಟ್ಟಣ ಇನ್ನಿತರ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡು ತ್ತಾರೆ. ಆ ಸಂದರ್ಭದಲ್ಲಿ ಪ್ರವಾಸಿಗರಿಗೆ ತೊಂದರೆಯಾಗಬಾರದು. ಈ ನಿಟ್ಟಿ ನಲ್ಲಿ ಹೊರ ರಾಜ್ಯಗಳ ಪ್ರವಾಸಿ ವಾಹನ ಗಳಿಗೆ ನೀಡಲಾಗುವ ತೆರಿಗೆ ವಿನಾಯ್ತಿ ಮಂಡ್ಯ ಜಿಲ್ಲೆಗೂ ಅನ್ವಯವಾಗುವಂತೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ದಸರಾ ವಿಶೇಷಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೇರಿದಂತೆ ಎಲ್ಲಾ ಉಪ ಸಮಿತಿಗಳ ಪದಾಧಿಕಾರಿ ಅಧಿಕಾರಿಗಳು ಸಭೆಯಲ್ಲಿ ಪಾಲೊಂಡು ಸಿದ್ಧತಾ ಕಾರ್ಯಗಳ ಬಗ್ಗೆ ಸಚಿವರಿಗೆ ವಿವರಣೆ ನೀಡಿದರು. ಇದೇ ವೇಳೆ ಈ ಬಾರಿ ದಸರಾದಲ್ಲಿ ಹೊಸದಾಗಿ ರೂಪಿಸುವ ಕೆಲ ಕಾರ್ಯಕ್ರಮಗಳು ಹಾಗೂ ಕ್ರಮಗಳ ಬಗ್ಗೆ ಚರ್ಚೆ ನಡೆಸಿರುವುದನ್ನು ಸಚಿವರ ಮುಂದಿಟ್ಟರು.

ಏಕೀಕೃತ ಟಿಕೆಟ್: ದಸರಾ ಸಂದರ್ಭದಲ್ಲಿ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಹಾಗೂ ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬಯಸುವವರಿಗೆ ಏಕೀಕೃತ ಟಿಕೆಟ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತನೆ ಇದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸಚಿವರಿಗೆ ತಿಳಿಸಿದರು. ಒಂದೇ ಟಿಕೆಟ್ ಕೊಂಡು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ದಸರಾ ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಬಹುದು. ಆಗ ಆಯಾಯ ಸ್ಥಳದಲ್ಲಿ ಟಿಕೆಟ್ ಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಇದರಿಂದ ಪ್ರವಾಸಿಗರಿಗೆ ಸಮಯ ವ್ಯರ್ಥವಾಗುವುದಿಲ್ಲ. ಮೈಸೂರು ಸಮೀಪದ ಕೆಆರ್‍ಎಸ್ ಅನ್ನೂ ಜೊತೆಗೂಡಿಸಿಕೊಳ್ಳುವ ಸಾಧ್ಯತೆ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈ ಏಕೀಕೃತ ಟಿಕೆಟ್ ವ್ಯವಸ್ಥೆ ಇನ್ನೂ ಪ್ರಯತ್ನದ ಹಂತದಲ್ಲಿದ್ದು, ಯಾವ ಸ್ಥಳದ ಆದಾಯಕ್ಕೆ ಹೊಡೆತ ಬೀಳದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಯೋಜನೆ ರೂಪಿಸಬೇಕಿದೆ ಎಂದು ತಿಳಿಸಿದರು.

ಹೊಸ ಕಾರ್ಯಕ್ರಮ: ರೈತ ದಸರಾ, ಕೃಷಿ ಮೇಳ ಮಾದರಿಯಲ್ಲಿ ಈ ಬಾರಿ ಹೊಸದಾಗಿ ಕೈಗಾರಿಕಾ ದಸರಾ ಹಾಗೂ ಆರೋಗ್ಯ ಮೇಳ ಆಯೋಜಿಸುವ ಚಿಂತನೆ ಇದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ ಸಭೆಗೆ ತಿಳಿಸಿದರು. ಆರೋಗ್ಯ ಮೇಳ ಹಾಗೂ ಆರೋಗ್ಯ ಸಂಬಂಧಿತ ವಸ್ತುಪ್ರದರ್ಶನ ಆಯೋಜಿಸಲು ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಹಾಗೆಯೇ ನಾಲ್ಕು ದಿನ ಕೈಗಾರಿಕಾ ದಸರಾ ಆಚರಣೆಗೆ ಕೈಗಾರಿಕಾ ಸಂಘದವರು ಮನವಿ ಮಾಡಿದ್ದಾರೆ ಎಂದರು.

ಧ್ಯೇಯ ಗೀತೆ: ಈ ಬಾರಿ ದಸರಾಗೆ `ಧ್ಯೇಯ ಗೀತೆ(ಥೀಮ್ ಸಾಂಗ್)’ ಮೂಲಕ ಹೊಸ ಮೆರುಗು ನೀಡುವ ಸಂಬಂಧ ತಯಾರಿ ನಡೆದಿದೆ. ಈಗಾಗಲೇ ಸ್ಥಳೀಯ ಕಲಾವಿದರು ರೂಪಿಸಿರುವ ಕೆಲ ಗೀತೆಗಳನ್ನು ಸಚಿವರೆದುರು ಪ್ರಸಾರ ಮಾಡಲಾಯಿತು. ಮತ್ತಷ್ಟು ಕಲಾವಿದರು ನೀಡುವ ಗೀತೆಗಳನ್ನೂ ಅವಲೋಕಿಸಿ ಅಂತಿಮವಾಗಿ ಆಯ್ಕೆ ಮಾಡಲಾಗುವುದು. ಆಯ್ಕೆ ಮಾಡುವ ದಸರಾ ಧ್ಯೇಯ ಗೀತೆಯನ್ನು ಎಲ್ಲಾ ಕಾರ್ಯಕ್ರಮ ಗಳಲ್ಲೂ ಪ್ರಸಾರ ಮಾಡಬಹುದು ಎಂದು ಮಂಜುನಾಥ ಸ್ವಾಮಿ ತಿಳಿಸಿದರು.

ಸಭೆಯಲ್ಲಿ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಪಂ ಸಿಇಒ ಪೂರ್ಣಿಮಾ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ, ಡಿಸಿಎಫ್ ಡಾ.ವಿ.ಕರಿಕಾಳನ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Translate »