ಮೈಸೂರು ವೈದ್ಯಕೀಯ ಕಾಲೇಜು ಅಧೀನದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ಶೀಘ್ರ 500 ಎಲ್‍ಪಿಎಂ ಆಕ್ಸಿಜನ್ ಜನರೇಟರ್ ಪ್ಲಾಂಟ್ ಸ್ಥಾಪನೆ
ಮೈಸೂರು

ಮೈಸೂರು ವೈದ್ಯಕೀಯ ಕಾಲೇಜು ಅಧೀನದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ಶೀಘ್ರ 500 ಎಲ್‍ಪಿಎಂ ಆಕ್ಸಿಜನ್ ಜನರೇಟರ್ ಪ್ಲಾಂಟ್ ಸ್ಥಾಪನೆ

June 10, 2021

ಮೈಸೂರು,ಜೂ.9(ಪಿಎಂ)- ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆಗೆ ದೆಹಲಿಯ ಅಮೇರಿಕನ್ ಇಂಡಿಯಾ ಫೌಂಡೇಷನ್ ವತಿಯಿಂದ ಒಂದೂವರೆ ಕೋಟಿ ರೂ. ವೆಚ್ಚದ ಆಕ್ಸಿಜನ್ ಉತ್ಪಾದನಾ ಉಪಕರಣವನ್ನು ಕೊಡುಗೆಯಾಗಿ ನೀಡಲಾಗುತ್ತಿದೆ. ಸದರಿ ಉಪಕರಣವನ್ನು ಸಂಸ್ಥೆ ಅಧೀನದ ಮಹಾ ರಾಜಕುಮಾರಿ ಕೃಷ್ಣಾಜಮ್ಮಣ್ಣಿಯವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿಂಭಾಗ ದಲ್ಲಿ ಅಳವಡಿಸಲು ಸಿದ್ಧತೆ ನಡೆದಿದ್ದು, ಈ ಉಪಕರಣವು ವಾತಾವರಣದಿಂದ ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾ ದಿಸುವ ಸಾಮಥ್ರ್ಯ ಹೊಂದಿದೆ.

ಕೆಆರ್‍ಎಸ್ ರಸ್ತೆಯಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಒಟ್ಟಾರೆ 250 ಹಾಸಿಗೆ ಗಳ ಸೌಲಭ್ಯ ಹೊಂದಿದೆ. ಅದರಲ್ಲಿ 150 ಆಕ್ಸಿಜನ್ ಸೌಲಭ್ಯ ಮತ್ತು 100 ಐಸಿಯು ಸೌಲಭ್ಯದ ಹಾಸಿಗೆಗಳಾಗಿವೆ. ಸದರಿ ಆಸ್ಪತ್ರೆ ಹಿಂಭಾಗದಲ್ಲಿ 500 ಎಲ್‍ಪಿಎಂ (ಲೀಟರ್ ಪರ್ ಮಿನಿಟ್) ಆಕ್ಸಿಜನ್ ಜನರೇಟರ್ ಪ್ಲಾಂಟ್ ಸ್ಥಾಪಿಸುವ ಸಂಬಂಧ ಉಪಕರಣ ವನ್ನು ಕೊಡುಗೆಯಾಗಿ ನೀಡಬೇಕೆಂದು ಮೈಸೂರು ವೈದ್ಯಕೀಯ ಕಾಲೇಜಿನ ಡೀನ್ ಮತ್ತು ನಿರ್ದೇಶಕ ಡಾ.ಸಿ.ಪಿ.ನಂಜರಾಜ್ ಅಮೇರಿಕನ್ ಇಂಡಿಯಾ ಫೌಂಡೇಷನ್‍ಗೆ ಪತ್ರ ಮುಖೇನ ಮನವಿ ಸಲ್ಲಿಸಿದ್ದರು.

ಮನವಿ ಪರಿಗಣಿಸಿರುವ ಅಮೇರಿಕನ್ ಇಂಡಿಯಾ ಫೌಂಡೇಷನ್, ಉಪಕರಣ ನೀಡಲು ಮುಂದಾಗಿದ್ದು, ಉತ್ತರ ಪ್ರದೇ ಶದ ಕಾನ್ಪುರ್ ಐಐಟಿಯಲ್ಲಿ (ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಸದರಿ ಉಪಕರಣದ ತಯಾರು ಪ್ರಕ್ರಿಯೆ ನಡೆಸು ತ್ತಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿಂಭಾಗದಲ್ಲಿ ಲಭ್ಯವಿರುವ 30×40 ಅಳತೆಯ ನಿವೇಶನದಲ್ಲಿ ಆಕ್ಸಿಜನ್ ಉತ್ಪಾ ದನಾ ಉಪಕರಣ ಅಳವಡಿಸುವ ಸಂಬಂಧ ಬುಧವಾರ ಶಾಸಕ ಎಲ್.ನಾಗೇಂದ್ರ ಸ್ಥಳ ಪರಿಶೀಲನೆ ನಡೆಸಿದರಲ್ಲದೆ, ಡಾ.ಸಿ.ಪಿ.ನಂಜ ರಾಜ್ ಅವರು ಈ ಸಂಬಂಧ ನಡೆಸಿದ ಪ್ರಕ್ರಿಯೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ಒಂದೂವರೆ ಕೋಟಿ ರೂ. ವೆಚ್ಚದ ಆಕ್ಸಿ ಜನ್ ಜನರೇಟರ್ ಉಪಕರಣ ಕೊಡುಗೆ ಯಾಗಿ ನೀಡುತ್ತಿರುವ ಅಮೇರಿಕನ್ ಇಂಡಿಯಾ ಫೌಂಡೇಷನ್ ಸಂಸ್ಥೆಗೆ ಧನ್ಯವಾದ ಅರ್ಪಿ ಸುತ್ತೇನೆ. ಡಾ.ಸಿ.ಪಿ.ನಂಜರಾಜ್ ಅವರು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಪ್ಲಾಂಟ್ ಸ್ಥಾಪನೆಯಾದಲ್ಲಿ ಸುಮಾರು 50 ಮಂದಿಗೆ ಆಕ್ಸಿಜನ್ ಪೂರೈಸಲು ಅವ ಕಾಶವಾಗಲಿದೆ ಎಂದರು. ಮೇಯರ್ ಚುನಾ ವಣೆ ಸಂಬಂಧ ಪ್ರತಿಕ್ರಿಯಿಸಿ, ವೈಯಕ್ತಿಕ ಅಭಿಪ್ರಾಯ ಏನೂ ಇಲ್ಲ. ಪಕ್ಷದ ತೀರ್ಮಾನ ದಂತೆ ನಾವು ನಡೆಯಬೇಕಿದೆ ಎಂದರು.

ಇನ್ನೂ 2 ಆಕ್ಸಿಜನ್ ಜನರೇಟರ್ ಪ್ಲಾಂಟ್: ಬಳಿಕ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಡಾ.ಸಿ.ಪಿ.ನಂಜರಾಜ್, ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್‍ಗೆ ಆಕ್ಸಿಜನ್ ಪೂರೈಕೆ ತಡವಾಗುವ ಸಂದರ್ಭದಲ್ಲಿ ಆಕ್ಸಿಜನ್ ಜನರೇಟರ್ ಪ್ಲಾಂಟ್ ಅತ್ಯಂತ ಉಪಯುಕ್ತ. ಟ್ರಾಮಾ ಕೇರ್ ಸೆಂಟರ್‍ನಲ್ಲಿ ಈಗಾಗಲೇ 350 ಎಲ್‍ಪಿಎಂ ಸಾಮಥ್ರ್ಯದ ಆಕ್ಸಿಜನ್ ಜನರೇಟರ್ ಪ್ಲಾಂಟ್ ಇದೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೆಆರ್ ಆಸ್ಪತ್ರೆ ಆವರಣದಲ್ಲಿ ಸಾವಿರ ಎಲ್‍ಪಿಎಂ ಸಾಮಥ್ರ್ಯದ ಆಕ್ಸಿಜನ್ ಜನರೇಟರ್ ಪ್ಲಾಂಟ್ ಬರಲಿದೆ. ಜೊತೆಗೆ ಮೈಸೂರು ಮಹಾನಗರ ಪಾಲಿಕೆ ವತಿಯಿಂದ 500 ಎಲ್‍ಪಿಎಂ ಸಾಮಥ್ರ್ಯದ ಆಕ್ಸಿಜನ್ ಜನ ರೇಟರ್ ಪ್ಲಾಂಟ್ ಅನ್ನು ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸುವ ಯೋಜನೆಯೂ ಇದೆ ಎಂದು ಮಾಹಿತಿ ನೀಡಿದರು.

ಈ ರೀತಿಯ ಆಕ್ಸಿಜನ್ ಜನರೇಟರ್ ಪ್ಲಾಂಟ್ ಅತ್ಯಂತ ಅಗತ್ಯವಾಗಿದೆÉ. ಕಾರಣ ಸ್ಟೀಲ್ ಪ್ಲಾಂಟ್ಸ್‍ಗಳು ಇರುವೆಡೆ ಮಾತ್ರ ಲಿಕ್ವಿಡ್ ಆಕ್ಸಿಜನ್ ಲಭ್ಯವಾಗುತ್ತದೆ. ಅಲ್ಲಿಂದ ತರುವಾಗ ಯಾವುದಾದರೂ ಕಾರಣಕ್ಕೆ ತಡವಾದರೆ ಆಗ ಆಕ್ಸಿಜನ್ ಜನರೇಟರ್ ಪ್ಲಾಂಟ್‍ನಿಂದ ಅನುಕೂಲ ಆಗಲಿದೆ. ಜೊತೆಗೆ ಬೇರೆಡೆಯಿಂದ ಆಕ್ಸಿಜನ್ ಆಮದು ಮಾಡಿಕೊಳ್ಳುವ ಅವಶ್ಯಕತೆಯೂ ಕಡಿಮೆ ಯಾಗಲಿದೆ. ಕಾನ್ಪರ್ ಐಐಟಿಯಲ್ಲಿ ತಯಾ ರಾಗುತ್ತಿರುವ ಸದರಿ 500 ಎಲ್‍ಪಿಎಂ ಆಕ್ಸಿ ಜನ್ ಜನರೇಟರ್ ಉಪಕರಣ ಜೂ.16 ಅಥವಾ 17ರಂದು ಇಲ್ಲಿಗೆ ಬರುವ ಮಾಹಿತಿ ಇದ್ದು, ಅಮೇರಿಕನ್ ಇಂಡಿಯಾ ಫೌಂಡೇ ಷನ್ ಸಿಎಸ್‍ಆರ್ ಚಟುವಟಿಕೆಯಡಿ ಈ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಆರೋಗ್ಯ ಇಲಾಖೆ ಇಂಜಿನಿಯರಿಂಗ್ ಮೈಸೂರು ಉಪವಿಭಾಗದ ಕಾರ್ಯ ಪಾಲಕ ಅಭಿಯಂತರ ಎಂ.ಬಿ.ಶ್ರೀನಾಥ್, ಎಇಇ ಜೆ.ಕುಮಾರ್, ಸಹಾಯಕ ಅಭಿ ಯಂತರ ಸಿ.ಎಸ್.ಶ್ರೀನಿವಾಸನ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆರ್‍ಎಂಓ ಡಾ. ಮೋಹನ್ ಮತ್ತಿತರರು ಹಾಜರಿದ್ದರು.

Translate »