ಕೋರ್ಟ್ ಅಂಗಳದಲ್ಲಿ ಮೈಸೂರು ಮೇಯರ್ ಚುನಾವಣಾ ಭವಿಷ್ಯ
ಮೈಸೂರು

ಕೋರ್ಟ್ ಅಂಗಳದಲ್ಲಿ ಮೈಸೂರು ಮೇಯರ್ ಚುನಾವಣಾ ಭವಿಷ್ಯ

February 23, 2021

ಮೈಸೂರು, ಫೆ.22(ಎಸ್‍ಬಿಡಿ)- ಮೈಸೂರು ನಗರ ಪಾಲಿಕೆ ಮೇಯರ್ ಚುನಾವಣೆಗೆ ಇನ್ನೊಂದು ದಿನ ಬಾಕಿ ಇರುವ ಸಂದರ್ಭದಲ್ಲಿ ಎಲ್ಲಾ ಪಕ್ಷಗಳೂ ನ್ಯಾಯಾ ಲಯದತ್ತ ಚಿತ್ತ ಹರಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಮೇಯರ್ ಮೀಸಲಾತಿ ಸಂಬಂಧ ಪಾಲಿಕೆಯ ಪಕ್ಷೇ ತರ ಸದಸ್ಯ ಸಮೀವುಲ್ಲಾ ಹೈಕೋರ್ಟ್ ಮೆಟ್ಟಿಲೇರಿದ್ದು, ನಿಗದಿಯಂತೆ ಫೆ.24ರಂದು ಮೇಯರ್ ಚುನಾವಣೆ ನಡೆಯಲು ಅವಕಾಶ ಸಿಗುವುದೋ? ಅಥವಾ ತಡೆಯಾಗು ವುದೋ? ಎಂಬುದು ಮಂಗಳವಾರ ಸ್ಪಷ್ಟವಾಗಲಿದೆ.

ಮೈಸೂರು ನಗರ ಪಾಲಿಕೆ ಮೇಯರ್ ಚುನಾವಣೆಗೆ 2018ರಿಂದ 2020ರವರೆಗೆ ಮಹಿಳಾ ಮೀಸಲಾತಿ ನೀಡ ಲಾಗಿದೆ. ಪರಿಶಿಷ್ಟ ಜಾತಿ ಮಹಿಳೆ, ಸಾಮಾನ್ಯ ಮಹಿಳೆ, ಬಿಸಿಎ ಮಹಿಳೆ ಹೀಗೆ ಕಳೆದ ಮೂರು ಅವಧಿಯಲ್ಲೂ ಮಹಿಳೆಗೆ ಮೀಸಲಾತಿ ನೀಡಿದ್ದರೂ ಪ್ರಸಕ್ತ ಮೇಯರ್ ಅವಧಿಯನ್ನೂ ನಿಯಮ ಬಾಹಿರವಾಗಿ ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ಇದು ಕಾನೂನು ಬಾಹಿರ ವಾಗಿದ್ದು, ಸರ್ಕಾರ ನಿಗದಿಪಡಿಸಿರುವ ಮೀಸಲಾತಿ ಯನ್ನು ರದ್ದುಪಡಿಸಿ, `ಸಾಮಾನ್ಯ’ ಮೀಸಲು ಕಲ್ಪಿಸಲು ಆದೇಶ ನೀಡುವಂತೆ ಕಾರ್ಪೊರೇಟರ್ ಸಮೀವುಲ್ಲಾ ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆ ಯಲ್ಲಿ ಸೋಮವಾರ ಪ್ರತಿವಾದಿಯಾಗಿರುವ ರಾಜ್ಯ ಸರ್ಕಾರ ಹಾಗೂ ಮೈಸೂರು ನಗರ ಪಾಲಿಕೆಗೆ ಸೋಮವಾರ ನ್ಯಾಯಾಲಯ ನೋಟಿಸ್ ನೀಡಿದ್ದು, ಮಂಗಳವಾರಕ್ಕೆ ವಿಚಾರಣೆ ಕಾಯ್ದಿರಿಸಿದೆ.

ಹಾಗಾಗಿ ಜೆಡಿಎಸ್‍ನೊಂದಿಗೆ ಮೈತ್ರಿಗಾಗಿ ಗಂಭೀರ ಪ್ರಯತ್ನದಲ್ಲಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ, ಮಂಗಳವಾರ ನ್ಯಾಯಾಲಯದಲ್ಲಿ ಏನಾಗಬಹುದು ಎಂದು ಎದುರು ನೋಡುವಂತಾಗಿದೆ. ಇತ್ತ ಮೈತ್ರಿ ವಿಚಾರವಾಗಿ ಈವರೆಗೂ ಯಾವ ಪಕ್ಷಕ್ಕೂ ಸ್ಪಷ್ಟ ಆಶ್ವಾಸನೆ ನೀಡದಿರುವ ಜೆಡಿಎಸ್ ಕೂಡ, ನ್ಯಾಯಾಲಯದಲ್ಲಿ ಏನಾಗುತ್ತದೆ ಎಂಬುದನ್ನು ನೋಡಿಕೊಂಡು ಮುಂದುವರೆಯಲು ನಿರ್ಧರಿಸಿದೆ.

ಜೆಡಿಎಸ್-ಬಿಜೆಪಿ ಚರ್ಚೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್‍ಸಿಂಹ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಹಾಗೂ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸೋಮವಾರ ಸಂಜೆ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಕಚೇರಿಗೆ ಭೇಟಿ ನೀಡಿ, ಅವ ರೊಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಮೇಯರ್ ಚುನಾವಣೆ ಸಂಬಂಧ ಚರ್ಚೆ ನಡೆಸಿದರು. ಜೆಡಿಎಸ್ ಮುಖಂಡ ಅಬ್ದುಲ್ಲಾ, ನಗ ರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಮಾಜಿ ಕಾರ್ಪೊರೇಟರ್ ಕೆ.ವಿ.ಮಲ್ಲೇಶ್ ಸಭೆಯಲ್ಲಿ ಭಾಗಿಯಾಗಿದ್ದರು.

ಸಭೆಯ ನಂತರ ಮಾಧ್ಯಮ ಗಳಿಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮಶೇಖರ್, ನಮ್ಮ ಜೊತೆ ಮೈತ್ರಿಯಾಗು ವಂತೆ ಸಾ.ರಾ.ಮಹೇಶ್ ಅವರಲ್ಲಿ ಮನವಿ ಮಾಡಿ, ಉತ್ತಮ ಆಡಳಿತ ನೀಡಲು ಸಹಕಾರ ಕೋರಿದ್ದೇವೆ. ಹೈಕಮಾಂಡ್ ಬಳಿ ಮಾತುಕತೆ ನಡೆಸಿ ನಿರ್ಧಾರ ಹೇಳುವುದಾಗಿ ತಿಳಿಸಿ ದ್ದಾರೆ. ನಮ್ಮ ಪಕ್ಷದ ಸದಸ್ಯರು ಮೇಯರ್ ಆಗಬೇಕು ಎಂಬುದು ನಮ್ಮ ನಿಲುವು. ನಾವು ಕಾಂಗ್ರೆಸ್ ಜೊತೆ ಹೋಗು ವುದಿಲ್ಲ. ಜೆಡಿಎಸ್-ಬಿಜೆಪಿ ನಡುವೆ ಋಣಾನುಬಂಧ ಇದೆ. ಕೊಡುವುದು, ತೆಗೆದುಕೊಳ್ಳುವುದು ಜೆಡಿಎಸ್‍ನೊಂದಿಗಿದೆ. ಹಾಗಾಗಿ ನಮ್ಮ ಕಡೆ ಸ್ವಲ್ಪ ಸಿಂಪಥಿ ತೋರಿ ಎಂದು ಸಾ.ರಾ ಮಹೇಶ್‍ಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಶಾಸಕ ಸಾ.ರಾ.ಮಹೇಶ್ ಪ್ರತಿಕ್ರಿಯಿಸಿ, ಮೈಸೂರು ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮುರಿಯಲು ಸಿದ್ದರಾಮಯ್ಯನವರು ಕಾರಣ. ಜೆಡಿಎಸ್ ಪಕ್ಷವೇ ಅಲ್ಲ ಎಂದು ಪದೇ ಪದೆ ಹೇಳಿ ಮೈತ್ರಿ ಮುರಿಯಲು ಕಾರಣರಾದರು. ಅವರು ಆ ಹೇಳಿಕೆ ನೀಡದಿದ್ದರೆ ಏನೂ ಆಗುತ್ತಿರಲಿಲ್ಲ. ಈಗ ನಗರ ಪಾಲಿಕೆ ಯಲ್ಲಿ ಬಿಜೆಪಿಯವರು ಸಹಕಾರ ಕೋರಿದ್ದಾರೆ. ಯಾರಿಗೂ ಬಹುಮತವಿಲ್ಲದ ಕಾರಣ ಯಾರ ಜೊತೆಯಾದರೂ ಮೈತ್ರಿಯಾಗಲೇಬೇಕು. ಈ ಹಿಂದೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೆವು. ಆದರೆ ರಾಜ್ಯದಲ್ಲಿ ಮೈತ್ರಿ ಮುರಿದ ಹಿನ್ನೆಲೆ ಮೈಸೂರು ಪಾಲಿಕೆ ಮೈತ್ರಿ ಮುಂದುವರಿಕೆ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಈಗ ಬಿಜೆಪಿ ಸಚಿವರು, ಸಂಸದರು ಬಂದು ಕೇಳಿದ್ದಾರೆ. ಅವರ ಮನವಿಯನ್ನು ನಾನು ಹೈಕಮಾಂಡ್‍ಗೆ ತಿಳಿಸುತ್ತೇನೆ. ಹೈಕಮಾಂಡ್ ನಿರ್ಧಾರದಂತೆ ನಡೆದುಕೊಳ್ಳುತ್ತೇವೆ ಎಂದರು.

ಇಂದು ಹೆಚ್‍ಡಿಕೆ ಸಭೆ?: ಮಂಗಳವಾರ ಮಧ್ಯಾಹ್ನ ಮೈಸೂರಿನ ಹೋಟೆಲ್‍ವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಸ್ಥಳೀಯ ಮುಖಂಡರು ಹಾಗೂ ಕಾರ್ಪೊರೇಟರ್‍ಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಎಲ್ಲರ ವೈಯಕ್ತಿಕ ಅಭಿಪ್ರಾಯ ತಿಳಿದು ಕೊಳ್ಳುವುದರ ಜೊತೆಗೆ ಯಾವ ಪಕ್ಷದೊಂದಿಗೆ ಮೈತ್ರಿ ಯಾದರೆ ಪಕ್ಷಕ್ಕೆ ಒಳಿತು ಎಂಬುದರ ಬಗ್ಗೆ ವಿಸ್ತøತ ಚರ್ಚೆ ನಡೆಸಿ, ಅಂತಿಮವಾಗಿ ತೀರ್ಮಾನ ಕೈಗೊಳ್ಳಲಿ ದ್ದಾರೆ ಎಂದು ತಿಳಿದುಬಂದಿದೆ.

ಯಾರೊಂದಿಗೆ ಮೈತ್ರಿ?: ಮೇಯರ್ ಚುನಾವಣೆಗೆ ನ್ಯಾಯಾಲಯ ತಡಯಾಜ್ಞೆ ನೀಡದಿದ್ದರೆ, ಮಂಗಳವಾರ ಜೆಡಿಎಸ್ ಸ್ಪಷ್ಟ ನಿಲುವು ಪ್ರಕಟಿಸುವ ಸಾಧ್ಯತೆಯಿದೆ. ಈವರೆಗೂ ಬಿಜೆಪಿಗೆ ಮೇಯರ್ ಸ್ಥಾನ ಮರೀಚಿಕೆ ಯಾಗಿರುವುದರಿಂದ ಈ ಬಾರಿ ಅದನ್ನು ಸಾಧಿಸಲೇಬೇಕು ಎಂದು ಗಂಭೀರ ಪ್ರಯತ್ನ ನಡೆದಿದೆ. ಅತ್ತ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕೂಡ ಜೆಡಿಎಸ್ ನಾಯಕ ರೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದಾರೆ. ಜೆಡಿಎಸ್‍ಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟರೆ ಮಾತ್ರ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬಹುದು. ಇಲ್ಲವಾ ದರೆ ಕಾಂಗ್ರೆಸ್ ಜೊತೆ ಮತ್ತೆ ಕೈ ಜೋಡಿಸಿ ಮೇಯರ್ ಸ್ಥಾನ ನೀಡಬಹುದು. ಮತ್ತೊಂದು ಮೂಲದ ಪ್ರಕಾರ ಜೆಡಿಎಸ್ ಯಾವ ಪಕ್ಷದೊಂದಿಗೆ ಮೈತ್ರಿಯಾದರೂ ಪ್ರಸಕ್ತ ಅವಧಿಯಲ್ಲಿ ಮೇಯರ್ ಸ್ಥಾನ ದಕ್ಕಿಸಿಕೊಳ್ಳು ವುದು ನಿಶ್ಚಿತ ಎನ್ನಲಾಗುತ್ತಿದೆ. ವಿಧಾನಪರಿಷತ್ ಸಭಾ ಪತಿ ಚುನಾವಣೆ ಸಂದರ್ಭದಲ್ಲಾದ ಜೆಡಿಎಸ್-ಬಿಜೆಪಿ ಋಣಾನುಬಂಧ ಮೈಸೂರು ನಗರ ಪಾಲಿಕೆಯಲ್ಲೂ ಮುಂದುವರೆಯಲಿದೆ. ಈ ಬಾರಿ ಬಿಜೆಪಿ ಬಿಜೆಪಿ ಗದ್ದುಗೆ ಏರುವ ನಿಟ್ಟಿನಲ್ಲಿ ಉಭಯ ಪಕ್ಷಗಳ ನಾಯ ಕರು ಮೇಲ್ಮಟ್ಟದಲ್ಲೇ ತೀರ್ಮಾನಿಸಿದ್ದಾರೆ ಎಂಬ ವಾದವೂ ಬಲವಾಗಿ ಕೇಳಿಬರುತ್ತಿದೆ. ಅದೇನೇ ಆದರೂ ಮೇಯರ್ ಚುನಾವಣೆ ಸಂಬಂಧ ಮಂಗಳವಾರ ಸ್ಪಷ್ಟ ಚಿತ್ರಣ ಸಿಗಲಿದೆ.

Translate »