ಮೈಸೂರು ನೂತನ ಜಿಲ್ಲಾಧಿಕಾರಿ  ಡಾ.ಬಗಾದಿ ಗೌತಮ್ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧಿಕಾರ ಸ್ವೀಕಾರ

June 7, 2021

ಮೈಸೂರು, ಜೂ.6(ವೈಡಿಎಸ್)- ಮೈಸೂ ರಿನ ನೂತನ ಜಿಲ್ಲಾಧಿಕಾರಿಯಾಗಿ ಡಾ. ಬಗಾದಿ ಗೌತಮ್ ಅವರು ರಜಾ ದಿನವಾಗಿ ದ್ದರೂ ಭಾನುವಾರವೇ ಅಧಿಕಾರ ಸ್ವೀಕರಿಸಿ ದರು. ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿ ಕಚೇ ರಿಗೆ ಆಗಮಿಸಿದ ಬಗಾದಿ ಗೌತಮ್ ಅವರನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ಹೂಗುಚ್ಛ ನೀಡಿ ಸ್ವಾಗತಿಸಿದರು. ವರ್ಗಾವಣೆ ಗೊಂಡಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಅನುಪಸ್ಥಿತಿಯಲ್ಲಿ ಬಗಾದಿ ಗೌತಮ್ ಅವರು ಎಡಿಸಿ ಮಂಜುನಾಥಸ್ವಾಮಿ ಅವರಿಂದ ಅಧಿಕಾರ ಸ್ವೀಕರಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದಿರುವುದು ಅನಿರೀಕ್ಷಿತ. ಕೊರೊನಾ ಪರಿಸ್ಥಿತಿಯಲ್ಲಿ ಇದು ಸವಾಲು. ಆದರೂ ಕೊರೊನಾ ನಿಯಂತ್ರಿಸುವುದೇ ನಮ್ಮ ಮೊದಲ ಆದ್ಯತೆ. ಈಗಾಗಲೇ ನಡೆಯುತ್ತಿರುವ ಉತ್ತಮ ಕಾರ್ಯಕ್ರಮಗಳನ್ನು ಮುಂದುವರೆಸುವ ಜೊತೆಗೆ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕೆಲವೊಂದು ಬದಲಾವಣೆ ತರುತ್ತೇನೆ. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಜನಪ್ರತಿ ನಿಧಿಗಳು, ಜನರು, ಸಂಘ-ಸಂಸ್ಥೆಗಳ ಉತ್ತಮ ಸಲಹೆಗಳನ್ನು ಸ್ವಾಗÀತಿಸುತ್ತೇನೆ ಎಂದರು.

ಯಾವುದೇ ಜಿಲ್ಲೆಯಾಗಿದ್ದರೂ ಆಡಳಿತದಲ್ಲಿ ಕ್ಲಿಷ್ಟ ವಿಷಯಗಳು ಇದ್ದೇ ಇರುತ್ತವೆ. ಮೈಸೂರು ಸಾಂಸ್ಕøತಿಕ, ಸಾಂಪ್ರದಾಯಿಕ ಜಿಲ್ಲೆ ಆಗಿರುವುದರಿಂದ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಇರಬಹುದು. ಪಾರದರ್ಶಕ, ಜನಸ್ನೇಹಿ, ಉತ್ತರದಾಯಿತ್ವ, ಹಾಗೂ ಸ್ವಚ್ಛ ಆಡಳಿತ ನೀಡಲು ನಮಗಿರುವ ಸರ್ವಶಕ್ತಿ ಉಪಯೋಗಿಸಿ, ಸರ್ಕಾರ ಘನತೆಯನ್ನು ಎತ್ತಿಹಿಡಿಯುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇವೆ. ಜನರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ-ಸಂಸ್ಥೆಗಳು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಎಷ್ಟೇ ಸಮಸ್ಯೆಗಳಿದ್ದರೂ ಬಗೆಹರಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

3 ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೀರಿ. ಮೈಸೂರಿಗೆ ಬರವಾಗ ಪೂರ್ವ ತಯಾರಿ ಮಾಡಿಕೊಂಡಿದ್ದೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ, ಹಿಂದಿನ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರು, ನೂತನ ಆಯುಕ್ತರು, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಪಂ ಸಿಇಓ ಜತೆ ಈಗಾಗಲೇ ಮಾತನಾಡಿದ್ದೇನೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೋವಿಡ್ ಮತ್ತಿತರೆ ಮಾಹಿತಿ ಪಡೆದುಕೊಳ್ಳುವೆ. ಒಂದೆರಡು ದಿನದಲ್ಲೇ ದೊಡ್ಡ ಬದಲಾವಣೆ ಆಗಿಬಿಡುತ್ತದೆಂದು ಹೇಳಲಾಗದು. ಬದಲಾವಣೆಗೆ ವಾರ, ತಿಂಗಳೇ ಬೇಕಾಗುತ್ತದೆ ಎಂದು ಉತ್ತರಿಸಿದರು.

ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅಭಿರಾಂ ಜಿ.ಶಂಕರ್ ಅವರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದೆ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ತರಬೇತಿ ಯನ್ನೂ ಪಡೆದಿದ್ದೇನೆ ಎಂದು ನೆನಪಿಸಿಕೊಂಡರು. 2009ರ ಐಎಎಸ್ ಬ್ಯಾಚ್ ಅಧಿಕಾರಿ ಯಾಗಿರುವ, 40 ವರ್ಷದ ಬಗಾದಿ ಗೌತಮ್, ರಾಯಚೂರು, ಚಿಕ್ಕಮಗಳೂರು, ದಾವಣಗೆರೆ ಜಿಲ್ಲಾಧಿಕಾರಿಯಾಗಿ, ಬೆಳಗಾವಿ ಜಿಪಂ ಸಿಇಓ ಆಗಿ ಕಾರ್ಯನಿರ್ವಹಿಸಿದ್ದರು.

Translate »