ಮೈಸೂರು ಬೆಳಗಲಿವೆ ಎಲ್‍ಇಡಿ ಬೀದಿದೀಪಗಳು
ಮೈಸೂರು

ಮೈಸೂರು ಬೆಳಗಲಿವೆ ಎಲ್‍ಇಡಿ ಬೀದಿದೀಪಗಳು

October 24, 2021

ಮೈಸೂರು, ಅ. 23(ಆರ್‍ಕೆ)- ಪಾರಂಪರಿಕ ನಗರಿ ಮೈಸೂರಲ್ಲಿ ಇನ್ನು ಮುಂದೆ ಬೆಳಗಲಿವೆ ಎಲ್‍ಇಡಿ (ಐighಣ ಇmiಣಣiಟಿg ಆioಜe) ಬೀದಿದೀಪಗಳು.

ಬೀದಿದೀಪಗಳ ಪ್ರಖರತೆ ಸಾಮಥ್ರ್ಯ ಹೆಚ್ಚಿಸುವುದರ ಜೊತೆಗೆ ವಿದ್ಯುತ್ ಉಳಿತಾಯ ಮಾಡುವ ಎಲ್‍ಇಡಿ ಯೋಜನೆಯನ್ನು ಮೈಸೂರಲ್ಲಿ ಅನುಷ್ಠಾನಗೊಳಿಸಬೇಕೆಂಬ ಹಲವು ವರ್ಷಗಳ ಮಹತ್ವಾಕಾಂಕ್ಷೆಯ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯ ಯೋಜನೆಯನ್ನು ಮೈಸೂರು ಮಹಾನಗರ ಪಾಲಿಕೆಯು ದೆಹಲಿ ಮೂಲದ ಇ-ಸ್ಮಾರ್ಟ್ ಸಂಸ್ಥೆಗೆ ಒಪ್ಪಿಸಿದೆ.
ಮೈಸೂರು ನಗರದಾದ್ಯಂತ ಎಲ್ಲಾ ರಸ್ತೆ, ಉದ್ಯಾನವನ, ರುದ್ರ ಭೂಮಿ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಈಗಿರುವ ವಿದ್ಯುತ್ ಬೀದಿದೀಪಗಳನ್ನು ತೆಗೆದು 60,000 ಎಲ್‍ಇಡಿ ಬಲ್ಬ್‍ಗಳನ್ನು ಅಳವಡಿಸಿ, 7 ವರ್ಷಗಳವರೆಗೆ ಸಂಸ್ಥೆಯೇ ನಿರ್ವ ಹಿಸಬೇಕೆಂದು ಪಾಲಿಕೆಯ ಒಪ್ಪಂದದಲ್ಲಿ ನಮೂದಿಸಲಾಗಿದೆ.

ಬಲ್ಬ್‍ಗಳ ಖರೀದಿ, ಅಳವಡಿಕೆ, ಆನ್ ಅಂಡ್ ಆಫ್ ಮೂಲಕ ಪರಿಶೀಲನೆ ಹಾಗೂ ಕೆಟ್ಟು ಹೋದಾಗ ರಿಪೇರಿ ಸೇರಿದಂತೆ ಎಲ್ಲಾ ರೀತಿಯ ನಿರ್ವಹಣೆಗೆ ಇ-ಸ್ಮಾರ್ಟ್ ಸಂಸ್ಥೆಯೇ ವೆಚ್ಚ ಭರಿಸಬೇಕು. ಈ ಮಹತ್ವದ ಯೋಜನೆಗೆ ಮೈಸೂರು ಮಹಾನಗರ ಪಾಲಿಕೆ ಒಂದು ನಯಾ ಪೈಸೆಯನ್ನೂ ಖರ್ಚು ಮಾಡುತ್ತಿಲ್ಲ ಎಂದು ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.
ಯೋಜನೆಯಿಂದ ಶೇ.53ರಷ್ಟು ವಿದ್ಯುತ್ ಉಳಿತಾಯ ಮಾಡುವುದಾಗಿ ಇ-ಸ್ಮಾರ್ಟ್ ಸಂಸ್ಥೆಯು ಒಪ್ಪಂದದಲ್ಲಿ ತಿಳಿ ಸಿದ್ದು, ಈ ಮೂಲಕ ಉಳಿತಾಯವಾಗುವ ವಿದ್ಯುತ್ ಶುಲ್ಕದ ಮೊತ್ತವನ್ನು ಆ ಸಂಸ್ಥೆ ಪಡೆಯಲಿದೆ. ಒಂದು ವೇಳೆ ಶೇ.53 ಕ್ಕಿಂತಲೂ ಹೆಚ್ಚು ವಿದ್ಯುತ್ ಉಳಿತಾಯವಾದಲ್ಲಿ ಆ ಹೆಚ್ಚು ವರಿ ಉಳಿತಾಯದ ಶೇ.50ರಷ್ಟು ವಿದ್ಯುತ್ ಶುಲ್ಕದ ಮೊತ್ತ ವನ್ನು ನಗರ ಪಾಲಿಕೆಗೆ ನೀಡುವಂತೆ ಒಪ್ಪಂದ ಮಾಡಿಕೊಳ್ಳ ಲಾಗಿದೆ ಎಂದು ವಿವರಿಸಿದರು.

ಪ್ರಸ್ತುತ ಮೈಸೂರು ನಗರದ ಬೀದಿದೀಪಗಳ ವಾರ್ಷಿಕ ವಿದ್ಯುತ್ ಶುಲ್ಕ ಸುಮಾರು 27 ಕೋಟಿ ರೂ.ಗಳನ್ನು ಪಾಲಿಕೆ ಸೆಸ್ಕ್‍ಗೆ ಪಾವತಿಸುತ್ತಿತ್ತು. ಇದೀಗ ಎಲ್‍ಇಡಿ ಬಲ್ಬ್ ಯೋಜನೆಯನ್ನು ಖಾಸಗಿ ಕಂಪನಿಗೆ ಒಪ್ಪಿಸಿರುವುದರಿಂದ ಪಾಲಿಕೆಗೆ ಹಣ ಉಳಿತಾಯವಾಗಲಿದೆ. ಎಲ್‍ಇಡಿ ಅಳವಡಿಕೆ ಹಾಗೂ 7 ವರ್ಷಗಳ ನಿರ್ವಹಣೆ ಜವಾ ಬ್ದಾರಿಯೂ ಇರುವುದಿಲ್ಲ ಎಂದು ತಿಳಿಸಿದರು.

ಬೆಳಗುತ್ತಿವೆ ಕೆಲ ರಸ್ತೆಗಳು: ಇ-ಸ್ಮಾರ್ಟ್ ಸಂಸ್ಥೆಯು ಮೈಸೂ ರಿನ ಹಾರ್ಡಿಂಜ್ ಸರ್ಕಲ್‍ನಿಂದ ಕೆ.ಆರ್.ಸರ್ಕಲ್, ಸಯ್ಯಾಜಿರಾವ್ ರಸ್ತೆ, ಸರ್ಕಾರಿ ಆಯುರ್ವೇದ ಕಾಲೇಜು ವೃತ್ತದಿಂದ ರೈಲ್ವೇ ಸ್ಟೇಷನ್ ಸರ್ಕಲ್, ಜೆಎಲ್‍ಬಿ ರಸ್ತೆ ಹಾಗೂ ಡಿ. ದೇವರಾಜ ಅರಸ್ ರಸ್ತೆಗಳಿಗೆ ಈಗಾಗಲೇ ಎಲ್‍ಇಡಿ ಬಲ್ಬ್‍ಗಳನ್ನು ಅಳವಡಿಸಿದ್ದು, ರಾತ್ರಿ ವೇಳೆ ಅವು ಬೆಳಗಲಾರಂಭಿಸಿವೆ. ಮೊದಲು ನಗರದ ಹೃದಯ ಭಾಗದ ಪ್ರಮುಖ ರಸ್ತೆ, ಜಂಕ್ಷನ್‍ಗಳಿಗೆ ಆದ್ಯತೆ ಮೇಲೆ ಬಲ್ಬ್‍ಗಳನ್ನು ಅಳವಡಿಸುವ ಕಾರ್ಯ ಭರದಿಂದ ನಡೆಯು ತ್ತಿದ್ದು, ನಂತರ ವಸತಿ ಬಡಾವಣೆ, ಉದ್ಯಾನವನ, ಸ್ಮಶಾನ ಹಾಗೂ ಕ್ರೀಡಾಂಗಣಗಳ ಬೀದಿದೀಪಗಳಿಗೆ ಎಲ್‍ಇಡಿ ಬಲ್ಬ್‍ಗಳನ್ನು ಅಳವಡಿಸಲಾಗುವುದು ಎಂದು ನಗರ ಪಾಲಿಕೆ ಸೂಪರಿಂಟೆಂಡಿಂಗ್ ಇಂಜಿನಿಯರ್ ಮಹೇಶ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಮೂರು ತಿಂಗಳೊಳಗಾಗಿ ಮೈಸೂರು ನಗರದಾದ್ಯಂತ ಎಲ್‍ಇಡಿ ಬಲ್ಬ್ ಅಳವಡಿಸುವುದಾಗಿ ಯೋಜನೆ ಜವಾ ಬ್ದಾರಿ ಹೊತ್ತಿರುವ ಸಂಸ್ಥೆಯು ಭರವಸೆ ನೀಡಿದೆ. ಅವರಿಗೆ ನಿಯಂತ್ರಣ ಘಟಕ(ಕಂಟ್ರೋಲ್ ಯೂನಿಟ್) ಸ್ಥಾಪಿಸಿ ಕೊಳ್ಳಲು ಯಾದವಗಿರಿಯ ವಾಣಿವಿಲಾಸ ವಾಟರ್ ವಕ್ರ್ಸ್ ಆವರಣದ ಒಂದು ಕಟ್ಟಡ ನೀಡಲಾಗಿದೆ. ತಂತ್ರಜ್ಞಾನ ಅಳ ವಡಿಸಿಕೊಂಡು ಸಿಮ್‍ಗಳ ಮೂಲಕ ಅಲ್ಲಿಂದಲೇ ಬೀದಿದೀಪ ಗಳ ಆನ್ ಅಂಡ್ ಆಫ್ ಹಾಗೂ ನಿರ್ವಹಣೆಯನ್ನು ಇ-ಸ್ಮಾರ್ಟ್ ಸಂಸ್ಥೆ ಸಿಬ್ಬಂದಿ ಮಾಡಲಿದ್ದಾರೆ ಎಂದು ತಿಳಿಸಿದರು.

ಬಲ್ಬ್ ಅಳವಡಿಕೆ, ನಿರ್ವಹಣೆ ಹಾಗೂ ವಿದ್ಯುತ್ ಬಿಲ್ ಪಾವತಿ ಪ್ರಕ್ರಿಯೆಗಳನ್ನೆಲ್ಲಾ ಏಳು ವರ್ಷಗಳವರೆಗೆ ಸಂಸ್ಥೆಯೇ ನಿರ್ವಹಿಸಲಿದ್ದು, ನಂತರ ಅವರು ಯೋಜನೆ ಯನ್ನು ಪಾಲಿಕೆಗೆ ಹಸ್ತಾಂತರಿಸಬೇಕು. ನಮ್ಮ ನಗರ ಪಾಲಿಕೆಯಿಂದ ಈ ಯೋಜನೆಗೆ ಹಣ ಭರಿಸುತ್ತಿಲ್ಲ. ಒಪ್ಪಂದದಂತೆ ಶೇ.53ರಷ್ಟು ವಿದ್ಯುತ್ ಉಳಿತಾಯಕ್ಕೆ ತಗುಲುವ ಶುಲ್ಕದ ಮೊತ್ತವನ್ನು ಸಂಸ್ಥೆ ಪಡೆಯುತ್ತದೆ. ತುಮಕೂರು ನಗರದಲ್ಲಿ ಪ್ರಾಯೋಗಿಕವಾಗಿ ಎಲ್‍ಇಡಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿದ್ದರೂ ಇನ್ನೂ ಬೆಳಗಿಸಿಲ್ಲ. ಆದರೆ ರಾಜ್ಯದಲ್ಲೇ ಮೊದಲ ಬಾರಿ ಮೈಸೂ ರಲ್ಲಿ ಬಲ್ಬ್ ಅಳವಡಿಸಿ ಉದ್ಘಾಟನೆಯನ್ನೂ ಮಾಡ ಲಾಗಿದೆ ಎಂದು ಮಹೇಶ್ ಹೇಳಿದರು.

ಸಿಎಂ ವಿಧ್ಯುಕ್ತ ಚಾಲನೆ: ದಸರಾ ಮಹೋತ್ಸವ ಆರಂಭ ಗೊಳ್ಳುವ ಹಿಂದಿನ ದಿನ(ಅ.6) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಮೈಸೂರಿನ ಅರಮನೆ ಉತ್ತರ ದ್ವಾರದ ಚಾಮರಾಜ ವೃತ್ತದಲ್ಲಿ ಅಳವಡಿಸಿದ್ದ ಎಲ್‍ಇಡಿ ಬೀದಿ ದೀಪಗಳ ಸ್ವಿಚ್ ಆನ್ ಮಾಡುವ ಮೂಲಕ ಈ ಮಹತ್ವಾಕಾಂಕ್ಷಿ ಯೋಜನೆಗೆ ವಿಧ್ಯುಕ್ತ ಚಾಲನೆ ನೀಡಿದ್ದರು.

Translate »