ವಾಹನಗಳ ಸರಣಿ ಅಪಘಾತ
ಮೈಸೂರು

ವಾಹನಗಳ ಸರಣಿ ಅಪಘಾತ

October 24, 2021

ಮೈಸೂರು,ಅ.23(ಆರ್‍ಕೆ)-ಸರಣಿ ಅಪಘಾತ ದಲ್ಲಿ ಚಾಲಕರು ಹಾಗೂ ಪ್ರಯಾಣಿಕರು ಅಪಾಯ ದಿಂದ ಪಾರಾದರೂ ವಾಹನಗಳು ಜಖಂ ಗೊಂಡ ಘಟನೆ ಮೈಸೂರಿನ ಬನ್ನಿಮಂಟಪದ ಕೆಎಸ್‍ಆರ್‍ಟಿಸಿ ಬಸ್ ಡಿಪೋ ಎದುರು ನೆಲ್ಸನ್ ಮಂಡೇಲ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಮಿಲೇನಿಯಂ ಸರ್ಕಲ್‍ನಿಂದ ಹೈವೇ ಸರ್ಕಲ್ ಕಡೆಗೆ ಬರುತ್ತಿದ್ದ ಆಡಿ (ಎಪಿ 10-ಎಎಕ್ಸ್ 0030) ಕಾರು, ಎದುರಿನಿಂದ ಬರುತ್ತಿದ್ದ ಲಾರಿ (ಕೆಎ 16-ಸಿ 6755)ಗೆ ಕೆಎಸ್‍ಆರ್‍ಟಿಸಿ ನಗರ ಬಸ್ ಡಿಪೋ ಎದುರು ಬೆಳಗ್ಗೆ 10.30 ಗಂಟೆ ಯಲ್ಲಿ ಡಿಕ್ಕಿ ಹೊಡೆದು, ವಿರುದ್ಧ ದಿಕ್ಕಿಗೆ ತಿರುಗಿ ನಿಂತಿತು. ಅದೇ ವೇಳೆ ಮಿಲೇನಿಯಂ ಸರ್ಕಲ್ ನಿಂದ ಹೈವೇ ಸರ್ಕಲ್ ಕಡೆಗೆ ಬರುತ್ತಿದ್ದ ಟಾಟಾ ನ್ಯಾನೋ ಕಾರು ಆಡಿಗೆ ಡಿಕ್ಕಿ ಹೊಡೆದರೆ, ಹೈವೇ ಸರ್ಕಲ್ ಕಡೆಯಿಂದ ಬರುತ್ತಿದ್ದ ಹುಂಡೈ ಸ್ಯಾಂಟ್ರೋ ಕಾರು ಲಾರಿಗೆ ಡಿಕ್ಕಿ ಹೊಡೆಯಿತು.

ಪರಿಣಾಮ ಆಡಿ ಕಾರಿನ ಮುಂದಿನ ಬಲ ಭಾಗ ಜಖಂಗೊಂಡಿತಾದರೂ, ಬಲೂನ್‍ಗಳು ತೆರೆದುಕೊಂಡ ಕಾರಣ ಕಾರಿನಲ್ಲಿದ್ದ ಮೂವರು ಅಪಾಯದಿಂದ ಪಾರಾದರು. ಇನ್ನು ನ್ಯಾನೋ ಮತ್ತು ಸ್ಯಾಂಟ್ರೋ ಕಾರುಗಳೂ ಅಲ್ಪ ಮಟ್ಟಿಗೆ ಜಖಂ ಆದರೂ ಅವರು ನಿಲ್ಲದೇ ಹೊರಟು ಹೋದರು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗ ಮಿಸಿದ ಎನ್.ಆರ್. ಸಂಚಾರ ಠಾಣೆ ಇನ್ಸ್ ಪೆಕ್ಟರ್ ಪ್ರಸನ್ನಕುಮಾರ್ ಹಾಗೂ ಸಿಬ್ಬಂದಿ, ಪ್ರಕ ರಣ ದಾಖಲಿಸಿಕೊಂಡು ಲಾರಿ ಮತ್ತು ಆಡಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಸರಣಿ ಅಪ ಘಾತವಾಗಿ ವಾಹನಗಳು ಜಖಂಗೊಂಡರೂ, ಅದೃಷ್ಟವಶಾತ್ ಯಾರಿಗೂ ಅಪಾಯವಾಗಲಿಲ್ಲ.

Translate »