ಮೈಸೂರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ  ನಾಳೆ ಬಿಯಾಂಡ್ ಬೆಂಗಳೂರು ಸಮ್ಮಿಟ್ ಉದ್ಘಾಟನೆ
ಮೈಸೂರು

ಮೈಸೂರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ನಾಳೆ ಬಿಯಾಂಡ್ ಬೆಂಗಳೂರು ಸಮ್ಮಿಟ್ ಉದ್ಘಾಟನೆ

October 24, 2021

ಮೈಸೂರು, ಅ.23- ಕೆ-ಟೆಕ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮತ್ತು ಸ್ಟಾರ್ಟ್ ಅಪ್ ಕರ್ನಾಟಕದ ಸಂಯುಕ್ತ ಆಶ್ರಯದಲ್ಲಿ ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಮೈಸೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ಅ.25ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಬಿಯಾಂಡ್ ಬೆಂಗಳೂರು ಸಮ್ಮಿಟ್ ಕಾರ್ಯಕ್ರಮವನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವ ಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಲಿದ್ದಾರೆ.

ರಾಜ್ಯಾದ್ಯಂತ ಇರುವ ಎರಡನೇ ಮತ್ತು 3ನೇ ದರ್ಜೆ ನಗರಗಳಲ್ಲಿ ಸಮೂಹ ತಂತ್ರಜ್ಞಾನಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಬಿಯಾಂಡ್ ಬೆಂಗ ಳೂರು ಕರ್ನಾಟಕ ಸರ್ಕಾರದ ಒಂದು ಪ್ರಾಯೋಗಿಕ ಕಾರ್ಯಕ್ರಮ ವಾಗಿದೆ. ಇದು ಕಾರ್ಯತಂತ್ರದ ನೀತಿ ಮಧ್ಯಸ್ಥಿಕೆಗಳು ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಕ್ರಿಯಾತ್ಮಕ ಪರಿಸರ ವ್ಯವಸ್ಥೆ ರೂಪಿಸುವುದು, ಪ್ರತಿಭೆಯ ಲಭ್ಯತೆಯನ್ನು ಹೆಚ್ಚಿಸುವುದು ಮತ್ತು ಉತ್ತಮ ಮಾರುಕಟ್ಟೆ ಕಲ್ಪಿಸುವುದು ಇದರ ಮೂಲ ಉದ್ದೇಶವೂ ಆಗಿದೆ.

ಸಮ್ಮಿಟ್‍ಗೆ ಉದ್ಯಮಿಗಳು, (iಟಿಜusಣಡಿಥಿ ಟeಚಿಜeಡಿs), ನೀತಿ ನಿರೂ ಪಕರು (ಠಿoಟiಛಿಥಿ mಚಿಞeಡಿs), ಆರ್ ಅಂಡ್ ಡಿ ಸಮುದಾಯ ಮತ್ತು ಸ್ಟಾರ್ಟ್ ಅಪ್‍ಗಳು ಬರಲಿದ್ದು, ತಮ್ಮ ಅಭಿವೃದ್ಧಿಯ ಪಥದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಉನ್ನತ ಶಿಕ್ಷಣ, ವಿದ್ಯುನ್ಮಾನ, ಐಟಿ, ಬಿಟಿ ಹಾಗೂ ಎಸ್ ಅಂಡ್ ಟಿ, ಕೌಶಲ್ಯಾಭಿ ವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮೇಯರ್ ಸುನಂದಾ ಪಾಲನೇತ್ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಶಾಸಕ ಎಸ್.ಎ. ರಾಮದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭವು ಸಿಐಐ ಮೈಸೂರು ಮತ್ತು ಎನ್.ಆರ್. ಗ್ರೂಪ್ ಅಧ್ಯಕ್ಷ ಪವನ್ ರಂಗ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾಗಲಿದೆ. ಐಬಿಎಂ ಇಂಡಿಯಾ/ಸೌತ್ ಏಷಿಯಾ ಸಂದೀಪ್ ಪಟೇಲ್ ಮತ್ತು ಬಯೋಕಾನ್ ಲಿಮಿಟೆಡ್ ಮತ್ತು ಬಯೋಕಾನ್ ಬಯಾಲಾಜಿಕ್ಸ್ ಲಿಮಿಟೆಡ್‍ನ ಕಾರ್ಯನಿರ್ವಾ ಹಕ ಅಧ್ಯಕ್ಷ ಕಿರಣ್ ಮಜುಂದಾರ್ ಷಾ ಪ್ರಾಸ್ತಾವಿಕ ಭಾಷಣ ಮಾಡುವರು.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಆಕ್ಸೆಲ್‍ನ ಪಾಲುದಾರ ಪ್ರಶಾಂತ್ ಪ್ರಕಾಶ್, ವಿದ್ಯುನ್ಮಾನ, ಐಟಿ, ಬಿಟಿ ಹಾಗೂ ಎಸ್ ಅಂಡ್ ಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ನ್ಯಾಸ್‍ಕಾಮ್ ಅಧ್ಯಕ್ಷ ದೆಬ್‍ಜಾನಿ ಘೋಷ್, ವಿಎಂ ವೇರ್ ವ್ಯವಸ್ಥಾಪಕ ನಿರ್ದೇಶಕ ರಾಮ್‍ಕುಮಾರ್ ನಾರಾಯಣ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ.ವಿ. ನಾಯ್ಡು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ.

ಮಧ್ಯಾಹ್ನ 12ಕ್ಕೆ ನೂತನ ಜಿಸಿಸಿ ತಂತ್ರಗಾರಿಕೆ, ಮಧ್ಯಾಹ್ನ 1.45ಕ್ಕೆ ಪೇಸ್ ಆಫ್ ಟೆಕ್ನಾಲಜಿಕಲ್ ಚೇಂಜಸ್, ಮಧ್ಯಾಹ್ನ 2.45ಕ್ಕೆ ಮೈಸೂರು ರೆಡಿ ಫಾರ್ ಫ್ಯೂಚರ್ ಡಿಜಿಟಲ್ ಜಾಬ್ಸ್ ಮತ್ತು ಮಧ್ಯಾಹ್ನ 3.45ಕ್ಕೆ ಸ್ಟಾರ್ಟ್ ಅಪ್ಸ್ ಫ್ರಂ ದಿ ಸಾಯಿಲ್ ಆಫ್ ಮೈಸೂರು ಕುರಿತು ಅಧಿವೇಶನಗಳು ನಡೆಯಲಿವೆ. ನೋಂದಣಿಗೆ: hಣಣಠಿ://beಥಿoಟಿಜbeಟಿgಚಿಟuಡಿe.ಛಿom/bb_ಜಿoಡಿms/ಡಿeg.ಠಿhಠಿ?ಛಿiಣಥಿ=ಒಥಿsuಡಿe (ಒob : 98860-98544 oಡಿ emಚಿiಟ: shಥಿಚಿm.bಡಿ@mmಚಿಛಿಣiv.ಛಿom)ಸಂಪರ್ಕಿಸಬಹುದು.

Translate »