`ಜನಪರ ಉತ್ಸವ’ದಲ್ಲಿ ಕಲೆ ಪ್ರದರ್ಶಿಸಿ ಸಂಭ್ರಮಿಸಿದ ವಿವಿಧ ಕಲಾ ತಂಡಗಳು
ಮೈಸೂರು

`ಜನಪರ ಉತ್ಸವ’ದಲ್ಲಿ ಕಲೆ ಪ್ರದರ್ಶಿಸಿ ಸಂಭ್ರಮಿಸಿದ ವಿವಿಧ ಕಲಾ ತಂಡಗಳು

February 23, 2021

ಮೈಸೂರು, ಫೆ.22(ಆರ್‍ಕೆಬಿ)- ಮೈಸೂ ರಿನ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಸೋಮವಾರ ನಡೆದ ಜನಪರ ಉತ್ಸವದಲ್ಲಿ ವಿವಿಧ ಕಲಾತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಸಂಭ್ರಮಿಸಿದರು.

ಮೊದಲಿಗೆ ಮೈಸೂರಿನ ಭಾಗ್ಯಲಕ್ಷ್ಮಿ ಮತ್ತು ತಂಡ ಗಣೇಶನ ಹುಟ್ಟಿನ ವಿಚಾರ ವನ್ನು ಕುರಿತು ಪ್ರಸ್ತುತಪಡಿಸಿದ `ಶ್ರೀ ಗಜಾ ನನ ಕಥೆ’ ನೃತ್ಯ ರೂಪಕ ಪ್ರೇಕ್ಷಕರನ್ನು ಸೆರೆ ಹಿಡಿಯಿತು. ಮೈಸೂರಿನ ನಿಖಿಲ್ ಮತ್ತು ತಂಡದ ಡೊಳ್ಳು ಕುಣಿತ, ತಿ.ನರಸೀ ಪುರದ ನಿಂಗರಾಜು ಮತ್ತು ತಂಡದ ಸುಗಮ ಸಂಗೀತ, ಹೆಚ್.ಡಿ.ಕೋಟೆ ತಾಲೂಕಿನ ಶಿರಮಳ್ಳಿಯ ಚಂದ್ರಕಾಂತ್ ಮತ್ತು ತಂಡದಿಂದ ಮಂಟೆಸ್ವಾಮಿ ಹಾಗೂ ಮಹದೇಶ್ವರರ ಕಾವ್ಯ ಗಾಯನ ಚೆನ್ನಾಗಿ ಮೂಡಿಬಂದಿತು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ವಿಶೇಷ ಘಟಕ ಯೋಜನೆಯಡಿ ಜನಪರ ಉತ್ಸವವನ್ನು ಆಯೋಜಿಸಿತ್ತು. ಮೈಸೂ ರಿನ ದೇಸಿರಂಗ ಸಾಂಸ್ಕøತಿಕ ಸಂಸ್ಥೆಯ ಕಂಸಾಳೆ, ತಿ.ನರಸೀಪುರದ ಕರಿಯಪ್ಪ ಮತ್ತು ತಂಡದ ಪೂಜಾ ಕುಣಿತ, ನೆಲೆ ಹಿನ್ನೆಲೆಯ ಗೊರವರ ಕುಣಿತ, ಲಕ್ಷ್ಮೀರಾಂ ಮತ್ತು ತಂಡದ ಜಾನಪದ ಗೀತೆ, ತಿ.ನರಸೀಪರದ ಚೆನ್ನಾಜಮ್ಮ ಮತ್ತು ತಂಡ, ಚಿಕ್ಕಮಂಚಮ್ಮ ಮತ್ತು ತಂಡದ ಸೋಬಾನೆ ಪದ ಗಮನ ಸೆಳೆಯಿತು. ಸೌಭಾಗ್ಯ, ಪದ್ಮ ತಂಡದ ಭಕ್ತಿ ಸಂಗೀತ, ನಾರಾಯಣ್ ತಂಡದ ಕ್ರಾಂತಿ ಗೀತೆಗಳು, ಕಲಾಧರೆ ಕಲ್ಚರಲ್ ಟ್ರಸ್ಟ್‍ನ ಚಾಮರಾಜು ನೃತ್ಯರೂಪಕ ಪ್ರಸ್ತುತ ಪಡಿಸಿದರು.

ಇದಕ್ಕೂ ಮುನ್ನ ಸಹಕಾರ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಡಮರುಗದ ಸದ್ದು ಮಾಡಿದರೆ, ಸಂಸದ ಪ್ರತಾಪ್‍ಸಿಂಹ ಡೊಳ್ಳು ಬಾರಿಸಿ ಜನಪರ ಉತ್ಸವಕ್ಕೆ ಚಾಲನೆ ನೀಡಿದರು. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ.ಹೇಮಂತಕುಮಾರ್ ಗೌಡ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎನ್.ವಿ.ಫಣೀಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇ ಶಕ ಹೆಚ್.ಚನ್ನಪ್ಪ ಉಪಸ್ಥಿತರಿದ್ದರು.

Translate »