ಮೈಸೂರು ಪ್ರಮುಖ ಸ್ಟಾರ್ಟ್‍ಅಪ್ ಆಗಿ ರೂಪುಗೊಳ್ಳುತ್ತಿದೆ
ಮೈಸೂರು

ಮೈಸೂರು ಪ್ರಮುಖ ಸ್ಟಾರ್ಟ್‍ಅಪ್ ಆಗಿ ರೂಪುಗೊಳ್ಳುತ್ತಿದೆ

February 20, 2022

ಮೈಸೂರು, ಫೆ. 19(ಆರ್‍ಕೆ)- ಕೈಗಾರಿಕೋದ್ಯ ಮಕ್ಕೆ ಪೂರಕ ವಾತಾವರಣವಿರುವ ಸಾಂಸ್ಕøತಿಕ ನಗರಿ ಮೈಸೂರು, ರಾಷ್ಟ್ರದ ಪ್ರಮುಖ ಸ್ಟಾರ್ಟ್‍ಅಪ್ ಆಗಿ ರೂಪುಗೊಳ್ಳುತ್ತಿದೆ ಎಂದು ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯ ದರ್ಶಿ ಡಾ. ಇ.ವಿ.ರಮಣರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಜೆಎಸ್‍ಎಸ್ ಮಹಾವಿದ್ಯಾ ಪೀಠ ಎಸ್‍ಜೆಸಿಇ-ಸ್ಟೆಪ್ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಂಯು ಕ್ತಾಶ್ರಯದಲ್ಲಿ ಮೈಸೂರಿನ ಎಸ್‍ಜೆಸಿಇ ಆವರಣದ ಗೋಲ್ಡನ್ ಜ್ಯೂಬಿಲಿ ಸೆಮಿನಾರ್ ಹಾಲ್‍ನಲ್ಲಿ ಇಂದು ನಡೆದ ಮೈಸೂರಿನ ಪ್ರಥಮ ಚಿಪ್ ಡಿಸೈನ್ ಕಂಪನಿಯು ಪಿಎಲ್‍ಎಸ್‍ಪಿ ಡಿಸೈನ್ ಸೆಂಟರ್ ಪ್ರೊಕ್ಸೆಲರ್ ಉದ್ಘಾಟನಾ ಸಮಾರಂಭದಲ್ಲಿ ವರ್ಚು ವಲ್ ಮೂಲಕ ಪಾಲ್ಗೊಂಡು ಅವರು ಮಾತನಾ ಡಿದರು. ಮೈಸೂರಿನ ಅನ್ವೇಷಣಾ ಸ್ಫೂರ್ತಿ ಇನ್‍ಕ್ಯು ಬೇಷನ್ ಅಕಾಡೆಮಿಕ್ ಮತ್ತು ವಾತಾವರಣ ಇವು ಕೈಗಾರಿಕೆಗಳ ಬೆಳವಣಿಗೆ ವಿಷಯದಲ್ಲಿ ಬೆಂಗ ಳೂರು ಹೊರತುಪಡಿಸಿ ಎಲ್ಲಾ ವಿಧದ ಸಾರಿಗೆ ಸಂಪರ್ಕ ಮೂಲ ಸೌಕರ್ಯ ಹೊಂದಿರುವ ಮೈಸೂರು 2ನೇ ನಗರವಾಗಿ ಸಾಂಸ್ಕøತಿಕ ನಗರಿ ಹೊರಹೊಮ್ಮುತ್ತಿದೆ ಎಂದು ಅವರು ಶ್ಲಾಘಿಸಿದರು.

ಸಂಶೋಧನೆ, ಉತ್ತಮ ಶಿಕ್ಷಣ ಸಂಸ್ಥೆ, ಅಕಾಡೆಮಿಯ ಮತ್ತು ಮಾಹಿತಿ ತಂತ್ರಜ್ಞಾನ ಕಂಪನಿಗಳು ಹೆಚ್ಚಾಗಿರು ವುದರಿಂದ ನವ ಉದ್ಯಮಿಗಳಿಗೆ ಪೂರಕ ವಾತಾ ವರಣ ಲಭ್ಯವಾಗುತ್ತಿರುವುದು ಅಭಿವೃದ್ಧಿಯ ಸಂಕೇತ ಎಂದ ಅವರು, ಮೈಸೂರನ್ನು ಪ್ರಮುಖ ಸ್ಟಾರ್ಟ್ ಅಪ್ ಕೇಂದ್ರಬಿಂದುವಾಗಿ ರೂಪುಗೊಳಿಸುವುದು ಸ್ಟೇಕ್ ಹೋಲ್ಡರ್‍ಗಳ ಜವಾಬ್ದಾರಿಯಾಗಿದೆ ಎಂದರು. ಇನ್‍ಫೋಸಿಸ್, ವಿಪ್ರೋ, ಎಲ್&ಟಿ ಯಂತಹ ಕಂಪನಿಗಳು ನವ ಪ್ರತಿಭೆಗಳಿಗೆ ವಿಶ್ವ ಮಟ್ಟದ ಅವಕಾಶ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದ ರಮಣರೆಡ್ಡಿ, ಮೈಸೂರಿನಲ್ಲಿ ಆರಂಭಿಸಿರುವ ಚಿಪ್ ಡಿಸೈನಿಂಗ್ ಮತ್ತು ಉತ್ಪಾ ದನಾ ವಲಯವು ಹಲವು ನವ ಉದ್ಯಮಗಳಿಗೆ ವರದಾನವಾಗಲಿವೆ ಎಂದರು. ಸುತ್ತೂರು ಮಠಾ ಧೀಶರಾದ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಅವರು ಎಸ್‍ಜೆಸಿಇ-ಸ್ಟೆಪ್ ಕೇಂದ್ರದಲ್ಲಿ ಪಿಎಲ್‍ಎಸ್‍ಪಿ ಡಿಸೈನ್ ಸೆಂಟರ್ ಅನ್ನು ಉದ್ಘಾ ಟಿಸಿದರು. ನಂತರ ಮಾತನಾಡಿದ ಅವರು, 1985 ರಿಂದಲೂ ಎಸ್‍ಜೆಸಿಇ ಸ್ಟೆಪ್ ಕೇಂದ್ರವು ದೇಶದ ಅತ್ಯುನ್ನತ ಇನ್‍ಕ್ಯುಬೇಷನ್ ತಾಣವಾಗಿ ಕೆಲಸ ಮಾಡುತ್ತಿದ್ದು, ಮಾಹಿತಿ ತಂತ್ರಜ್ಞಾನ ಇಲಾಖೆಯೂ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದರು.

ಎಸ್‍ಜೆಸಿಇ-ಸ್ಟೆಪ್ ಮತ್ತು ಕೆಡಿಇಎಂ ಹಾಗೂ ಎಸ್‍ಜೆಸಿಇ-ಸ್ಟೆಪ್ ಮತ್ತು ಟಿಪಿಇ ನಡುವೆ ಇದೇ ಸಂದರ್ಭದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾ ಯಿತು. ಲಹರಿ ಕೆಡಿಇಎಂ ಮುಖ್ಯಸ್ಥ ಸಂಜೀವ ಗುಪ್ತ ಪ್ರೊಕ್ಸೆಲರ್ ಸಿಇಒ ರವಿಶಂಕರ್ ರಾವ್, ಜೆಎಸ್‍ಎಸ್ ಪಿಇಡಿ ನಿರ್ದೇಶಕ ಬಿ.ಸುರೇಶ, ಜೆಎಸ್‍ಎಸ್ ಮಹಾ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರುಮಠ ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Translate »